ಪುನೀತ ಪರ್ವ ಕಾರ್ಯಕ್ರಮದಲ್ಲಿ ಶಿವಣ್ಣನಿಗೆ ದೃಷ್ಟಿ ತೆಗೆದ ಅನುಶ್ರೀ, ಪತಿ ಡಾನ್ಸ್ ಗೆ ಎದ್ದು ನಿಂತು ಗೌರವಿಸಿದ ಗೀತಕ್ಕ

 

ಪುನೀತ್ ಪರ್ವ ಅಭಿಮಾನಿಗಳಿಗಾಗಿ ಮಾಡಿರುವ ಕಾರ್ಯಕ್ರಮ, ಕಾರ್ಯಕ್ರಮಕ್ಕೆ ಬರುವ ಅಭಿಮಾನಿಗಳೆ ಮುಖ್ಯ ಅತಿಥಿಗಳು ಪುನೀತ ಪರ್ವ ಕಾರ್ಯಕ್ರಮದಲ್ಲಿ ಭಾರತದ ಅನೇಕ ನಟ ನಟಿಯರು ಕೂಡ ಭಾಗವಹಿಸಿದ್ದರು. ಅಪ್ಪು ಬಗ್ಗೆ ತಮ್ಮ ಮನಸ್ಸಿನ ಮಾತುಗಳನ್ನು ಹಂಚಿಕೊಂಡು ಕಣ್ಣೀರು ಹಾಕುತ್ತಿದ್ದರು.

 

 

ಈ ಕಾರ್ಯಕ್ರಮಕ್ಕೆ ಎಲ್ಲ ನಟಿ ನಟಿಯರು ಕೂಡ ಬಿಳಿ ಬಣ್ಣದ ಬಟ್ಟೆಯನ್ನು ತೊಟ್ಟು ಬಂದಿದ್ದರು ಬಿಳಿ ಬಣ್ಣ ಅಂದ್ರೆ ಅಪ್ಪು ನೆನಪಾಗ್ತಾರೆ ಅಪ್ಪುಗೆ ಕೂಡ ಬಿಳಿ ಬಣ್ಣ ಅಂದ್ರೆ ತುಂಬಾ ಇಷ್ಟ ಕಾರ್ಯಕ್ರಮದಲ್ಲಿ ಭಾಗವಹಿಸಿದ ಅಭಿಮಾನಿಗಳು ಅಪ್ಪು ವಿ ಮಿಸ್ ಯು ಎಂದು ಹೇಳಿದ್ದಾರೆ. ಪುನೀತ ಪರ್ವ ಕಾರ್ಯಕ್ರಮದಲ್ಲಿ ಹಲವಾರು ನಟ ನಟಿಯರು ನೃತ್ಯ ಮಾಡಿ ಎಲ್ಲರನ್ನು ರಂಜಿಸಿದರು. ಅದರಲ್ಲಿ ಶಿವರಾಜಕುಮಾರ್ ರವರು ಕೂಡ ನೃತ್ಯ ಮಾಡಿದರು ಆದರೆ ಎಲ್ಲರಿಗಿಂತ ಶಿವರಾಜ್ ಕುಮಾರ್ ಹೈ ವೋಲ್ಟೇಜ್ ಹೈ ಎನರ್ಜಿ ಯಲ್ಲಿ ಅವರು ಶಿವಣ್ಣ ಕುಣಿದರು.

 

 

ಇವರ ಡ್ಯಾನ್ಸ್ ಕುರಿತು ಮಾತನಾಡಿದ ಆಂಕರ್ ಅನುಶ್ರೀ ಅವರು ತುಂಬಾ ಚೆನ್ನಾಗಿ ಡ್ಯಾನ್ಸ್ ಮಾಡಿದ್ದಾರೆ ಇವರಿಗೆ ದೊಡ್ಡ ಚಪ್ಪಾಳೆ ಬರಬೇಕು ಎಂದು ಕಿರುಚಿದರು. ಹ್ಯಾಟ್ರಿಕ್ ಹೀರೋ ಸೆಂಚುರಿ ಸ್ಟಾರ್ ಡಾಕ್ಟರ್ ಶಿವರಾಜಕುಮಾರ್ ಗೆ ದೊಡ್ಡ ಚಪ್ಪಾಳೆ ಬರಲಿ ಎಂದು ಹೇಳಿದರು.

 

 

ಎನರ್ಜಿಗೆ ಇನ್ನೊಂದು ಹೆಸರು ಎನರ್ಜಿಗೆ ಇನ್ನೊಂದು ಪದ ಅಂದ್ರೆ ಅದು ಹ್ಯಾಟ್ರಿಕ್ ಹೀರೋ ಸೆಂಚುರಿ ಸ್ಟಾರ್ ಡಾಕ್ಟರ್ ಶಿವರಾಜಕುಮಾರ್. ಶಿವಣ್ಣ ನಮಗೋಸ್ಕರ ಅಪ್ಪುವಿಗೋಸ್ಕರ ವೇದಿಕೆ ಮೇಲೆ ಡಾನ್ಸ್ ಮಾಡಿದ್ದಾರೆ. ಇಲ್ಲಿರುವ ಎಲ್ಲಾ ಅಭಿಮಾನಿಗಳ ಒಟ್ಟು ಎನರ್ಜಿಯನ್ನು ಹಾಕಿ ಡ್ಯಾನ್ಸ್ ಮಾಡಿದ ಶಿವಣ್ಣನಿಗೆ ದೊಡ್ಡ ಚಪ್ಪಾಳೆ ಹಾಗೂ ಎಲ್ಲರೂ ಶಿವಣ್ಣ ಎಂದು ಕೂಗಿ ಎಂದು ಆಂಕರ್ ಅನುಶ್ರೀ ಹೇಳಿದರು.

 

 

ಇಂಥ ಎನರ್ಜಿಟಿಕ್ ಪರ್ಫಾರ್ಮೆನ್ಸ್ ಅನ್ನು ಮತ್ತೆ ನೋಡಲು ಸಾಧ್ಯವೇ ಇಲ್ಲ ಹ್ಯಾಟ್ಸಾಫ್ ಶಿವಣ್ಣ ಎಂದೆಲ್ಲ ಹೊಗಳಿದರು. ಸ್ಟೇಜಿನ ಮೇಲೆ ಅನುಶ್ರೀರವರು ಡಾಕ್ಟರ್ ಶಿವರಾಜಕುಮಾರ್ ಅವರಿಗೆ ದೃಷ್ಟಿ ತೆಗೆದರು ಡಿ ಕೆ ಡಿ ಯ ಪ್ರತಿ ಎಪಿಸೋಡ್ ನ ಕೊನೆಯಲ್ಲಿ ನಾವು ಶಿವಣ್ಣನಿಗೆ ದೃಷ್ಟಿ ತೆಗೆದು ನಂತರ ಮಾತನಾಡಿಸುತ್ತೇವೆ ಶಿವಣ್ಣ ಇಷ್ಟು ಎನರ್ಜಿಯ ಮೂಲಕ ನಮ್ಮನೆಲ್ಲ ರಂಜಿಸುತ್ತಿದ್ದಾರೆ ರಂಜಿಸುತ್ತಾರೆ. ಅವರಿಗೆ ತುಂಬು ಹೃದಯದ ಧನ್ಯವಾದಗಳು ಎಂದು ಹೇಳುತ್ತೇನೆ ಎಂದು ಆಂಕರ್ ಅನುಶ್ರೀ ಅವರು ಮಾತನಾಡಿದರು.