ವಾಪಸ್ಸು ಕೆಲಸಕ್ಕೆ ಬನ್ನಿ ಬಾಡಿಗಾರ್ಡ್ ಚಲಪತಿ ಎಂದು ಅಶ್ವಿನಿ ಮೇಡಂ ಕಣ್ಣೀರು

ಅಪ್ಪುವಿನ ಮನೆಯಲ್ಲಿ ಬಾಡಿಗಾರ್ಡ್ ಆಗಿ ಕೆಲಸ ಮಾಡುತ್ತಿದ್ದ ಚಲಪತಿಯವರು ಪುನೀತ ಪರ್ವ ಕಾರ್ಯಕ್ರಮಕ್ಕೆ ಹಾಜರಾಗಿ ತಮ್ಮ ಮನೆಯ ಫಂಕ್ಷನ್ ಎನ್ನುವಂತೆ ಸಂಭ್ರಮಿಸಿ ಅಲ್ಲಿಂದ ಹೊರಡುವಾಗ ನಾವು ಹೋಗಿ ಬರುತ್ತೇವೆ ಮೇಡಂ ನಾವು ನಮ್ಮ ಊರಿಗೆ ಹೋಗುತ್ತೇವೆ ಎಂದು ಅಪ್ಪು ಅವರ ಕುಟುಂಬಕ್ಕೆ ಹೇಳಿದ್ದಾರೆ.

 

 

ಇದನ್ನು ಕೇಳಿದ ಅಶ್ವಿನಿ ಅವರು ಚಲಪತಿ ಅವರ ಕೆಲಸವನ್ನು ಬಿಡಬೇಡಿ ಎಂದು ಹೇಳಿದ್ದಾರೆ. ಈ ಚಲಪತಿ ಅವರು ಅಪ್ಪುವಿನ ಪ್ರೀತಿಯ ಬಾಡಿಗಾರ್ಡ್ ಆಗಿದ್ದರು ಹಲವಾರು ವರ್ಷಗಳಿಂದ ಇವರ ಮನೆಯಲ್ಲಿ ಕೆಲಸ ಮಾಡಿಕೊಂಡಿದ್ದರು. ಅಶ್ವಿನಿ ಮೇಡಂ ಜೊತೆ ಸಪೋರ್ಟಿವ್ ಆಗಿ ನಿಂತಿದ್ದರು, ಕಾರ್ಯಕ್ರಮ ಮುಗಿದ ಮರುದಿನ ಊರಿಗೆ ಹೊರಟು ನಿಂತರು ಅಶ್ವಿನಿ ಮೇಡಂ ಗೆ ನಾನು ಊರಿಗೆ ಹೋಗುತ್ತಿದ್ದೇನೆ ಎಂದು ತಿಳಿಸಿದಾಗ ಅವರು ಕಂಬನಿ ಮಿಡಿಯುತ್ತಾರೆ.

 

 

 

ನೀವು ನಮ್ಮ ಫ್ಯಾಮಿಲಿಯ ಸದಸ್ಯ ಇದ್ದಂತೆ ನೀವು ನಮ್ಮ ಮನೆಗೆ ಯಾವಾಗ ಬೇಕಾದರೂ ಬರಬಹುದು ಹೋಗಬಹುದು ಎಂದು ಅಶ್ವಿನಿ ಮೇಡಂ ಚಲಪತಿ ಅವರಿಗೆ ತಿಳಿಸಿದ್ದಾರೆ. ಮತ್ತೆ ನೀವು ಕೆಲಸಕ್ಕೆ ಸೇರಿಕೊಳ್ಳಿ ಎಂದು ಕೂಡ ಹೇಳಿದ್ದಾರೆ ಯಾವುದೇ ಎಮರ್ಜೆನ್ಸಿ ಸಮಯದಲ್ಲಿ ನೀವು ಕಾಲ್ ಮಾಡಿದರು ಕೂಡ ನಾನು ನಿಮ್ಮ ಮನೆಗೆ ವಾಪಸ್ ಬರುತ್ತೇನೆ ಅಕ್ಕ ಇಲ್ಲಿ ನನಗೆ ತುಂಬಾ ಕೆಲಸ ಜಾಸ್ತಿ ಇಲ್ಲಿನ ಕೆಲಸವನ್ನು ನನಗೆ ನಿಭಾಯಿಸಲು ಆಗುವುದಿಲ್ಲ ಅಪ್ಪು ಬಾಸ್ ಕೂಡ ನನಗೆ ತುಂಬಾನೇ ನೆನಪಾಗುತ್ತಾರೆ. ಚಲಪತಿ ಅವರನ್ನು ನೋಡಿ ಅಪ್ಪು ಅಭಿಮಾನಿಗಳು ತುಂಬಾ ಖುಷಿಪಟ್ಟರು ಹಾಗೂ ಅವರ ಜೊತೆ ಕೂಡ ಸೆಲ್ಫಿಗಳನ್ನು ತೆಗೆದುಕೊಂಡರು. ಇದನ್ನು ಕೇಳಿದ ವಂದಿತಾ ಅಂಕಲ್ ಹೋಗಬೇಡಿ ಎಂದು ಹೇಳಿದ್ದಾರೆ ಅಪ್ಪು ಫ್ರೀ ಇದ್ದಾಗ ಮಗಳನ್ನು ಆಚೆ ಕರೆದುಕೊಂಡು ಹೋಗುತ್ತಿದ್ದರು. ಆಗ ಜಲಪತಿಯವರು ಕೂಡ ಅವರ ಜೊತೆ ಹೋಗುತ್ತಿದ್ದರು ಚಲಪತಿಯವರು ಅಪ್ಪುವಿನೊಡನೆ ಯಾವಾಗಲೂ ಸಪೋರ್ಟ್ ನಲ್ಲಿ ಇರುತ್ತಿದ್ದರು.

 

 

ಅಪ್ಪುವನ್ನು ಹಾಗೂ ಅವರ ಮಕ್ಕಳನ್ನು ಬಾಡಿಗಾರ್ಡ್ ರೀತಿ ಕಾವಲು ಕಾಯುತ್ತಿದ್ದರು.ಚಲಪತಿ ಕೆಲಸ ಬಿಟ್ಟಿದ್ದಕ್ಕೆ ವಂದಿತ ಅವರಿಗೂ ಕೂಡ ಬೇಸರವಿತ್ತು ಚಲಪತಿಯವರನ್ನು ವಂದಿತ ಅಂಕಲೆಂದು ಕರೆಯುತ್ತಿದ್ದರು. ಅಂಕಲ್ ಮತ್ತೆ ಕೆಲಸಕ್ಕೆ ವಾಪಸ್ ಬನ್ನಿ ಎಂದು ಕೇಳಿಕೊಂಡಿದ್ದಾರೆ ವಂದಿತ ಇದಕ್ಕೆ ಉತ್ತರಿಸಿದ ಛಲಪತಿಯವರು ಇಲ್ಲ ಪುಟ್ಟಿ ನಾನು ಬರುವುದಿಲ್ಲ ಎಮರ್ಜೆನ್ಸಿ ಕೆಲಸ ಇದ್ದಾಗ ಹೇಳಿ ಖಂಡಿತ ಬರುತ್ತೇನೆ ಎಂದಿದ್ದಾರೆ ನಿಮ್ಮ ಮನೆ ಹತ್ತಿರ ಬಂದು ಕೂರಲಿಕ್ಕೆ ತುಂಬಾ ಬೇಸರವಾಗುತ್ತದೆ ನನಗೆ ಯಜಮಾನ್ರು ದಿನಾಲೂ ತುಂಬಾ ನೆನಪಾಗುತ್ತಾರೆ. ಯಜಮಾನ್ರು ನನ್ನ ಕನಸಿನಲ್ಲಿ ದಿನಾಲು ಬರುತ್ತಾರೆ ನಿನಗೆ ಗೊತ್ತಾ ಇದರಿಂದ ನಾನು ಸುಮ್ಮನೆ ಮಾನಸಿಕ ಖಿನ್ನತೆಗೆಕೇಂದ್ರದಲ್ಲಿ ಒಳಗಾಗಿ ಬಿಡುತ್ತೇನೆ ಇದರಿಂದಾಗಿ ನಾನು ಊರಿನಲ್ಲಿ ಕೆಲಸ ಮಾಡಿಕೊಂಡು ಇರುತ್ತೇನೆ.

 

 

ನಾನು ಅಲ್ಲೇ ಇರುತ್ತೇನೆ ಎಮರ್ಜೆನ್ಸಿ ಕೆಲಸಗಳಿದ್ದಾಗ ಖಂಡಿತವಾಗಿಯೂ ಬರುತ್ತೇನೆ ಹೀಗೆಂದು ಅಪ್ಪು ಮನೆಯವರಿಗೆ ಛಲಪತಿಯವರು ಹೇಳಿ ಊರಿಗೆ ವಾಪಸ್ ಹೋಗಿದ್ದಾರೆ. ಚಲಪತಿ ಅವರು ಕುಟುಂಬದಲ್ಲಿ ಒಬ್ಬರಾಗಿಯೇ ಇದ್ದರು ಅವರು ಕೆಲಸ ಬಿಟ್ಟಿದ್ದು ಅಪ್ಪು ಕುಟುಂಬದವರಿಗೆ ತುಂಬಾ ಬೇಸರವಾಗಿದೆ ಆದರೆ ಏನು ಮಾಡೋಕೆ ಆಗುವುದಿಲ್ಲ ಅವರು ಇವರ ಕುಟುಂಬದವರು ಉತ್ತಮ ಒಡನಾಟ ಇಟ್ಟುಕೊಂಡಿದ್ದಾರೆ. ನನ್ನ ನಿಮ್ಮ ನಂಟು ಹಾಗೆ ಇರುತ್ತದೆ. ನಾನು ಯಾವತ್ತೂ ದೊಡ್ಡ ಮನೆಯ ಋಣವನ್ನು ಮರೆಯುವುದಿಲ್ಲ ಇನ್ನು ಚಲಪತಿ ಅವರು ಹೇಳಿದ್ದಾರೆ. ದೊಡ್ಮನೆ ಅನ್ನದ ಋಣ ನನ್ನ ಮೇಲೆ ಇದೆ ನಾನು ಬೆಂಗಳೂರಿಗೆ ಬಂದಾಗ ದೊಡ್ಡ ಮನೆಗೆ ಬಂದೇ ಬರುತ್ತೇನೆ ನಾನು ಸಾಯುವವರೆಗೂ ದೊಡ್ಡ ಮನೆಯಲ್ಲಿ ಕೆಲಸ ಮಾಡಿಕೊಂಡೇ ಇರುತ್ತೇನೇ ಎಂದರು.