ಅಳಿಯನನ್ನು ನೆನೆದು ಕಣ್ಣೀರಿಟ್ಟ ಮೇಘನಾ ರಾಜ್ ತಾಯಿ

ಚಿರಂಜೀವಿ ಸರ್ಜಾ ಮರಣ ಹೊಂದಿ ವರ್ಷಗಳೇ ಕಳೆಯುತ್ತಾ ಬಂತು ಆದರೂ ಕೂಡ ಮೇಘನಾ ರವರಿಗೆ ಕಿಂಚಿತ್ತು ಕೂಡ ಅವರ ಮೇಲಿನ ಪ್ರೀತಿ ಕಮ್ಮಿಯಾಗಿಲ್ಲ. ಚಿರಂಜೀವಿ ಸರ್ಜಾ ರವರನ್ನು ನಟಿ ಮೇಘನಾ ರಾಜ್ ನೆನೆ lಯುತ್ತಲೇ ಇರುತ್ತಾರೆ ಆಗಾಗ ನಟ ಚಿರಂಜೀವಿ ಸರ್ಜಾ ಸಮಾಧಿಯ ಬಳಿ ಹೋಗಿ ಪೂಜೆಯನ್ನು ಸಲ್ಲಿಸಿ ಬರುತ್ತಾರೆ. ಅದೊಂದು ಕರಾಳ ದಿನ ನಟ ಚಿರಂಜೀವಿ ಸರ್ಜಾ ಹೃದಯಘಾತದಿಂದ ಕೆಳಗೆ ಕುಸಿದರು. ಆಗ ಮೇಘನಾ ರಾಜ್ ರವರು ಗರ್ಭಿಣಿಯಾಗಿದ್ದರು ಹೆಚ್ಚು ಆಕ್ಟಿವ್ ಆಗಿರುತ್ತಿದ್ದ ಮೇಘನಾ ರಾಜ್ ಚಿರಂಜೀವಿ ಸರ್ಜಾ ಅವರ ಅಗಲಿಕೆಯಿಂದ ನೊಂದು ಅವರು ಮುಖವೇ ಕಳೆಗುಂದಿತ್ತು.

ಮೇಘನಾ ರಾಜ್ ರವರು ತಾಯಿಯಾಗಿ ಬಡ್ತಿ ಪಡೆದ ದಿನದಿಂದ ತಮ್ಮ ಮಗ ರಾಯನ್ ರಾಜ್ ಸರ್ಜಾನ ಮುಖವನ್ನು ನೋಡುತ್ತಾ ತಮ್ಮ ನೋವುಗಳನ್ನೆಲ್ಲ ಮರೆಯುತ್ತಿದ್ದಾರೆ. ಹಲವಾರು ಬಾರಿ ತಮ್ಮ ಎರಡನೆಯ ಮದುವೆಯ ಬಗ್ಗೆ ಟ್ರೋಲ್ ಆಗಿದ್ದರೂ ಕೂಡ ಅದರ ಬಗ್ಗೆ ತಲೆಕೆಡಿಸಿಕೊಳ್ಳದೆ ತಾವು ಮೊದಲಿನಂತೆ ಧ್ರುವ ಸರ್ಜಾ ಮೇಲೆ ಪ್ರೀತಿ ಇಟ್ಟುಕೊಂಡು ತಮ್ಮ ಮಗ ರಾಯನ್ ರಾಜ್ ಸರ್ಜಾ ಜೊತೆಗೆ ಸಂತೋಷದಿಂದ ಬದುಕುತ್ತಿದ್ದಾರೆ.

ಮೇಘನಾ ರಾಜ್ ಹಲವು ರಿಯಾಲಿಟಿ ಶೋಗಳಲ್ಲಿ ಕೂಡ ಭಾಗವಹಿಸುತ್ತಿದ್ದಾರೆ ಸದ್ಯಕ್ಕೆ ಡ್ಯಾನ್ಸಿಂಗ್ ಚಾಂಪಿಯನ್ ರಿಯಾಲಿಟಿ ಶೋನಲ್ಲಿ ಜಡ್ಜ್ ಆಗಿ ವಿಜಯ್ ರಾಘವೇಂದ್ರ ಮಯೂರಿ ಉಪಾಧ್ಯ ಹಾಗೂ ಅಕುಲ್ ಬಾಲಾಜಿಯವರ ನಿರೂಪಣೆಯಲ್ಲಿ ಮೂಡಿ ಬರುತ್ತಿರುವ ಡ್ಯಾನ್ಸಿಂಗ್ ಚಾಂಪಿಯನ್ ನಲ್ಲಿ ಮೇಘನಾ ರಾಜ್ ರವರು ಜಡ್ಜ್ ಆಗಿ ಕಾಣಿಸಿಕೊಳ್ಳುತ್ತಿದ್ದಾರೆ.ಮೇಘನಾ ರಾಜ್ ರವರು ತಮ್ಮ ಎರಡನೇ ಮದುವೆಯ ಬಗ್ಗೆ ಕೂಡ ಮಾತನಾಡಿ ನಾನು ಇನ್ನೂ ಚಿರಂಜೀವಿ ಸರ್ಜರನ್ನು ಮರೆತಿಲ್ಲ ಅವರನ್ನು ಮರೆಯುವುದಕ್ಕೂ ಸಾಧ್ಯವಿಲ್ಲ ಸುಮ್ಮನೇ ಇಲ್ಲಸಲ್ಲದ ಊಹಪೋಹಗಳನೆಲ್ಲ ಕ್ರಿಯೇಟ್ ಮಾಡಬೇಡಿ ನಾನು ಚಿರಂಜೀವಿ ಸರ್ಜಾ ನನ್ನು ಪ್ರೀತಿಸುತ್ತಿದ್ದೇನೆ ಇನ್ನು ನೆನಪಿನಲ್ಲಿ ಇಟ್ಟುಕೊಂಡಿದ್ದೇನೆ ಎಂಬುದನ್ನು ಯಾರ ಮುಂದೆಯೂ ನಾನು ಪ್ರೂವ್ ಮಾಡಬೇಕಾದ ಅವಶ್ಯಕತೆ ಇಲ್ಲ ಅದು ನನಗೆ ಗೊತ್ತಿದ್ದರೆ ಸಾಕು ಎಂದು ಹೇಳಿದ್ದಾರೆ.

ಮೇಘನಾ ನೆನಪಾದಾಗಲೆಲ್ಲ ತನ್ನ ಪತಿ ಚಿರಂಜೀವಿ ಸರ್ಜಾ ಅವರ ಸಮಾಧಿಯ ಬಳಿ ಹೋಗಿ ಪೂಜೆಯನ್ನು ಸಲ್ಲಿಸಿ ಬರುತ್ತಾರೆ ಜೊತೆಗೆ ಮಗ ರಾಯನ್ ಸರ್ಜಾ ತಾಯಿ ಪ್ರಮೀಳಾ ಜೋಶಾಯಿ ತಂದೆ ಸುಂದರ್ ರಾಜ್ ಹಾಗೂ ಒಮ್ಮೊಮ್ಮೆ ಮೈದುನ ದ್ರುವ ಸರ್ಜಾ ರವರನ್ನು ಕೂಡ ಜೊತೆಗೆ ಕರೆದುಕೊಂಡು ಹೋಗುತ್ತಾರೆ. ಇದೇ ರೀತಿ ಒಮ್ಮೆ ಪೂಜೆಗೆ ಹೋಗಿದ್ದಾಗ ಮೇಘನಾ ರಾಜ್ ತಾಯಿ ಪ್ರಮೀಳಾ ಜೋಷಾಯಿ ತಮ್ಮ ಅಳಿಯನನ್ನು ನೆನೆದು ಕಣ್ಣೀರು ಹಾಕಿದ್ದಾರೆ.