ನನ್ನ ಬ್ರೈನ್ ಆಪರೇಷನ್ ಸರಿ ಆದರೆ ಕೂದಲು ಕೊಡುವುದಾಗಿ ಹೇಳಿದ್ದರು – ಹೆಂಡ್ತಿ ಬೆಲೆ ಶಿವಣ್ಣನಿಗೆ ಗೊತ್ತಾಗಿದ್ದೇ ಆಗ
ಜೀ ಕನ್ನಡ ವಾಹಿನಿ ಜೀ ಕುಟುಂಬ ಅವಾರ್ಡ್ಸ್ ಕಾರ್ಯಕ್ರಮದಲ್ಲಿ ಹ್ಯಾಟ್ರಿಕ್ ಹೀರೋ ಶಿವರಾಜ್ ಕುಮಾರ್ ಗೆ ಹೆಮ್ಮೆಯ ಕನ್ನಡಿಗ ಅವಾರ್ಡ್ ಸಿಕ್ಕಿತ್ತು. ಡ್ಯಾನ್ಸ್ ಮಾಡುತ್ತಲೇ ವೇದಿಕೆ ಮೇಲೆ ಎಂಟ್ರಿ ಕೊಟ್ಟ ಶಿವಣ್ಣ ಸ್ಟೇಜ್ ಮೇಲೆ ಮಾತನಾಡಿದರು. ಜೀ ಕುಟುಂಬದಲ್ಲಿ ನಾನು ಕೂಡ ಒಬ್ಬನಾಗಿ ಸೇರಲು ನನಗೆ ಹೆಮ್ಮೆ ಅನಿಸುತ್ತದೆ.
View this post on Instagram
ನಾನು ಯಾವಾಗಲೂ ಲೇಟ್ ಮಾಡ್ತೀನಿ ಆತರ ಮಾಡ್ತೀನಿ ಆದರೂ ಎಲ್ಲರೂ ನನ್ನನ್ನು ತಡ್ಕೊಂಡಿದ್ದಾರೆ. ರಕ್ಷಿತಾ, ರಾಘು, ಚಿನ್ನಿ ಪ್ರಕಾಶ್ ಪ್ರತಿಯೊಬ್ಬರು ಹಾಗೂ ಸ್ಪರ್ಧಿಗಳು ಕೂಡ ನನ್ನ ಈ ಜರ್ನಿಯನ್ನು ಸುಂದರವಾಗಿಸಿದ್ದಾರೆ. “ನನ್ನ ವೀಕ್ನೆಸ್ ಡ್ಯಾನ್ಸ್ ನನಗೆ ಡ್ಯಾನ್ಸ್ ಮಾಡಲು ಬರುತ್ತೋ ಇಲ್ಲವೋ ಗೊತ್ತಿಲ್ಲ ಆದರೆ ಯಾರೇ ಕರೆದರೂ ನಾನು ಮಾತ್ರ ಡ್ಯಾನ್ಸ್ ಮಾಡಲು ಹೋಗುತ್ತೇನೆ. ಡ್ಯಾನ್ಸ್ ಮಾಡಲು ಆಟಿಟ್ಯೂಡ್ ಇರಬೇಕು” ಎಂದು ಶಿವಣ್ಣ ಮಾತನಾಡಿದ್ದಾರೆ.
ಜೀ ಕುಟುಂಬ ಅವಾರ್ಡ್ಸ್ ನ ಹೆಮ್ಮೆಯ ಕನ್ನಡಿಗ ಅವಾರ್ಡ್ ಅನ್ನು ಶಿವಣ್ಣರವರಿಗೆ ರವಿಚಂದ್ರನ್ ಅವರು ನೀಡಿದರು. “ನನ್ನ ಕೈಯಿಂದ ಅವಾರ್ಡ್ ಶಿವಣ್ಣನ ಕೈ ಸೇರಿರುವುದು ನನಗೆ ದೊಡ್ಡ ಸಂತೋಷ ನಮ್ಮಿಬ್ಬರ ಸ್ನೇಹ ಮನಸ್ಸಿನಲ್ಲಿ ಇಟ್ಟುಕೊಂಡಿದ್ದೇವು ಅದನ್ನು ಪ್ರಪಂಚಕ್ಕೆ ಪರಿಚಯ ಮಾಡಿದ್ದು ಈ ಚಾನೆಲ್ ಮನಸ್ಸಿನೊಳಗೆ ಪ್ರೀತಿ ಮತ್ತು ಗೌರವವಿತ್ತು. ನಮ್ಮಿಬ್ಬರಿಗೂ ಒಂದೇ ವ್ಯತ್ಯಾಸ ಅವರು ಮಚ್ಚು ಹಿಡಿದುಕೊಂಡು ಬಂದ್ರು ನಾನು ಹೂವಿ ಹಿಡಿದುಕೊಂಡು ಬಂದೆ” ಎಂದು ರವಿಚಂದ್ರನ್ ಮಾತನಾಡಿದರು.
ಶಿವಣ್ಣರವರು ಕೂಡ ಮಾತನಾಡಿ “೧೯೮೫ರಲ್ಲಿ ರವಿಚಂದ್ರನ್ ಮದುವೆಗೆ ನಾನು ಹೋಗಿದ್ದೆ ರವಿಚಂದ್ರನ್ ನಾನು ಉತ್ತಮ ಸ್ನೇಹಿತರು. ಒಂದು ಸಿನಿಮಾದಲ್ಲಿ ಬೆಡ್ರೂಮ್ ಸೀನ್ ಇದ್ದಾಗ ನಮ್ಮನ್ನು ಚಿಕ್ಕ ಮಕ್ಕಳು ಎಂದು ಹೊರಗೆ ಕಳುಹಿಸಿದ್ದರು. ಈಗ ಅದೇ ರವಿ ಅದೆಷ್ಟು ಬೆಡ್ರೂಮ್ ಸೀನ್ಗಳನ್ನು ಮಾಡಿದ್ದಾರೆ! ಇನ್ನೊಂದು ಸಿನಿಮಾ ಪೆಂಡಿಂಗ್ ಇದೆ ನಾವಿಬ್ಬರು ಸೇರಿ ಒಂದು ಸಿನಿಮಾ ಮಾಡಬೇಕು” ಎಂದು ಶಿವಣ್ಣ ಹೇಳಿದ್ದಾರೆ.
ಶಿವಣ್ಣ ಹಾಗೂ ರವಿ ರಾಪಿಡ್ ಫೈಯರ್ ಅನ್ನು ಆಡುತ್ತಾ ಹೇಗಿದ್ದೀಯಾ? ಆರೋಗ್ಯ ಹೇಗಿದೆ? ಫ್ಯಾಮಿಲಿ ಹೇಗಿದೆ? ಮಕ್ಕಳು ಹೇಗಿದ್ದಾರೆ? ಎಂದು ಕೇಳುತ್ತಾ? ಯಾವಾಗಲೂ ಗೀತ ನಿಮ್ಮ ಜೊತೆಗೆ ಇರುತ್ತಾರಾ ಎಂದು ಕೇಳಿದರು ಅದಕ್ಕೆ ಉತ್ತರಿಸಿದ ಶಿವಣ್ಣ.. ಈ ಹತ್ತು ವರ್ಷಗಳ ಹಿಂದೆ ನನ್ನ ಬ್ರೈನ್ ನಲ್ಲಿ ಒಂದು ಸಣ್ಣ ಸಮಸ್ಯೆಯಾಗಿತ್ತು ಅದಕ್ಕೆ ಆಪರೇಷನ್ ಮಾಡಿಸಿಕೊಳ್ಳಲು ಪ್ಯಾರಿಸ್ ಗೆ ಹೋಗಿದ್ದೆ. ನನ್ನ ಇಬ್ಬರು ತಮ್ಮಂದಿರಿಗೂ ವೀಸಾ ಸಿಗಲಿಲ್ಲ. ಆ ಸಮಯದಲ್ಲಿ ನನ್ನ ಜೊತೆ ಗೀತಾ ನಿಂತಿದ್ದರು ನನ್ನ ಆರೋಗ್ಯ ಸರಿಯಾದ ಕೂದಲು ಕೊಡುವುದಾಗಿ ಹೇಳಿದ್ದರು. ಹೆಣ್ಣು ಮಕ್ಕಳು ತಮ್ಮ ಕೂದಲನ್ನು ತುಂಬಾ ಇಷ್ಟಪಡುತ್ತಾರೆ.
View this post on Instagram
ಅದನ್ನು ಯಾರಿಗೂ ಕೊಡಲು ಇಷ್ಟವಾಗುವುದಿಲ್ಲ. ಆ ಕ್ಷಣ ನಾನು ನನ್ನ ಜೀವನದಲ್ಲಿ ಮರೆಯಲಾಗುವುದಿಲ್ಲ ಆ ಕ್ಷಣದಲ್ಲಿ ನನಗೆ ನನ್ನ ಹೆಂಡತಿಯ ಬೆಲೆ ಗೊತ್ತಾಯಿತು ಎಂದು ಶಿವಣ್ಣ ಹೇಳಿದರು. ನಂತರ ರವಿಚಂದ್ರನ್ ರವರು ನಿನಗೆ ಯಾವುದಾದರೂ ಒಂದು ವಿಷಯವನ್ನು ನೇರವಾಗಿ ಹೇಳಲು ಸಾಧ್ಯವಾಗುವುದಿಲ್ಲ ಅಥವಾ ಧೈರ್ಯ ಇರುವುದಿಲ್ಲ ಅಥವಾ ಅವಕಾಶವೇ ಸಿಗುವುದಿಲ್ಲ ಈ ಮೂಲಕ ಗೀತಾ ರವರಿಗೆ ಏನನ್ನು ಹೇಳಲು ಇಷ್ಟಪಡುತ್ತೀರಿ ಎಂದು ಕೇಳಿದಾಗ ಇದಕ್ಕೆ ಉತ್ತರಿಸಿದ ಶಿವಣ್ಣ ಒಮ್ಮೊಮ್ಮೆ ನನ್ನ ನೋಡೇ ಗೀತಾ ನಿನ್ನ ನಗುವೆ ನನಗೆ ಸಂಗೀತ… ಎಂದು ಹಾಡನ್ನು ಹಾಡಿದ್ದಾರೆ.