ಮತ್ತೆ ಮದುವೆಯಾಗಲು ಸಲಹೆ ನೀಡುವ ಜನರ ಗುಂಪು ನನ್ನ ಸುತ್ತ ಇದೆ, ನಾನು ಯಾರ ಮಾತು ಕೇಳಲಿ – ಮದುವೆಯ ನಿರ್ಧಾರ ನನ್ನದೇ ಎಂದ ಮೇಘನಾ ರಾಜ್

ನಟಿ ಮೇಘನಾ ರಾಜ್ ಅವರು ಚಿರಂಜೀವಿ ಸರ್ಜಾ ಆಗಲಿಕೆಯಿಂದ ವರ್ಷಗಳಿಂದ ಕಾಲ ಕಳೆಯುತ್ತಿದ್ದಾರೆ.ಮೇಘನಾ ರಾಜ್ ರವರು ತಮ್ಮ ಜೀವನದ ನೋವುಗಳಿಂದ ಚೇತರಿಸಿಕೊಂಡು ಮತ್ತೆ ಸಿನಿಮಾ, ಕಿರುತೆರೆಯಲ್ಲಿ ಬಿಸಿಯಾಗಿದ್ದಾರೆ. ಇದರ ಮೂಲಕವಾದರೂ ಅವರು ಹೊಸ ಜೀವನವನ್ನು ಆರಂಭ ಮಾಡಿದ್ದು ಸಾಮಾಜಿಕ ಜಾಲತಾಣದಲ್ಲಿ ಆಗಾಗ ತಮ್ಮ ಜೀವನದ ಆಗುಹೋಗುಗಳನ್ನು ಹಂಚಿಕೊಳ್ಳುತ್ತಿರುತ್ತಾರೆ. ಒಂದು ಸಂದರ್ಶನದಲ್ಲಿ ನಟಿ ಮೇಘನಾ ರಾಜ್ ರವರು ಮಾತನಾಡಿದ್ದು ತಮ್ಮ ಎರಡನೇ ಮದುವೆಯ ಬಗ್ಗೆ ನೇರವಾಗಿ ಹೇಳಿದ್ದಾರೆ.

 

 

ಎರಡು ವರ್ಷದಿಂದ ಎಲ್ಲವೂ ಸರಿಯಾಗಿದ್ದ ನಟಿ ಮೇಘನಾ ರಾಜ್‍ರವರ ಜೀವನದಲ್ಲಿ ಚಿರು ಸರ್ಜಾ ಅವರ ಸಾವು ಅವರ ಜೀವನದ ದಿಕ್ಕನ್ನೇ ಬದಲಾಯಿಸಿತು.ಚಿರಂಜೀವಿ ಸರ್ಜಾ ಅವರು ಕೇವಲ 35ನೇ ವಯಸ್ಸಿಗೆ ಅಕಾಲಿಕವಾಗಿ ಮರಣ ಹೊಂದಿದರು ಆ ನೋವಿನ ಕ್ಷಣದಲ್ಲು ನಟಿ ಮೇಘನಾ ರಾಜ್ ತಮ್ಮ ಮಗುವಿನ ಆಗಮನದ ನಿರೀಕ್ಷೆಯಲ್ಲಿದ್ದರು.

 

 

ಚಿರು ಆಗಲಿಕೆಯ ನೋವಿನಲ್ಲಿ ಕೂಡ ತನ್ನ ಮಗುವಿಗಾಗಿ ಗಟ್ಟಿ ಧೈರ್ಯವನ್ನು ಮೇಘನ ರಾಜ್ ಮಾಡಿದ್ದರು. ಅಕ್ಟೋಬರ್ 22 ರಂದು ನಟಿ ಮೇಘನ ತಮ್ಮ ಮಗ ರಾಯನ್ ರಾಜ್ ಸರ್ಜನಿಗೆ ಜನ್ಮವನ್ನು ನೀಡಿದರು. ಅಂದಿನಿಂದ ತನ್ನೆಲ್ಲ ಸಂತೋಷವನ್ನು ಮಗ ರಾಯನ್ ನಲ್ಲಿ ಕಾಣುತ್ತಿದ್ದಾರೆ.

 

 

ಮಗನಿಗೆ ತಂದೆಯ ವಿಚಾರಗಳನ್ನು ಗುಣಗಳನ್ನು ಹೇಳಿಕೊಡುತ್ತಿರುವ ಮೇಘನಾ ರಾಜ್ ಜೀವನದ ಮೌಲ್ಯಗಳನ್ನು ಕಲಿಸುತ್ತಿದ್ದಾರೆ. ಕಳೆದ ವರ್ಷ ತಮ್ಮ ವೃತ್ತಿ ಜೀವನಕ್ಕೆ ಮತ್ತೆ ಕಾಲಿಟ್ಟು ಡ್ಯಾನ್ಸಿಂಗ್ ಚಾಂಪಿಯನ್ ಶೋನಲ್ಲಿ ಜಡ್ಜ್ ಆಗಿ ಮೇಘನಾ ರವರು ಕಾಣಿಸಿಕೊಂಡಿದ್ದರು ಇದೀಗ ಗಿಚ್ಚ ಗಿಲಿ ಗಿಲಿ ಶೋನಲ್ಲಿ ಕೂಡ ನಟಿ ಮೇಘನ ಭಾಗವಹಿಸುತ್ತಿದ್ದಾರೆ ಹಾಗೂ ಸಿನಿಮಾಗಳಲ್ಲಿ ಬ್ಯುಸಿಯಾಗಿದ್ದಾರೆ.

 

 

ಇತ್ತೀಚೆಗೆ ಬಾಲಿವುಡ್ ನ ಬಬಲ್ ವಾಹಿನಿಗೆ ಒಂದು ಸಂದರ್ಶನವನ್ನು ಮೇಘನಾ ರಾಜ್ ರವರು ನೀಡಿದ್ದರು. ಅದರಲ್ಲಿ ತಮ್ಮ ಎರಡನೇ ಮದುವೆ ಬಗ್ಗೆ ನೇರವಾಗಿ ಹೇಳಿಕೊಂಡಿದ್ದಾರೆ ತಾವು ತಮ್ಮ ಫೋಟೋಗಳನ್ನು ಸಾಮಾಜಿಕ ಜಾಲತಾಣಗಳಲ್ಲಿ ಹಂಚಿಕೊಂಡಾಗ ಕಿರುತೆರೆ ಶೋ ಗಳಲ್ಲಿ ಭಾಗವಹಿಸಿದಾಗ ನಾನಾ ರೀತಿಯ ಜನರು ನಾನಾ ರೀತಿಯ ಪ್ರತಿಕ್ರಿಯೆಗಳನ್ನು ನೀಡುತ್ತಾರೆ.ಎಷ್ಟೋ ಸಾರಿ ಚಿರುವನ್ನು ಮರೆತು ಮೇಘನಾ ರಾಜ್ ರವರು ಜೀವನವನ್ನು ಆನಂದಿಸುತ್ತಿದ್ದಾರೆ ಎಂದು ಟ್ರೋಲ್ ಕೂಡ ಮಾಡಿದ್ದರು.

 

 

ಮೇಘನಾ ತಾಯಿಯಾಗಿ ಬಡ್ತಿ ಪಡೆದ ದಿನದಿಂದ ರಾಯನ್ ರಾಜ್ ಸರ್ಜನ ಜೊತೆ ತುಂಬಾ ಖುಷಿಯಾಗಿದ್ದಾರೆ. ಮಗನ ಬಗ್ಗೆ ತುಂಬಾ ಕಾಳಜಿ ವಹಿಸುವ ಮೇಘನಾ ರಾಯನ್ ಗೆ ಚಿಕ್ಕ ವಯಸ್ಸಿನಿಂದಲೇ ತಂದೆಯ ಗುಣಗಳನ್ನು ಬೆಳೆಸುತ್ತಿದ್ದಾರೆ.ಕಳೆದ ವರ್ಷ ಗಂಡ ಚಿರಂಜೀವಿ ಸರ್ಜಾ ಇಲ್ಲದೆ ಮೇಘನ ರಾಜ್ ತಮ್ಮ ಮಗ ರಾಯನ್ ಸರ್ಜಾ ಬರ್ತಡೇಯನ್ನು ಆಚರಿಸಿದ್ದರು.ಈಗ ತಮ್ಮ ಮಗ ರಾಯನ್ ಸರ್ಜನ ಎರಡನೇ ವರ್ಷದ ಬರ್ತಡೇಯನ್ನು ತುಂಬಾ ಅದ್ದೂರಿಯಾಗಿ ಮೇಘನಾ ಆಚರಿಸಿದ್ದಾರೆ.

 

 

ಇದಕ್ಕೆ ಉತ್ತರ ನೀಡಿದ್ದ ಮೇಘನಾ ರಾಜ್ ರವರು ನನ್ನ ಬಗ್ಗೆ ನಾನು ಯಾರಿಗೂ ಸಾಬೀತು ಪಡಿಸುವ ಅಗತ್ಯ ಇಲ್ಲ. ಎಂದು ಹೇಳಿ ಸುಮ್ಮನಾದರು ಅಷ್ಟೇ ಅಲ್ಲದೆ ಹಲವಾರು ಪೋಸ್ಟ್ ಗಳಿಗೆ ಜನರು ಕಮೆಂಟ್ ಮಾಡಿ ನಿಮಗೆ ಈಗ ಚಿರು ನೆನಪಿಲ್ಲ ಎಂದು ಕೂಡ ಕೇಳಿದ್ದರು. ಅದಕ್ಕೆ ಪ್ರತಿಕ್ರಿಯೆ ನೀಡಿದ ಮೇಘನಾ “ಸಹೋದರ ನಾನು ಅವರನ್ನು ನೆನಪಿಸಿಕೊಳ್ಳುತ್ತೇನೆ ಎಂದು ನಿಮಗೆ ಸಾಬೀತು ಪಡಿಸುವ ಅಗತ್ಯವಿಲ್ಲ ಅದರ ಬಗ್ಗೆ ಯೋಚಿಸುವುದು ಯೋಚಿಸದಿರುವುದು ಸಂಪೂರ್ಣವಾಗಿ ನನಗೆ ಬಿಟ್ಟಿದ್ದು ನಾನು ಏನು ಮಾಡುತ್ತಿದ್ದೇನೆ ನಾನು ಏನು ತಿನ್ನು ತಿನ್ನುತ್ತೇನೆ ಎನ್ನುವುದನ್ನು ತಿಳಿಸಬೇಕಾಗಿಲ್ಲ. ಎಂದಿದ್ದರು ಹಾಗೆ ನಾನು ಈ ವ್ಯಕ್ತಿಯನ್ನು ಫಾಲೋ ಮಾಡುತ್ತೇನೆ ಅಥವಾ ಪ್ರತಿದಿನ ಏನು ಮಾಡುತ್ತಿದ್ದೀನಿ ಎಂದು ಯಾರಿಗೂ ತಿಳಿಸುವ ಅವಶ್ಯಕತೆ ನನಗಿಲ್ಲ” ಎಂದು ಕೂಡ ಹೇಳಿದರು.

 

 

ಒಂದು ಸಂದರ್ಶನದಲ್ಲಿ ಅವರ ಎರಡನೇ ಮದುವೆ ಬಗ್ಗೆ ಮಾತನಾಡಿದ ಮೇಘನಾ ರವರು ನನ್ನ ಸುತ್ತಮುತ್ತಲಿನ ಜನರೆಲ್ಲರೂ ನನ್ನನ್ನು ಎರಡನೇ ಮದುವೆಯಾಗುವಂತೆ ಹೇಳುತ್ತಿದ್ದಾರೆ ಅಷ್ಟೇ ಅಲ್ಲದೆ ಒಂಟಿಯಾಗಿದ್ದು ಮಗನನ್ನು ನೋಡಿಕೊಳ್ಳಲು ಸಲಹೆ ನೀಡುವ ಜನರ ಒಂದು ಗುಂಪು ಕೂಡ ಇದೆ. ನಮ್ಮ ಸಮಾಜದಲ್ಲಿ ಎರಡು ಮನಸ್ಥಿತಿಯ ವಿಭಿನ್ನ ಜನರಿದ್ದಾರೆ. ನನಗೆ ಮದುವೆಯಾಗಲು ಸಲಹೆ ನೀಡುವ ಜನರ ಗುಂಪು ನನ್ನ ಸುತ್ತ ಇದೆ ಹಾಗೆ ನೀವು ನಿಮ್ಮ ಮಗನೊಂದಿಗೆ ಸಂತೋಷವಾಗಬೇಕು ಎಂದು ಹೇಳುವ ಗುಂಪು ಕೂಡ ಇದೆ ನಾನು ಯಾರು ಮಾತನ್ನು ಕೇಳಬೇಕು.ನನ್ನ ಜೀವನದಲ್ಲಿ ಹಲವಾರು ಜೀವನದ ಜಂಜಾಟಗಳಿವೆ. ಇದರ ನಡುವೆಯೂ ನಾನು ನನ್ನ ಮಾತ್ರ ಕೇಳುತ್ತೇನೆ. ಮುಂದಿನ ದಿನಗಳಲ್ಲಿ ಏನಾಗುತ್ತದೆ ಎಂದು ಕಾದು ನೋಡಬೇಕು ಎಂದು ಹೇಳಿದ್ದಾರೆ.