ಕೆಜಿಎಫ್ ರೆಕಾರ್ಡ್ಸ್ ಧೂಳ್ ಮಾಡಿದ ಕಾಂತಾರ : ಯಶ್ ಮೊದಲ ಪ್ರತಿಕ್ರಿಯೆ

ಯಶ್ ರವರು ಬೆಳೆದ ನಂತರ ಬದಲಾಗಿದ್ದಾರೆ ಎಂದು ಹಲವು ಜನ ಆಕ್ರೋಶವನ್ನು ವ್ಯಕ್ತಪಡಿಸುತ್ತಿದ್ದಾರೆ. ಕಾಂತಾರ ಸಿನಿಮಾವು ಹೊಂಬಾಳೆ ಫಿಲಂಸ್ ಮೂಲಕ ಬಂದಿದ್ದರು ಕೂಡ ಯಶ್ ರವರು ಕೇವಲ ಒಂದು ಪೋಸ್ಟ್ ಕೂಡ ಹಾಕಿ ವಿಶ್ ಮಾಡಿಲ್ಲ. ತೆಲುಗಿನಲ್ಲಿ ಪ್ರಭಾಸ್ ಕೂಡ ಮೂರು ನಾಲ್ಕು ಬಾರಿ ಕಾಂತಾರಾದ ಪೋಸ್ಟ್ ಹಾಕಿ ವಿಶ್ ಮಾಡಿದ್ದಾರೆ.

 

 

ತೆಲುಗಿನಲ್ಲಿ ಅಷ್ಟೇ ಅಲ್ಲದೆ ತಮಿಳಿನಲ್ಲಿ ಕೂಡ ಹಲವಾರು ನಟ ನಟಿಯರು ಕಾಂತಾರದ ಬಗ್ಗೆ ಮೆಚ್ಚುಗೆಯನ್ನು ಸೂಚಿಸಿ ಪೋಸ್ಟನ್ನು ಹಾಕಿದ್ದಾರೆ. ಆದ್ರೆ ಯಶ್ ಒಂದು ಬಾರಿ ಕೂಡ ಇದರ ಬಗ್ಗೆ ಮಾತನಾಡಿಲ್ಲ ಎಂಬ ಅಸಮಾಧಾನ ಇತ್ತು. ಆದರೆ, ಯಶ್ ರವರು ಸಿನಿಮಾ ರಿಲೀಸ್ ಆಗುವುದಕ್ಕಿಂತ ಮೊದಲೇ ರಿಶಬ್ ಶೆಟ್ಟಿಗೆ ಕಾಲ್ ಮಾಡಿ ಸಿನಿಮಾ ಚೆನ್ನಾಗಿದೆ ಚಿನ್ನ ಸಕ್ಸಸ್ ಆಗುತ್ತದೆ. ಎಂದು ಹೇಳಿದರಂತೆ ಎಂದು ಸ್ವತಹ ರಿಷಬ್ ಶೆಟ್ಟಿಯವರೇ ಒಂದು ಇಂಟರ್ವ್ಯೂ ನಲ್ಲಿ ಹೇಳಿದ್ದಾರೆ.

 

 

ಕಾಂತಾರ ಸಿನಿಮಾ ಕೆಜಿಎಫ್ ಸಿನಿಮಾದ ರೆಕಾರ್ಡ್ ಅನ್ನು ಮುರಿದಿದೆ ಈ ವಿಷಯ ಎಲ್ಲರಿಗೂ ಗೊತ್ತೇ ಇದೆ. ಇದಕ್ಕೆ ಫಸ್ಟ್ ರಿಯಾಕ್ಷನ್ ನೀಡಿದ ಯಶ್, ದಾಖಲೆಗಳು ಇರುವುದೇ ಮುರಿಯುವುದಕ್ಕೆ ಇನ್ನಷ್ಟು ಹೊಸ ಕನ್ನಡ ಸಿನಿಮಾಗಳು ಬರಬೇಕು ಕನ್ನಡದಲ್ಲಿ ಕೇವಲ ದೊಡ್ಡ ಬಜೆಟ್ ನ ಸಿನಿಮಾ ಅಲ್ಲ ಈ ರೀತಿ ಇನ್ನೂ ವಿಭಿನ್ನವಾದ ಸಿನಿಮಾಗಳು ಬರಬೇಕು ಎಂದು ಯಶ್ ರಿಷಬ್ ಶೆಟ್ಟಿ ಅವರಿಗೆ ಮತ್ತೆ ವಿಶ್ ಮಾಡಿದ್ದಾರೆ ಎಂಬುದು ಮೂಲಗಳಿಂದ ತಿಳಿದು ಬಂದಿದೆ.

 

 

ಯಶ್ ರವರು ಕನ್ನಡ ಇಂಡಸ್ಟ್ರಿಗೆ ಬಂದಾಗ ಹೇಗಿದ್ದರೋ ಹಾಗೆ ಬೆಳೆದ ನಂತರವೂ ಕೂಡ ಕನ್ನಡ ಇಂಡಸ್ಟ್ರಿಯ ಬಗ್ಗೆ ಹಾಗೂ ಕನ್ನಡದ ಬೇರೆ ನಟರ ಬಗ್ಗೆ ಗೌರವವನ್ನು ಇಟ್ಟುಕೊಂಡಿದ್ದಾರೆ. ಇದು ಕನ್ನಡಿಗರು ಎಲ್ಲರೂ ಹೆಮ್ಮೆಪಡುವ ವಿಷಯ ನಮ್ಮ ಸ್ಯಾಂಡಲ್ ವುಡ್ ಎಲ್ಲ ಮತ್ತೆ ಒಂದಾಗುತ್ತಿದೆ. ಇಡೀ ಪ್ರಪಂಚ ನಮ್ಮ ಸ್ಯಾಂಡಲ್ವುಡ್ ನತ್ತ ತಿರುಗಿ ನೋಡುವಂತೆ ಮಾಡುತ್ತಿದೆ. ಇದಕ್ಕೆಲ್ಲ ಕಾರಣ ಯಶ್ ಎಂದರೆ ತಪ್ಪಾಗುವುದಿಲ್ಲ.