೨೦೨೨ ರಿಂದ ರಿಷಬ್‌ಗೆ ಗಜಕೇಸರಿ ಯೋಗ ಶುರುವಾಗಿದೆ. ಇನ್ಮೇಲೆ ಮುಟ್ಟಿದೆಲ್ಲಾ ಚಿನ್ನ ಅನ್ನೋದ್ರಲ್ಲಿ ಯಾವುದೇ ಡೌಟ್‌ ಇಲ್ಲ.

ರಿಷಬ್‌ ಶೆಟ್ಟಿ ಸಿನಿಮಾ ಕ್ಷೇತ್ರ ಪ್ರವೇಶಕ್ಕೂ ಮೊದಲು ಕಲ್ಲು ಮುಳ್ಳಿನ ಹಾದಿಯಲ್ಲಿಯೇ ಸಾಗುತ್ತ ಬಂದವರು. ವ್ಯವಹಾರ, ಉದ್ಯೋಗ ಅದು ಇದು ಅಂತ ಎಲ್ಲವೂ ಅರ್ಧಮುರ್ಧ ಮಾಡಿದವರು. ಯಾವುದಕ್ಕೂ ಪೂರ್ತಿ ಮಾಡಲು ಹೋಗಿಲ್ಲ. ಒಂದೂ ಕೈಹಿಡಿದು ನಡೆಸಲಿಲ್ಲ. ಆದ್ರೆ, ಅದ್ಯಾವಾಗ ಚಲನಚಿತ್ರ ಉದ್ಯಮ ಪ್ರವೇಶವಾದ್ರೂ ಅಲ್ಲಿಂದ ಹಣೆಯ ಬರಹ ಬದಲಾಗಿ ಬಿಡ್ತು. ರಿಕ್ಕಿ, ಕಿರಿಕ್‌ ಪಾರ್ಟಿ, ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ. ಅಂತಹ ಚಿತ್ರಗಳನ್ನು ನಿರ್ದೇಶನ ಮಾಡಿ ಸೈ ಅನಿಸಿಕೊಂಡ್ರು. ಸ್ಯಾಂಡಲ್‌ವುಡ್‌ಗೆ ಒಂದು ಭಾರೀ ಪ್ರತಿಭೆ ಪ್ರವೇಶವಾಗಿದೆ ಅನ್ನೋ ಸೂಚನೆ ರವಾನಿಸಿದ್ರು.

 

 

ಆದ್ರೇ ಅವು ಹೊರ ರಾಜ್ಯಗಳಲ್ಲಿ ಹೊರ ದೇಶಗಳಲ್ಲಿ ದೊಡ್ಡ ಪ್ರಮಾಣದಲ್ಲಿ ಸದ್ದು ಮಾಡಲು ಸಾಧ್ಯವಾಗಿರಲಿಲ್ಲ. ಆದ್ರೆ, ಈಗ ಕಾಂತಾರ ರಾಜ್ಯದ ಗಡಿ ದಾಟಿ ಹೋಗಿದೆ. ಎಲ್ಲಾ ಕಡೆ ಶಬ್ದ ಮಾಡ್ತಿದೆ. ಅದಕ್ಕೆ ಕಾರಣಕ್ಕೆ ರಿಷಬ್‌ ಗಜಕೇಸರಿ ಯೋಗಕ್ಕೆ ಪ್ರವೇಶವಾಗಿರೋದು ಅಂದ್ರೆ ಸಂಪೂರ್ಣವಾಗಿ ತಪ್ಪಾಗದು.

 

 

೨೦೨೧ ರಿಂದ ರಿಷಬ್‌ಗೆ ಗಜಕೇಸರಿ ಯೋಗ ಶುರುವಾಗಿದೆ. ಇನ್ನು ಮುಂದೆ ಮುಟ್ಟಿದೆಲ್ಲಾ ಚಿನ್ನ ಅನ್ನೋದ್ರಲ್ಲಿ ಯಾವುದೇ ಡೌಟ್‌ ಇಲ್ಲ. ಹೌದು, ವ್ಯಕ್ತಿಯ ಜಾತಕದಲ್ಲಿ ಗಜಕೇಸರಿ ಯೋಗ ನಿರ್ಮಾಣವಾದಾಗ, ವಿವಿಧ ಮೂಲಗಳಿಂದ ಧನಲಾಭವಾಗುತ್ತೆ, ಸಮಾಜದಲ್ಲಿ ಗೌರವಗಳು ಹೆಚ್ಚಾಗ್ತಾವೆ. ಅಂತಹ ಪುರುಷ ಸಮಾಜದಲ್ಲಿ ಸಕಾರಾತ್ಮಕ ಪರಿವರ್ತನೆ ತರುವಲ್ಲಿ ಶ್ರಮವಹಿಸುತ್ತಾರೆ. ಕೆಲಸದಲ್ಲಿ ಸಮಗ್ರವಾದ ಶ್ರದ್ಧೆ ಮತ್ತು ಪ್ರಾಮಾಣಿಕತೆ ತೋರಿಸ್ತಾರೆ. ಪರಿಣಾಮ ಯಶಸ್ಸು ಇವರ ಬೆನ್ನು ಹತ್ತಿ ಬರಲಿದೆ. ಈ ಬಗ್ಗೆ ರಿಷಬ್‌ ತಂದೆ ಭಾಸ್ಕರ್‌ ಶೆಟ್ಟಿ ಏನು ಹೇಳಿದ್ದಾರೆ ಗೊತ್ತಾ?

 

 

ಕುಂಡಲಿ, ಭವಿಷ್ಯವನ್ನು ನಂಬೋದು ಬಿಡೋದು ಅವರವರಿಗೆ ಬಿಟ್ಟ ವಿಚಾರ. ಕೆಲವರು ತುಂಬಾ ಗಂಭೀರವಾಗಿ ನಂಬುತ್ತಾರೆ. ಜ್ಯೋತಿಷಿಗಳು ಏನು ಹೇಳ್ತಾರೋ ಹಾಗೇ ಚಾಚುತಪ್ಪದೇ ಮಾಡ್ತಾರೆ. ಇನ್ನು ಕೆಲವರು ಅದರ ತಂಟೆಗೆ ಹೋಗಿಲ್ಲ. ಈ ರೀತಿಯಾಗಿ ಭಿನ್ನ ಭಿನ್ನವಾದ ರೀತಿಯ ಜನ ಕಾಣಿಸ್ತಾರೆ. ಆದ್ರೆ, ಅದ್ಯಾವಾಗ ಕಾಂತಾರ ಸಿನಿಮಾ ಯಶಸ್ಸು ಕಂಡು ಕೇಳರಿಯದ ದಾಖಲೆಯಲ್ಲಿ ಯಶಸ್ಸು ಸಾಧಿಸ್ತೋ ಆವಾಗಲೇ ನೋಡಿ ರಿಷಬ್‌ ಜಾಕತ, ಭವಿಷ್ಯದ ವಿಚಾರಗಳು ಹೊರ ಬರಲು ಶುರವಾದ್ವು.

 

 

ಇಂತಹ ಸನ್ನಿವೇಶದಲ್ಲಿ ರಿಷಬ್‌ ತಂದೆ ಭಾಸ್ಕರ್‌ ಶೆಟ್ಟಿ ಮುಕ್ತವಾಗಿ ತಮ್ಮ ಮಗನ ಭವಿಷ್ಯ ಹೇಗಿದೆ ಅನ್ನೋದನ್ನು ಹಂಚಿಕೊಂಡಿದ್ದಾರೆ. ಅವರು ಹೇಳೋ ಪ್ರಕಾರ ೨೦೨೧ ರಲ್ಲಿಯೇ ರಿಷಬ್‌ ಜಾತಕದಲ್ಲಿ ಗಜ ಕೇಸರಿ ಯೋಗ ಆರಂಭವಾಗಿದೆ. ಹೀಗಾಗಿ ಆತನ ಅದೃಷ್ಟ ಉತ್ತುಂಗ ಮಟ್ಟದಲ್ಲಿ ಇರುತ್ತದೆ ಅಂತ ಹೇಳಿದ್ದಾರೆ. ಕಾಂತಾರ ಶಿವ ಜಾತಕದಲ್ಲಿ ಗಜಕೇಸರಿ ಪ್ರಾರಂಭವಾಗಿ ವರ್ಷವೇ ಕಳೆಯಿತು. ಮುಂದೆ ರಿಷಬ್‌ ಮುಟ್ಟಿದೆಲ್ಲಾ ಚಿನ್ನವಾಗುತ್ತಾ? ಅಂದ್ರೆ ನಿರ್ದೇಶನ ಮಾಡಿದ, ಹೀರೋ ಆಗಿ ಅಭಿನಯ ಮಾಡಿದ ಚಲನಚಿತ್ರಗಳೆಲ್ಲಾ ದೇಶಾದ್ಯಂತ ಬಾಕ್ಸ್‌ ಆಫೀಸ್‌ ನಲ್ಲಿ ದೂಳ್‌ ಎಬ್ಬಿಸ್ತಾವಾ? ಅನ್ನೋ ಪ್ರಶ್ನೆ ಇದೆ. ಆದ್ರೆ, ಗಜಕೇಸರಿ ಯೋಗ ಅದು ಹೌದು ಅನ್ನೋ ಸುಳಿವು ಕೊಡ್ತಿದೆ.