ಕನ್ನಡ ಸಿನಿಮಾ ಬೇಡ ಅಂತ ಓಡಿ ಹೋಗಿದ್ದರು ಆದರೆ, ಈಗ ಕಾಂತಾರ ನೋಡಿ ಕಂಗಾಲಾದ ಶಿಲ್ಪಾ, ಅನುಷ್ಕಾ ಶೆಟ್ಟಿ

ಕಾಂತಾರ ಸಿನಿಮಾವನ್ನು ನೋಡಿ ಆ ಸಿನಿಮಾಕ್ಕೆ ಶಿಲ್ಪಾ ಶೆಟ್ಟಿ ಪ್ರತಿಕ್ರಿಯಿಸಿದ್ದಾರೆ. ಧನುಷ್ ಪ್ರಭಾಸ್ ಇನ್ನು ಅನೇಕ ತಮಿಳು ತೆಲುಗು ನಟ ನಟಿಯರು ಕೂಡ ಕಾಂತರಾ ಸಿನಿಮಾ ಕುರಿತು ಮಾತನಾಡಿದರು. ಆದರೆ ಬಾಲಿವುಡ್ ನ ಯಾವುದೇ ನಟ ಅಥವಾ ನಟಿ ಕಾಂತರಾ ಸಿನಿಮಾದ ಬಗ್ಗೆ ಮಾತನಾಡಿರಲಿಲ್ಲ. ಶಿಲ್ಪಾ ಶೆಟ್ಟಿ ಅವರು ಮೊದಲನೇ ಬಾರಿಗೆ ಕಾಂತರಾ ಸಿನಿಮಾದ ಬಗ್ಗೆ ಮಾತನಾಡಿದ್ದಾರೆ. ಕಾಂತಾರ ಸಿನಿಮಾ ತುಂಬಾ ಚೆನ್ನಾಗಿ ಮೂಡಿ ಬಂದಿದೆ. ಆ ಸಿನಿಮಾದಲ್ಲಿ ಕೊನೆಯ 30 ನಿಮಿಷವನ್ನು ಮಾತಿನಿಂದ ವರ್ಣಿಸಲು ಸಾಧ್ಯವೇ ಇಲ್ಲ ಅಷ್ಟು ಅದ್ಭುತವಾಗಿದೆ ಎಂದರು.

ಕೇವಲ ಭಾರತ ಮಾತ್ರವಲ್ಲದೆ ಇಡೀ ವಿಶ್ವವೇ ಕನ್ನಡ ಸಿನಿಮಾ ಇಂಡಸ್ಟ್ರಿಯನ್ನು ತಿರುಗಿ ನೋಡುವಂತೆ ಕನ್ನಡದ ಡೈರೆಕ್ಟರ್ ಗಳು ಹಾಗೂ ಕನ್ನಡದ ಸಿನಿಮಾಗಳು ಎಲ್ಲೆಡೆ ಖ್ಯಾತಿಯನ್ನು ಪಡೆದಿವೆ. ಇಂತಹ ಅದ್ಭುತವಾದ ಸಿನಿಮಾವನ್ನು ಚಿತ್ರೀಕರಿಸಿರುವುದಕ್ಕೆ ರಿಷಬ್ ಶೆಟ್ಟಿ ಅವರಿಗೆ ನಾನು ಹ್ಯಾಟ್ಸ್ ಆಫ್ ಹೇಳುತ್ತೇನೆ. ಸಿನಿಮಾದಲ್ಲಿ ವರ್ಕ್ ಮಾಡಿರುವ ಎಲ್ಲರಿಗೂ ಕೂಡ ನನ್ನದೊಂದು ಸಲಾಂ ಎಂದು ಶಿಲ್ಪಾ ಶೆಟ್ಟಿಯವರು ಕಾಂತಾರ ಸಿನಿಮಾ ಕುರಿತು ಮಾತನಾಡಿದ್ದಾರೆ.

ಮೂಲತಹ ಮಂಗಳೂರಿನವರೇ ಆದ ಬಟ್ಟಲು ಕಣ್ಣಿನ ಮೋಹಕ ತಾರೆ ಶಿಲ್ಪಶೆಟ್ಟಿಯವರು ಕನ್ನಡದಲ್ಲಿ ಹಲವಾರು ಸಿನಿಮಾಗಳನ್ನು ಮಾಡಿದ್ದಾರೆ. ನಂತರ ಬಾಲಿವುಡ್ ನಲ್ಲಿ ಸ್ಟಾರ್ ನಟಿಯಾಗಿ ಮೆರೆದರು ಕೂಡ ಎಂದಿಗೂ ಕನ್ನಡವನ್ನು ಮರೆಯಲಿಲ್ಲ. ಹಲವಾರು ರಿಯಾಲಿಟಿ ಶೋಗಳಲ್ಲಿ ಕನ್ನಡದವರನ್ನು ಕನ್ನಡದಲ್ಲಿ ಮಾತನಾಡಿಸುತ್ತಾರೆ. ಕೆಲವೊಮ್ಮೆ ಮಾತನಾಡುವಾಗಲೂ ಕನ್ನಡವನ್ನು ಬಳಸುತ್ತಾರೆ. ಇವರು ಭೂತಕೋಲವನ್ನು ಕೂಡ ನೋಡಲು ತಮ್ಮ ಕುಟುಂಬದವರೊಡನೆ ಮಂಗಳೂರಿಗೆ ಬರುತ್ತಾರಂತೆ. ಇವರಿಗೆ ಮಂಗಳೂರಿನ ಸಂಸ್ಕೃತಿಯನ್ನು ಆಧಾರವಾಗಿಟ್ಟುಕೊಂಡು ಮಾಡಿದ ಈ ಸಿನಿಮಾ ತುಂಬಾ ಇಷ್ಟವಾಗಿದೆ ಅವರ ಸಂಸ್ಕೃತಿಯ ಬಗ್ಗೆ ತುಂಬಾ ಹೆಮ್ಮೆ ಎನಿಸಿದೆ ಎಂದು ಕೂಡ ಮಾತನಾಡಿದ್ದಾರೆ.

ಕನ್ನಡ ಇಂಡಸ್ಟ್ರಿ ಇಂದು ಪ್ರಪಂಚದಾದ್ಯಂತ ಖ್ಯಾತಿಯನ್ನು ಪಡೆಯುತ್ತಿದೆ ತೆಲುಗಿನ ಪ್ರಭಾಸ್ ತಮಿಳಿನ ಕಾರ್ತಿಕ್, ಧನುಷ್, ಸುದೀಪ್ ಬಹುತೇಕ ಎಲ್ಲಾ ಸ್ಟಾರ್ ನಟರು ಕೂಡ ಕಾಂತಾರ ಬಗ್ಗೆ ಮಾತನಾಡುತ್ತಿದ್ದಾರೆ. ಇಡೀ ಪ್ರಪಂಚವೇ ಕನ್ನಡ ಸಿನಿಮಾದ ಕಡೆ ತಿರುಗಿ ನೋಡಲಿ ಕನ್ನಡ ಸಿನಿಮಾಗಳು ಎಲ್ಲಾ ಕಡೆ ಪ್ರಖ್ಯಾತಿಯನ್ನು ಪಡೆಯಲಿ ಎಂಬುದೇ ನಮ್ಮ ಆಶಯ.