ಇಬ್ಬರು ಗಂಡಂದಿರ ಕೈಯಲ್ಲಿ ಒಂದೇ ಸಾರಿ ಸಿಕ್ಕಿಹಾಕಿಕೊಂಡ ಚಾಲಾಕಿ ಹೆಂಡತಿ

ಬಿಹಾರ್ ನಲ್ಲಿ ನಾವು ಎಂದು ಕೇಳರಿಯದ ವಿಚಿತ್ರ ಘಟನೆಯೊಂದು ನಡೆದಿದೆ. ಅದೇನೆಂದರೆ, ಶಾಂತದೇವಿ ಎನ್ನುವ ಮಹಿಳೆ ಇಬ್ಬರು ವ್ಯಕ್ತಿಗಳನ್ನು ವಿವಾಹವಾಗಿದ್ದು ಆ ಇಬ್ಬರು ಗಂಡಸರು ಶಾಂತಾದೇವಿ ಗಾಗಿ ಕೈ ಹಿಡಿದುಕೊಂಡು ಜಗ್ಗಾಡುತ್ತಿರುವ ದೃಶ್ಯ ಬಿಹಾರ್ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಕಂಡು ಬಂದಿದೆ. ಒಬ್ಬನ ಹೆಸರು ರಮೇಶ್ ಲಾಲ್ ಹಾಗೂ ಇನ್ನೊಬ್ಬರ ಹೆಸರು ಗೋಪಾಲ್ ಮಿಶ್ರ ಶಾಂತದೇವಿ ಎನ್ನುವ ಮಹಿಳೆ ಈ ಇಬ್ಬರು ಗಂಡಸರನ್ನು ಕೂಡ ವಿವಾಹವಾಗಿ ಅವರಿಬ್ಬರ ಕೈಗೆ ಒಮ್ಮೆಲೇ ಸಿಕ್ಕಿಹಾಕಿಕೊಂಡಿದ್ದಾಳೆ ಇಂತಹ ವಿಚಿತ್ರ ಘಟನೆಯೊಂದು ಬಿಹಾರ್ ನಲ್ಲಿ ನಡೆದಿದೆ.

ಶಾಂತಾದೇವಿ ರಮೇಶ್ ಲಾಲ್ ನನ್ನು ಎಂಟು ವರ್ಷದ ಹಿಂದೆ ವಿವಾಹವಾಗಿದ್ದಳು. ಇವರಿಬ್ಬರಿಗೂ ಎರಡು ಮುದ್ದಾದ ಮಕ್ಕಳು ಕೂಡ ಇದ್ದರು ಈ ಶಾಂತದೇವಿ ಗಂಡನ ಜೊತೆ ಜಗಳ ಮಾಡಿಕೊಂಡು ಒಂದಲ್ಲ ಎರಡಲ್ಲ ಆರು ತಿಂಗಳಾದರೂ ತನ್ನ ತವರು ಮನೆಯನ್ನು ಬಿಟ್ಟು ತನ್ನ ಗಂಡನ ಮನೆಗೆ ಹೋಗಲೇ ಇಲ್ಲ ಕೊನೆಗೆ ರಮೇಶ್ ಲಾಲ್ ಹೆಂಡತಿಯನ್ನು ಕರೆದುಕೊಂಡು ಬರೋಣ ಎಂದು ಹೆಂಡತಿಯ ತವರು ಮನೆಗೆ ಹೋದಾಗ ಆತನಿಗೆ ಒಂದು ಶಾಕ್ ಕಾದಿತ್ತು.

ಹೇಗೋ ಗಂಡನಾದ ರಮೇಶ ಲಾಲ್ ಹೆಂಡತಿಯ ಮನವೊಲಿಸಿ ವಾಪಸ್ ಕರೆದುಕೊಂಡು ಬರೋಣ ವೆಂದುಕೊಂಡಿದ್ದ ಇಬ್ಬರು ಮಕ್ಕಳು ಕೂಡ ಇದ್ದು ಅವರ ಭವಿಷ್ಯಕ್ಕೆ ಅನ್ಯಾಯವಾಗಬಾರದು, ನಾನೇ ಸೋತರೂ ಪರವಾಗಿಲ್ಲ ಎಂದು ರಮೇಶ್ ಲಾಲ್ ತನ್ನ ಹೆಂಡತಿಯನ್ನು ಕರೆದುಕೊಂಡು ಬರಲು ಅವರ ತವರು ಮನೆಗೆ ಹೋಗಿದ್ದ ಆದರೆ ಅಲ್ಲಿ ಅವನ ಹೆಂಡತಿ ಆಗಾಗಲೇ ಗೋಪಾಲ್ ಮಿಶ್ರ ಎನ್ನುವ ವ್ಯಕ್ತಿಯನ್ನು ವಿವಾಹವಾಗಿದ್ದಳು. ಇದೀಗ ರಮೇಶ್ ಲಾಲ್ ಹಾಗೂ ಗೋಪಾಲ್ ಮಿಶ್ರ ಇವರಿಬ್ಬರೂ ಇವಳು ನನ್ನ ಹೆಂಡತಿ, ಇವಳು ನನಗೆ ಬೇಕು ಎಂದು ಇಬ್ಬರೂ ಒಂದೊಂದು ಕೈಯನ್ನು ಹಿಡಿದುಕೊಂಡು ಶಾಂತದೇವಿಯನ್ನು ಎಳೆದಾಡುತ್ತಿದ್ದಾರೆ. ಈ ಘಟನೆ ಪೊಲೀಸ್ ಸ್ಟೇಷನ್ ಮುಂದೆಯೇ ನಡೆದಿದೆ.

ಶಾಂತಾದೇವಿಯ ಮೊದಲನೇ ಪತಿ ರಮೇಶ್ ಲಾಲ್ ಕೂಲಿ ಕಾರ್ಮಿಕನಾಗಿದ್ದು ಈತ ತನ್ನ ಹೆಂಡತಿ ಶಾಂತದೇವಿಯನ್ನು ದಿನ ಬಯುತ್ತಿರುತ್ತಾನೆ. ಆದರೆ, ಎರಡನೇ ಗಂಡ ಮೋಹನ್ ಲಾಲ್ ಸ್ವಂತ ಅಂಗಡಿಯಿಂದ ಇಟ್ಟುಕೊಂಡು ತನ್ನ ಹೆಂಡತಿ ಶಾಂತದೇವಿಯನ್ನು ಚೆನ್ನಾಗಿ ನೋಡಿಕೊಳ್ಳುತ್ತಿರುತ್ತಾನೆ. ಆದರೆ ಮಕ್ಕಳು ಮಾತ್ರ ಮೊದಲನೇ ಗಂಡ ರಮೇಶ್ ಲಾಲ್ ಬಳಿಯೇ ಇದ್ದಾರೆ. ಈಗ ಏನು ಮಾಡಬೇಕು ಎನ್ನುವ ಪರಿಸ್ಥಿತಿ ಶಾಂತದೇವಿಯದು, ತನ್ನ ಜೀವನದ ಸುಖ ದುಃಖಗಳನ್ನೂ ಯೋಚಿಸದೆ ಮೊದಲನೇ ಗಂಡನ ಜೊತೆಗೆ ಇದ್ದು ತಮ್ಮ ಮಕ್ಕಳ ಭವಿಷ್ಯ ವನ್ನು ನೋಡಬೇಕೊ ಅಥವಾ ಮಕ್ಕಳ ಭವಿಷ್ಯವನ್ನೂ ನೋಡದೆ ಚೆನ್ನಾಗಿ ನೋಡಿಕೊಳ್ಳುವ ಎರಡನೇ ಗಂಡನ ಜೊತೆ ಇರಬೇಕಾ ಎಂದು ಈ ಶಾಂತಾದೇವಿ ಕೂಡ ಯೋಚಿಸುತ್ತಿದ್ದಾಳೆ.