ಬರ್ತಡೆ ಪಾರ್ಟಿಯಲ್ಲಿ ಮೇಘನಾ ಮಗ ರಾಯನ್ ಸಕ್ಕತ್ ಡ್ಯಾನ್ಸ್
ನಟ ಚಿರಂಜೀವಿ ಸರ್ಜಾ ಹಾಗೂ ಮೇಘನಾ ರಾಜ್ ರವರ ಪುತ್ರ ರಾಯನ್ ರಾಜ್ ಸರ್ಜಾ ಎರಡನೇ ವರ್ಷಕ್ಕೆ ಕಾಲಿಟ್ಟಿದ್ದಾನೆ.
ನೆನ್ನೆ ತಾನೆ ರಾಯನ್ ತನ್ನ ಎರಡನೇ ವರ್ಷದ ಹುಟ್ಟುಹಬ್ಬವನ್ನು ಅದ್ದೂರಿಯಾಗಿ ಆಚರಿಸಿಕೊಂಡಿದ್ದಾನೆ. ರಾಯನ್ ರಾಜ್ ಸರ್ಜಾನ ಬರ್ತಡೇಯನ್ನೂ ಮೇಘನಾರವರು ತನ್ನ ತಂದೆಯ ಮನೆಯಲ್ಲಿ ಆಚರಿಸಿದ್ದಾರೆ. ಬರ್ತಡೆಗೆ ಸರ್ಜನ್ ಕುಟುಂಬದವರೆಲ್ಲ ಭಾಗಿಯಾಗಿದ್ದು ರಾಯನ್ ಗೆ ಶುಭಾಶಯ ಕೋರಿದ್ದಾರೆ.ನಟಿ ಮೇಘನಾ ರಾಜ್ ಅವರು ಚಿರಂಜೀವಿ ಸರ್ಜಾ ಆಗಲಿಕೆಯಿಂದ ವರ್ಷಗಳಿಂದ ಕಾಲ ಕಳೆಯುತ್ತಿದ್ದಾರೆ. ಇಂದು ನಟಿ ಮೇಘನಾ ಅವರಿಗೆ ತುಂಬಾ ಖುಷಿಯ ದಿನ ಏಕೆಂದರೆ ಮೇಘನಾ ಮೊದಲ ಬಾರಿ ತಾಯಿಯಾಗಿ ಬಡ್ತಿ ಪಡೆದ ದಿನ ಹಾಗೂ ಇಂದು ಮಗ ರಾಯನ್ ಹುಟ್ಟಿದ ದಿನ ಈ ಎರಡು ಕಾರಣಕ್ಕೆ ಮೇಘನಾ ರಾಜ್ ತುಂಬಾ ಖುಷಿಯಾಗಿದ್ದಾರೆ.
ಮಗನ ಬಗ್ಗೆ ತುಂಬಾ ಕಾಳಜಿ ವಹಿಸುವ ಮೇಘನಾ ರಾಯನ್ ಗೆ ಚಿಕ್ಕ ವಯಸ್ಸಿನಿಂದಲೇ ತಂದೆಯ ಗುಣಗಳನ್ನು ಬೆಳೆಸುತ್ತಿದ್ದಾರೆ. ಕಳೆದ ವರ್ಷ ಕೂಡ ಗಂಡ ಚಿರಂಜೀವಿ ಸರ್ಜಾ ಇಲ್ಲದೆ ಮೇಘನ ರಾಜ್ ತಮ್ಮ ಮಗ ರಾಯನ್ ಸರ್ಜಾ ಬರ್ತಡೇಯನ್ನು ಆಚರಿಸಿದ್ದರು. ಈಗ ತಮ್ಮ ಮಗ ರಾಯನ್ ಸರ್ಜನ ಎರಡನೇ ವರ್ಷದ ಬರ್ತಡೇಯನ್ನು ತುಂಬಾ ಅದ್ದೂರಿಯಾಗಿ ಮೇಘನಾ ಆಚರಿಸುತ್ತಿದ್ದಾರೆ.
ತಮ್ಮ ಸೋಶಿಯಲ್ ಮೀಡಿಯಾ ಖಾತೆಯಲ್ಲಿ ಮಗನ ಫೋಟೋ ಮತ್ತು ವಿಡಿಯೋವನ್ನು ಹಂಚಿಕೊಂಡು ಮಗನಿಗೆ ಬರ್ತಡೆ ವಿಷಸ್ ತಿಳಿಸಿದ್ದಾರೆ, ಇಷ್ಟೇ ಅಲ್ಲದೆ ಚಿರು ಅಭಿಮಾನಿಗಳು ಕೂಡ ರಾಯನ್ ಸರ್ಜನ ಫೋಟೋವನ್ನು ಹಂಚಿಕೊಂಡು ಶುಭಾಶಯಗಳನ್ನು ತಿಳಿಸುತ್ತಿದ್ದಾರೆ. ತಮ್ಮ ಕುಟುಂಬ ಮತ್ತು ಸ್ನೇಹಿತರ ಜೊತೆ ತುಂಬಾ ಸರಳವಾಗಿ ಮೇಘನ ರವರು ತಮ್ಮ ಮಗ ರಾಯನ್ ಸರ್ಜನ ಎರಡನೇ ವರ್ಷದ ಬರ್ತಡೇ ಯನ್ನು ಆಚರಿಸುತ್ತಿದ್ದಾರೆ.
ರಾಯನ್ ಬರ್ತಡೆಯನ್ನ ಸ್ನೇಹಿತರು ಹಾಗೂ ಕುಟುಂಬದವರ ಸಮ್ಮುಖದಲ್ಲಿ ಆಚರಿಸಿದ್ದು ರಾಯಣ್ಣನು ಎತ್ತಿ ಮುದ್ದಾಡಿ ಎಲ್ಲರೂ ಶುಭಾಶಯವನ್ನು ತಿಳಿಸಿದ್ದಾರೆ ಹಾಗೆ ರಾಯನ್ ಕೂಡ ತನ್ನ ಬರ್ತಡೇ ಯಲ್ಲಿ ಸಕ್ಕತ್ತಾಗಿ ಡ್ಯಾನ್ಸ್ ಮಾಡಿದ್ದಾನೆ. ಚಿಕ್ಕ ಮಕ್ಕಳ ಜೊತೆ ಸ್ಟೇಜ್ ಮೇಲೆ ರಾಯನ್ ಸಕ್ಕತಾಗಿ ಡ್ಯಾನ್ಸ್ ಮಾಡಿದ್ದಾನೆ ಎಲ್ಲರೂ ರಾಯನ್ ಡಾನ್ಸ್ ಗೆ ಚಪ್ಪಾಳೆ ಹೊಡೆದಿದ್ದಾರೆ.
View this post on Instagram
ಧ್ರುವ ಸರ್ಜಾ ಹಾಗೂ ತಾಯಿ ತಾಯಮ್ಮ ರಾಯನ್ ಗೆ ಗೋಲ್ಡ್ ರಿಂಗ್ ಅನ್ನು ಉಡುಗೊರೆಯಾಗಿ ನೀಡಿದ್ದಾರೆ. ಸ್ನೇಹಿತರು ಸಂಬಂಧಿಕರು ಕೂಡ ರಾಯನ್ ಗೆ ದೊಡ್ಡ ದೊಡ್ಡ ಉಡುಗೊರೆಗಳನ್ನು ನೀಡಿದ್ದಾರೆ ಮೇಘನಾ ರಾಜ್ ರವರು ಸೋಶಿಯಲ್ ಮೀಡಿಯಾದಲ್ಲಿ ರಾಯನ್ ವಿಡಿಯೋ ಹಾಗೂ ಫೋಟೋವನ್ನು ಹಂಚಿಕೊಂಡು “ರಾಯನ್ ನೋಡ ನೋಡುತ್ತಲೇಎಷ್ಟು ಬೇಗ ಎಷ್ಟು ಉದ್ದ ಬೆಳೆದಿದ್ದಾನೆ. ನನ್ನ ಮುದ್ದು ಕಂದಮ್ಮನಿಗೆ ಈಗ ಎರಡು ವರ್ಷ,ಇವನಿಗೆ ಎರಡು ವರ್ಷ ಆಗಿದ್ದು ಗೊತ್ತೇ ಆಗಲಿಲ್ಲ ತಾಯ್ತನದ ಈ ಅನುಭವ ಜೀವನದಲ್ಲಿ ತುಂಬಾ ಶ್ರೇಷ್ಠವಾದದ್ದು” ಎಂದು ಬರೆದುಕೊಂಡಿದ್ದಾರೆ.