ನಿರೂಪಕಿ ಸುಷ್ಮಾ ಅವರ ನಿಜ ಜೀವನದ ಕತೆ ಕೇಳಿದ್ರೆ ತುಂಬಾ ನೋವಾಗುತ್ತೆ? ಮೊದಲ ಗಂಡ ಮಾಡಿದ್ದು ಏನು ?

ಕನ್ನಡದ ಖ್ಯಾತ ನಿರೂಪಕಿಯರಲ್ಲಿ ಸುಷ್ಮಾ ಕೆ ರಾವ್ ಕೂಡ ಒಬ್ಬರು. ಖ್ಯಾತ ಆ್ಯಂಕರ್ ಅನುಶ್ರೀಯವರ ಬಳಿಕ ಪಟಪಟನೆ ಮಾತನಾಡಿ ಕನ್ನಡಿಗರ ಮನಗೆದ್ದ ನಿರೂಪಕಿ ಎಂದರೆ ಅದು ಸುಷ್ಮಾ. ಇನ್ನು ಚಿಕ್ಕಮಂಗಳೂರಿನ ಕೊಪ್ಪದವರಾದ ಸುಷ್ಮಾರವರು ನಿರೂಪಕಿ ಮಾತ್ರವಲ್ಲ. ನಟನೆಯ ಜೊತೆಗೆ ಭರತನಾಟ್ಯ ಕಲಾವಿದೆ ಕೂಡ ಆಗಿದ್ದಾರೆ. ಕಿರುತೆರೆಯಲ್ಲಿ ಜನಪ್ರಿಯರಾದ ಸುಷ್ಮಾ ಅವರು ಗುಪ್ತಗಾಮಿನಿ, ಯಾವ ಲೋಕದ ಮೈತ್ರಿ ಹಲವು ಸೀರಿಯಲ್ ಗಳಲ್ಲಿ ನಟಿಸಿ ಸೈ ಎನಿಸಿಕೊಂಡವರು.

ಇನ್ನು ಗುಪ್ತಗಾಮಿನಿ ಧಾರಾವಾಹಿಯ ತಮ್ಮ ಅಭಿನಯಕ್ಕಾಗಿ ಕರ್ನಾಟಕ ಶ್ರೇಷ್ಠ ಕಿರುತೆರೆ ಪ್ರಶಸ್ತಿಯನ್ನ ಪಡೆದುಕೊಂಡವರು. ಆದರೆ ಸುಷ್ಮಾರವರ ವೈಯುಕ್ತಿಕ ಜೀವನ ಮಾತ್ರ ಕಣ್ಣೀರು ತರಿಸುವಂತಿದೆ.. ಹೌದು, ಬ್ಲಾಕ್ ಬಸ್ಟರ್ ಚಿತ್ರ ಮುಂಗಾರು ಮಳೆ ಸಿನಿಮಾಗೆ ಕಥೆ ಬರೆದಿದ್ದ ಪ್ರೀತಮ್ ಗುಬ್ಬಿ ಅವರನ್ನ ಲವ್ ಮಾಡಿ ಮದುವೆಯಾದರು ಸುಷ್ಮಾ. ೨೦೦೭ರಲ್ಲಿ ಸುಷ್ಮಾ ಮತ್ತು ಪ್ರೀತಮ್ ಗುಬ್ಬಿ ದಾಂಪತ್ಯ ಜೀವನಕ್ಕೆ ಕಾಲಿಟ್ಟರು. ಸೀರಿಯಲ್ ಗಳ ಬಳಿಕ ಹೆಚ್ಚಾಗಿ ನಿರೂಪಣೆ ಕಡೆ ಗಮನಹರಿಸಿದ ಸುಷ್ಮಾ ಜೀನ್ಸ್ ಹಾಗೂ ಸೀರಿಯಲ್ ಸಂತೆ ಯಂತಹ ಕಾರ್ಯಕ್ರಮಗಳಲ್ಲಿ ನಿರೂಪಣೆ ಮಾಡಿದ್ದಾರೆ.

ಆದರೆ ಸುಷ್ಮಾ ಮತ್ತು ಪ್ರೀತಮ್ ಗುಬ್ಬಿ ಪ್ರೀತಿಸಿ ಮದುವೆಯಾಗಿದ್ದು ಹೆಚ್ಚು ವರ್ಷ ಸಂಸಾರ ಮಾಡಲಿಲ್ಲ ಈ ಜೋಡಿ. ದಾಂಪತ್ಯ ಜೀವನದಲ್ಲಿ ಕಲಹ ಉಂಟಾಗಿ ವಿಚ್ಚೇಧನ ಕೂಡ ಪಡೆದುಕೊಳ್ಳದೇ ಒಬ್ಬಂಟಿಯಾಗಿಯೇ ಜೀವನ ನಡೆಸುತ್ತಿದ್ದಾರೆ ನಟಿ ಸುಷ್ಮಾ. ಕೆಲ ಮಾಹಿತಿಗಳ ಪ್ರಕಾರ ಪತಿ ಪ್ರೀತಮ್ ಸುಷ್ಮಾ ಅವರಿಗೆ ಕಾಟ ಕೊಡುತ್ತಿದ್ದರು ಎಂದು ಹೇಳಲಾಗಿದೆ. ಆದರೆ ಮತ್ತೊಂದು ಮಾಹಿತಿಗಳ ಪ್ರಕಾರ ಸ್ವತಃ ಸುಷ್ಮಾ ಅವರೇ ತನ್ನ ಪತಿಯನ್ನ ಬಿಟ್ಟು ಬಂದು ಒಂಟಿ ಜೀವನ ನಡೆಸುತ್ತಿದ್ದಾರೆ ಎಂದು ಹೇಳಲಾಗಿದೆ.