ರಶ್ಮಿಕಾ ಕಾರಣದಿಂದ ಅಪ್ಪುವಿನ ನಂತರ ಆ ಭಾಗದ ಅಂಗಾಂಗ ದಾನ ಮಾಡುತ್ತೇನೆ ಎಂದ ಮತ್ತೊಬ್ಬ ಸ್ಟಾರ್ ನಟ

ತೆಲುಗಿನ ಸ್ಟಾರ್ ನಟರಲ್ಲಿ ಒಬ್ಬರಾದ ವಿಜಯ್ ದೇವರಕೊಂಡ ಅವರು ಇದೀಗ ತಾವು ಅಂಗಾಂಗ ದಾನ ಮಾಡುವುದಾಗಿ ಮಿಡಿಯಾ ಮುಂದೆ ಪ್ರಸ್ತಾಪವನ್ನು ಮಾಡಿದ್ದಾರೆ. ವಿಜಯ್ ದೇವರಕೊಂಡ ರವರು ಒಂದು ದೃಢವಾದ ನಿರ್ಧಾರವನ್ನು ತೆಗೆದುಕೊಂಡಿದ್ದು ಅದರಿಂದ ಸಮಾಜಕ್ಕೆ ಒಳಿತಾಗುತ್ತದೆ ಎಂದು ಎಲ್ಲರೂ ಮೆಚ್ಚುಗೆ ತಿಳಿಸಿದ್ದಾರೆ.

ಪುನೀತ್ ರಾಜಕುಮಾರ್ ಅವರು ಮೊದಲು ತಮ್ಮ ನೇತ್ರದಾನ ಮಾಡುವ ಮೂಲಕ ಕರ್ನಾಟಕದಲ್ಲಿ ಮನೆ ಮಾತಾಗಿ ಎಲ್ಲರಿಗೂ ಆದರ್ಶ ಪ್ರಾಯವಾಗಿ ನಿಂತಿದ್ದರು. ತದನಂತರ ಸಂಚಾರಿ ವಿಜಯ್ ರವರು ಅಂಗಾಂಗ ದಾನವನ್ನು ಮಾಡಿದರು ಇದರಿಂದ ಕೂಡ ಸಂಚಾರಿ ವಿಜಯ್ ಯುವ ಜನತೆಗೆ ಸ್ಪೂರ್ತಿಯಾಗಿ ನಿಂತರು ಇದೀಗ ವಿಜಯ್ ದೇವರಕೊಂಡ ಕೂಡ ಅಂಗಾಂಗ ದಾನವನ್ನು ಮಾಡುವುದಾಗಿ ತಿಳಿಸಿದ್ದಾರೆ.

ವಿಜಯ್ ದೇವರಕೊಂಡ ಸ್ವತಃ ಮೀಡಿಯಾ ಮುಂದೆ ತಮ್ಮ ಅಂಗಾಂಗ ದಾನದ ವಿಷಯವಾಗಿ ಮಾತನಾಡಿ ನಾನು ವೈದ್ಯಕೀಯ ವಿದ್ಯಾರ್ಥಿಗಳನ್ನು ನೋಡಿದ ಮೇಲೆ ನನಗೆ ಈ ಐಡಿಯ ಹೊಳೆಯಿತು ಹಾಗಾಗಿ ನಾನು ಅಂಗಾಂಗ ದಾನವನ್ನು ಮಾಡಲು ಒಪ್ಪಿಕೊಂಡಿದ್ದೇನೆ ನಮ್ಮ ಅಂಗಾಂಗಗಳು ನಾವು ಸತ್ತ ಮೇಲೆ ಮಣ್ಣಲ್ಲಿ ಕೊಳೆತು ಹೋಗುತ್ತವೆ ಹಾಗಾಗದೆ ಯಾರಿಗಾದರೂ ನಾಲ್ಕು ಜನಕ್ಕೆ ಉಪಯೋಗವಾದರೆ ನಮ್ಮ ಜನ್ಮವೇ ಸಾರ್ಥಕವೆನಿಸುತ್ತದೆ ಎಂದರು

ಈಗ ವಿಜಯ್ ದೇವರಕೊಂಡ ಕೂಡ ಅಪ್ಪು ಹಾಗೂ ಸಂಚಾರಿ ವಿಜಯ್ ರವರ ಹಾದಿಯಲ್ಲಿ ನಡೆಯುತ್ತಿದ್ದು ಅಂಗಾಂಗ ಧಾನ ಮಾಡುವ ಮೂಲಕ ಜಗತ್ತಿಗೆ ಮಾದರಿಯಾಗಿ ನಡೆಯುತ್ತಿದ್ದಾರೆ. ವಿಜಯ್ ದೇವರಕೊಂಡ ರವರು ಅಂಗಾಂಗ ದಾನವನ್ನು ಮಾಡುತ್ತೇನೆ ಎಂದಾಗ ಅವರ ಅಭಿಮಾನಿಗಳೆಲ್ಲರೂ ಹರ್ಷವನ್ನು ವ್ಯಕ್ತಪಡಿಸಿದ್ದರು ನನ್ನಂತೆ ನನ್ನ ಅಭಿಮಾನಿಗಳು ಮಾದರಿಯಾಗಲಿ ಎಂದು ವಿಜಯ್ ದೇವರಕೊಂಡ ಹೇಳಿದ್ದಾರೆ ಹಾಗೂ ಇವರ ಈ ನಡೆಗೆ ಅಭಿಮಾನಿಗಳು ಕೂಡ ಪ್ರಶಂಸಿಸಿದ್ದಾರೆ.

ಕರ್ನಾಟಕದವರೇ ಆದ ರಶ್ಮಿಕಾ ಮಂದಣ್ಣ ರವರ ಕಾರಣದಿಂದ ವಿಜಯ ದೇವರಕೊಂಡ ಕರ್ನಾಟಕದಲ್ಲಿ ಎಲ್ಲೆಡೆ ಮನೆ ಮಾತಾಗಿದ್ದಾರೆ. ಕರ್ನಾಟಕದ ಪ್ರೇಕ್ಷಕರಿಗೂ ಕೂಡ ವಿಜಯ್ ದೇವರಕೊಂಡ ಚೆನ್ನಾಗಿಯೇ ಗೊತ್ತು ರಶ್ಮಿಕ ಇಂದ ಮಾತ್ರವಲ್ಲದೇ ಅವರ ಉತ್ತಮ ನಟನೆಯಿಂದ ಕೂಡ ಎಲ್ಲಾ ಕಡೆ ವಿಜಯ ದೇವರಕೊಂಡ ಫೇಮಸ್ ಆಗಿದ್ದಾರೆ. ರಶ್ಮಿಕಾ ಹಾಗೂ ವಿಜಯ್ ದೇವರಕೊಂಡ ನಡುವೆ ಡೇಟಿಂಗ್ ನಡೆಯುತ್ತಿದೆ ಎನ್ನುವ ವಿಚಾರ ಈ ಹಿಂದೆ ಗಾಸಿಪ್ ಆಗಿತ್ತು ಆದರೆ ಈ ವಿಚಾರ ಎಂದು ಗುಟ್ಟಾಗಿ ಉಳಿದಿಲ್ಲ ಈ ಇಬ್ಬರ ಮಧ್ಯೆ ಮನಸ್ತಾಪವಾಗಿ ಲವ್ ಬ್ರೇಕ್ ಅಪ್ ಕೂಡ ಆಗಿತ್ತು ಎಂದು ವರದಿಗಳ ಮೂಲಕ ತಿಳಿದು ಬಂದಿದೆ ಆದರೆ ಇವೆಲ್ಲ ಗಾಸಿಪ್ ಗಳಿಗೆ ಮೊನ್ನೆ ಅಷ್ಟೇ ಇವರಿಬ್ಬರು ತೆರೆ ಎಳೆದು ಒಟ್ಟಿಗೆ ಮಾಲ್ಡೀವ್ಸ್ ಪ್ರವಾಸಕ್ಕೂ ಕೂಡ ಹೋಗಿದ್ದರು.