ಬೀದಿ ನಾಯಿ ಹಿಡಿಯಲು ಹೋದ ಮೇಘನಾ ರಾಜ್ ಮಗ ರಾಯನ್, ಕೊನೆಗೆ ನಾಯಿ ಮಾಡಿದ್ದೇನು.? ವೈರಲ್ ವೀಡಿಯೋ

ನಟಿ ಮೇಘನಾ ರಾಜ್ ಅವರು ತಮ್ಮ ಪತಿ ಚಿರಂಜೀವಿ ಸರ್ಜಾ ಅವರ ಅಗಲಿಕೆಯಿಂದ ಬಹಳ ನೊಂದಿದ್ದರು ವರ್ಷಗಳ ಕಾಲ ಅವರ ನೋವಿನಲ್ಲಿ ಬೇಯುತ್ತಿದ್ದ ಮೇಘನಾ ಇತ್ತೀಚಿಗಷ್ಟೇ ಥೈಲ್ಯಾಂಡ್ ಟ್ರಿಪ್ ಗೆ ಕೂಡ ಹೋಗಿದ್ದರು. ಥೈಲ್ಯಾಂಡ್ ಟ್ರಿಪ್ಪಿಗೆ ಹೋದ ವಿಚಾರದ ಬಗ್ಗೆ ಕೂಡ ಹಲವಾರು ನೆಗೆಟಿವ್ ಕಮೆಂಟ್ಸ್ ಗಳು ಬರುತ್ತಿದ್ದು ಇದಕ್ಕೆ ಮೇಘನಾ ರಾಜ್ ತಂದೆ ಸುಂದರ ರಾಜ ಹಾಗೂ ನಟಿ ಮೇಘನಾ ರಾಜ್ ತಮ್ಮ ಅಭಿಮಾನಿಗಳಿಗೆ ಕಡಕ್ಕಾಗಿ ವಾರ್ನಿಂಗ್ ನೀಡಿದ್ದರು.

 

 

ನಟಿ ಮೇಘನಾ ರಾಜ್ ತುಂಬಾ ಇಷ್ಟಪಟ್ಟು ಮದುವೆಯಾಗಿದ್ದ ಚಿರಂಜೀವಿ ಸರ್ಜಾ ಅವರನ್ನು ಕಳೆದುಕೊಂಡು ಬಹಳ ನೊಂದಿದ್ದರು ಹಲವಾರು ವರ್ಷಗಳ ಕಾಲ ಅವರ ನೆನಪಿನಲ್ಲೆ ಜೀವಿಸುತ್ತಿದ್ದರು ಇದೀಗ ನಟಿ ಮೇಘನಾ ತಮ್ಮ ಮಗ ರಾಯನ್ ಮುಖ ನೋಡುತ್ತಾ ಹೇಗೋ ತಮ್ಮ ನೋವನ್ನು ಮರೆತು ಜೀವಿಸುತ್ತಿದ್ದಾರೆ. ನಟಿ ಮೇಘನಾ ತಮ್ಮ ಮಗ ರಾಯನ್ ರಾಜ್ ಸರ್ಜಾನಾ ಮುಖವನ್ನು ನೋಡುತ್ತಾ ತನ್ನ ಪತಿಯನ್ನು ಅವನ ಮುಖದಲ್ಲೇ ಕಾಣುತ್ತಾ ಹೇಗೋ ಖುಷಿ ಖುಷಿಯಿಂದ ಜೀವನ ನಡೆಸುತ್ತಿದ್ದಾರೆ. ನಟಿ ಮೇಘನಾರಾಜ್ ತಮ್ಮ ಪತಿ ಚಿರಂಜೀವಿ ಸರ್ಜಾ ತಮ್ಮ ಮಗನ ರೂಪದಲ್ಲಿ ಹುಟ್ಟಿ ಬಂದಿದ್ದಾನೆ ಎಂದು ನಂಬುತ್ತಾರೆ.

ದೇವರು ಒಂದನ್ನು ಕಸಿದುಕೊಂಡರು ಮತ್ತೊಂದು ನೀಡುತ್ತಾನೆ ಎಂಬುದಕ್ಕೆ ಇದು ಸಾಕ್ಷಿಯಾಗಿದೆ. ರಾಯನ್ ರಾಜ್ ಸರ್ಜಾ ತಮ್ಮ ತಾಯಿ ಮೇಘನಾ ರಾಜ್ ರವರ ಜೊತೆ ಪ್ರೀತಿಯಿಂದಲೇ ಬೆಳೆಯುತ್ತಿದ್ದಾನೆ. ನಟಿ ಮೇಘನಾ ರಾಜ್ ತನ್ನ ಮಗನಲ್ಲಿ ಚಿರುವನ್ನು ನೋಡುತ್ತಾ ತನ್ನ ನೋವನ್ನು ಮರೆಯಲು ಪ್ರಯತ್ನಿಸುತ್ತಿದ್ದಾರೆ. ಇದೀಗ ರಾಯನ್ ರಾಜ ಸರ್ಜನ ಒಂದು ವಿಡಿಯೋ ಸಿಕ್ಕಾಪಟ್ಟೆ ವೈರಲ್ ಆಗಿದೆ. ನಟಿ ಮೇಘನಾ ರಾಜ್ ತಮ್ಮ ಮಗ ರಾಯನ್ ರಾಜ್ ಸರ್ಜಾ ನನ್ನು ಚಿರು ಸಾಮಾಧಿಗೆ ಆಗಾಗ ಕರೆದುಕೊಂಡು ಬರುತ್ತಾರೆ. ಅಲ್ಲಿ ಕುಳಿತು ಸ್ವಲ್ಪ ಹೊತ್ತು ಮನಸ್ಸಿಗೆ ನೆಮ್ಮದಿಯಾದ ನಂತರ ವಾಪಸ್ ಮರಳುತ್ತಾರೆ. ಇದೀಗ ನಟಿ ಮೇಘನಾ ರಾಜ್ ಮಗ ರಾಯನ್ ನ ಒಂದು ವಿಡಿಯೋ ಎಲ್ಲಾ ಕಡೆ ವೈರಲಾಗಿತ್ತು.

 

ಧ್ರುವ ಸರ್ಜಾ ರವರ ಫಾರ್ಮ್ ಹೌಸ್ ನಲ್ಲಿ ನಟಿ ಮೇಘನಾ ರಾಜ್ ಮಗ ಬೀದಿ ನಾಯಿ ಜೊತೆ ಆಟವಾಡುತ್ತಿರುವ ವಿಡಿಯೋ ಇದೀಗ ವೈರಲ್ ಆಗಿದೆ. ಕುಟುಂಬದ ಸದಸ್ಯರೊಂದಿಗೆ ತಮ್ಮ ತಂದೆ ಚಿರಂಜೀವಿ ಸರ್ಜಾ ಅವರ ಸಮಾಧಿಯ ಬಳಿ ಹೋದ ರಾಯನ್ ರಾಜ ಸರ್ಜಾ ಒಂದು ಬೀದಿ ನಾಯಿಯನ್ನು ನೋಡಿ ಅದನ್ನು ಹಿಡಿಯಲು ಅದರ ಹಿಂದೆ ಓಡಿದ್ದಾನೆ . ಆ ಶ್ವಾನ ಕೂಡ ರಾಯನ್ ರಾಜ್ ಸರ್ಜಾ ನನ್ನು ಚೆನ್ನಾಗಿ ಆಟವಾಡಿಸಿದೆ. ಸದ್ಯಕ್ಕೆ ಈ ವಿಡಿಯೋ ವೈರಲ್ ಆಗಿದ್ದು ಇದನ್ನು ನೋಡಿದ ಅಭಿಮಾನಿಗಳು ಕೂಡ ಸಿಕ್ಕಾಪಟ್ಟೆ ಖುಷಿ ಪಟ್ಟಿದ್ದಾರೆ. ನಟಿ ಮೇಘನಾ ರಾಜ್ ಇನ್ನೊಮ್ಮೆ ರಾಯನ್ ಗಾಗಿ ಒಂದು ಹೊಸ ಜೀವನವನ್ನು ಕಟ್ಟಿಕೊಡಲು ಸಿನಿಮಾಗಳಲ್ಲು ಕೂಡ ನಟಿಸಲು ಪ್ರಾರಂಭಿಸುತ್ತಿದ್ದಾರೆ. ನಟಿ ಮೇಘನಾ ಹಾಗೂ ಚಿರಂಜೀವಿ ಸರ್ಜಾ ರವರ ಅಭಿಮಾನಿಗಳು ಮೇಘನಾ ರವರ ಸಿನಿಮಾಗಳಿಗಾಗಿ ಕಾಯುತ್ತಿದ್ದಾರೆ.