ವೇದಿಕೆಯಲ್ಲಿ ಧನ್ವೀರ್ ಮುಂದೆ ಅಭಿಷೇಕ್ ಅಂಬರೀಶ್ ಗೆ ಹೊಡೆದ ದರ್ಶನ್ : ಕ್ಷಮಾಪಣೆ ಕೇಳಿದ ಅಭಿಷೇಕ್

ಇದೇ ಜನವರಿ 26ರಂದು ದರ್ಶನ್ ಅಭಿನಯದ ಕ್ರಾಂತಿ ಸಿನಿಮಾ ಬಿಡುಗಡೆಯಾಗಿ ದೇಶದಾದ್ಯಂತ ತೆರೆ ಕಾಣಲಿದ್ದು ಈ ಸಿನಿಮಾ ಕೂಡ ಪ್ಯಾನ್ ಇಂಡಿಯಾ ಸಿನಿಮಾವಾಗಿ ಮೂಡಿ ಬರುತ್ತಿದೆ. ದರ್ಶನ್ ಅಭಿನಯದ ಕ್ರಾಂತಿ ಸಿನಿಮಾದಲ್ಲಿ ರಚಿತರಾಮ್ ರವರು ನಾಯಕ ನಟಿಯಾಗಿ ನಟಿಸುತ್ತಿದ್ದಾರೆ. ದರ್ಶನ್ ರವರ ಕ್ರಾಂತಿ ಸಿನಿಮಾದ ಪ್ರಮೋಷನ್ ಇದೀಗ ಭರ್ಜರಿಯಾಗಿ ನಡೆಯುತ್ತಿದ್ದು ಅವರ ಅಭಿಮಾನಿಗಳು ಕೂಡ ಎಲ್ಲಾ ಕಡೆ ಪ್ರಮೋಷನ್ ಮಾಡುತ್ತಿದ್ದಾರೆ.

ಈ ಹಿಂದೆ ದರ್ಶನ್ ಹಾಗೂ ಮೀಡಿಯಾ ನಡುವಿನ ಜಟಾಪಟಿಯಲ್ಲಿ ಮೀಡಿಯಾದವರು ದರ್ಶನ್ ಮೀಡಿಯಾ ಇಲ್ಲದೆ ಏನು ಮಾಡಲು ಸಾಧ್ಯವಿಲ್ಲ ಎಂದಿದ್ದರು. ಇದಕ್ಕೆ ಪ್ರತ್ಯುತ್ತರ ನೀಡಿದ್ದ ದರ್ಶನ್ ಮೀಡಿಯಾದಿಂದ ನಾನು ಬದುಕಿಲ್ಲ ನನಗೆ ಸಾಕಷ್ಟು ಅಭಿಮಾನಿಗಳಿದ್ದಾರೆ, ಅವರೇ ಸಾಕು ನಾನು ಬದುಕಲು ನನ್ನ ಸಿನಿಮಾವನ್ನು ಅವರೇ ಪ್ರಮೋಷನ್ ಮಾಡುತ್ತಾರೆ. ನನಗೆ ಯಾವುದೇ ಮೀಡಿಯಾದ ಅವಶ್ಯಕತೆ ಇಲ್ಲ ಎಂದು ಸೆಡ್ಡು ಹೊಡೆದು ಹೇಳಿದರು ಇದಾದ ನಂತರ ಎಲ್ಲಾ ಮೀಡಿಯಾಗಳು ಚಾಲೆಂಜಿಂಗ್ ಸ್ಟಾರ್ ದರ್ಶನ್ ರವರನ್ನು ಬ್ಯಾನ್ ಮಾಡಿದ್ದರು.

ಇದೀಗ ಅವರ ಕ್ರಾಂತಿ ಸಿನಿಮಾ ಜನವರಿ 26ರಂದು ಬಿಡುಗಡೆಯಾಗುತ್ತಿದ್ದು ಕ್ರಾಂತಿ ಸಿನಿಮಾದ ಪ್ರಮೋಷನ್ ಅನ್ನು ಸ್ವತಃ ದರ್ಶನ್ ಅಭಿಮಾನಿಗಳೇ ಮಾಡುತ್ತಿದ್ದಾರೆ. ಕ್ರಾಂತಿ ಸಿನಿಮಾವನ್ನು ತಮ್ಮ ಯುಟ್ಯೂಬ್ ಚಾನೆಲ್ ಗಳಲ್ಲಿ ಇನ್ಸ್ಟಾಗ್ರಾಮ್ ಅಕೌಂಟ್ ಗಳಲ್ಲಿ ಫೇಸ್ಬುಕ್ ಗಳಲ್ಲಿ ತಮ್ಮ ವಾಟ್ಸಪ್ ಡಿಪಿ ಹಾಗೂ ಸ್ಟೋರಿಗಳಲ್ಲಿ ಕೂಡ ಹಾಕಿಕೊಂಡು ಅಭಿಮಾನಿಗಳು ಕ್ರಾಂತಿ ಸಿನಿಮಾವನ್ನು ಪ್ರಮೋಟ್ ಮಾಡುತ್ತಿದ್ದಾರೆ.

ಡಿ ಬಾಸ್ ದರ್ಶನ್ ರವರು ಕರ್ನಾಟಕದಲ್ಲಿ ಲಕ್ಷಾಂತರ ಅಭಿಮಾನಿಗಳನ್ನು ಹೊಂದಿದ್ದು ಕರ್ನಾಟಕ ಮಾತ್ರವಲ್ಲದೆ ಇನ್ನು ಹಲವು ರಾಜ್ಯಗಳಲ್ಲಿ ಕೂಡ ಅಭಿಮಾನಿಗಳನ್ನು ಹೊಂದಿದ್ದಾರೆ. ಡಿ ಬಾಸ್ ದರ್ಶನ್ ರವರು ನಮ್ಮ ಅಭಿಮಾನಿಗಳೇ ನನ್ನ ಹಿಂದಿನ ಶಕ್ತಿ ಎಂದು ಕೂಡ ಹಲವಾರು ಸಂದರ್ಶನಗಳಲ್ಲಿ ಹೇಳಿದ್ದಾರೆ ಇದೀಗ ತಮ್ಮ ಕ್ರಾಂತಿ ಸಿನಿಮಾದ ಪ್ರಮೋಷನ್ ಮಾಡುತ್ತಿರುವ ಅಭಿಮಾನಿಗಳನ್ನು ನೋಡಿದ ದರ್ಶನ್ ಅದಕ್ಕೆ ಪ್ರತಿಕ್ರಿಯೆ ನೀಡಿದ್ದಾರೆ.

ಡಿ ಬಾಸ್ ದರ್ಶನ್ ತಮ್ಮ ಅಭಿಮಾನಿಗಳ ಪ್ರಮೋಷನ್ ನೋಡಿ ಅದಕ್ಕೆ ಪ್ರತಿಕ್ರಿಯಿಸಿ ನಾನು ಇವರಿಗೆ ಏನು ಅಲ್ಲ ನನ್ನ ಜೊತೆ ಇವರು ಒಂದು ಫೋಟೋ ತೆಗೆದುಕೊಂಡಿಲ್ಲ ಶೇಕ್ ಹ್ಯಾಂಡ್ ಕೂಡ ನೀಡಿಲ್ಲ. ಆದರೂ ಕೂಡ ನನ್ನ ಬಗ್ಗೆ ಇಷ್ಟು ಪ್ರೀತಿಯನ್ನು ಕಾಳಜಿ ಹೊಂದಿದ್ದಾರೆ. ಇವರು ಇಂದು ರಾಜ್ಯದಾದ್ಯಂತ ಎಲ್ಲಾ ಕಡೆ ನನ್ನ ಕ್ರಾಂತಿ ಸಿನಿಮಾ ವನ್ನು ಪ್ರಮೋಷನ್ ಮಾಡುತ್ತಿದ್ದಾರೆ. ಅಭಿಮಾನಿಗಳಿಂದ ನಾನು ಇಂದು ಇಂದು ಅವರ ಪ್ರೀತಿಗೆ ಚಿರಋಣಿಯಾಗಿರುತ್ತೇನೆ. ನಾನು ಬದುಕಿರುವಷ್ಟು ಕಾಲದಲ್ಲಿ ಅವರಿಗೆ ಏನಾದರು ಮಾಡಿಕೊಡುತ್ತೇನೆ ಎಂದು ಕೈಲಾದ ಸಹಾಯವನ್ನು ಮಾಡುತ್ತೇನೆ ಎಂದರು.

ಇಷ್ಟೇ ಅಲ್ಲದೆ ಡಿ ಬಾಸ್ ದರ್ಶನ್ ಅಭಿನಯದ ಕ್ರಾಂತಿ ಸಿನಿಮಾದ ಪ್ರೀ ರಿಲೀಸ್ ಇವೆಂಟ್ ನಲ್ಲಿ ಅಂಬರೀಶ್ ಅವರ ಮಗ ಜೂನಿಯರ್ ಅಂಬರೀಶ್ ಅಭಿಷೇಕ್ ರವರು ಕೂಡ ಭಾಗಿಯಾಗಿದ್ದರು. ಯಾಕೆ ಲೇಟಾಗಿ ಬಂದೆ ಎಂದು ವೇದಿಕೆಯಲ್ಲಿ ಧನ್ವೀರ್ ಮುಂದೆ ಅಭಿಷೇಕ್ ಅಂಬರೀಶ್ ಗೆ ದರ್ಶನ್ ಪ್ರೀತಿಂದ ಹೊಡೆಡಿದ್ದಾರೆ. ಲೇಟಾಗಿ ಬಂದಿದ್ದಕ್ಕೆ ದರ್ಶನ್ ಅಭಿಮಾನಿಗಳಲ್ಲಿ ಕ್ಷಮೆಯನ್ನು ಕೇಳಿದರು. ತದನಂತರ ಅಣ್ಣ ನಿಮ್ಮ ಅಭಿಮಾನಿಗಳು ನನ್ನನ್ನು ಕ್ಷಮಿಸುತ್ತಾರೆ ತಾನೆ ಎಂದು ಕೂಡ ಪ್ರಶ್ನಿಸಿದರು.

ಅಂಬರೀಶ್ ಹಾಗೂ ಸುಮಲತಾ ದಂಪತಿಗಳ ಒಬ್ಬನೇ ಮಗ ಅಭಿಷೇಕ ಅಂಬರೀಶ್ ಈಗಾಗಲೇ ಅಮರ್ ಎನ್ನುವ ಚಿತ್ರದ ಮೂಲಕ ಕನ್ನಡ ಸಿನಿ ರಂಗಕ್ಕೆ ಎಂಟ್ರಿ ಕೊಟ್ಟಿದ್ದು ಅದ್ದೂರಿ ಪ್ರದರ್ಶನವನ್ನು ಕೂಡ ಆ ಚಿತ್ರ ಕಂಡಿತ್ತು.ರಚಿತಾ ರಾಮ್ ರವರ ಜೊತೆಗೆ ಬ್ಯಾಡ್ ಮಾನರ್ಸ್ ಸಿನಿಮಾದಲ್ಲಿ ಕೂಡ ನಟ ಅಭಿಷೇಕ್ ಅಂಬರೀಶ್ ನಟಿಸುತ್ತಿದ್ದು ಇದೀಗ ಡಿ ಬಾಸ್ ದರ್ಶನ್ ರವರ ಕ್ರಾಂತಿ ಸಿನಿಮಾದ ಫಂಕ್ಷನ್ ಒಂದರಲ್ಲಿ ಹಾಜರಿದ್ದು ಲೇಟಾಗಿ ಬಂದಿದ್ದಕ್ಕೆ ಅಭಿಮಾನಿಗಳನ್ನು ಕ್ಷಮೆಯಾಚಿಸಿದ್ದಾರೆ. ಇದನ್ನು ನೋಡಿದ ಡಿ ಬಾಸ್ ದರ್ಶನ್ ಅವರಿಗೆ ಬುದ್ಧಿವಾದವನ್ನು ಹೇಳಿದ್ದಾರೆ.