೩೦೦ ಕ್ಕೂ ಹೆಚ್ಚು ಚಿತ್ರಗಳಲ್ಲಿ ನಟಿಸಿರುವ ಹಿರಿಯ ನಟ ಜೈ ಜಗದೀಶ್ ರವರ ಅಳಿಯ ಕನ್ನಡದ ದೊಡ್ಡ ನಟ

ಯಾವುದೇ ಕೃತಕಥೆ ಇಲ್ಲದೆ ಸಾದಾಸೀದ ವ್ಯಕ್ತಿತ್ವದ ನಟ ಜೈ ಜಗದೀಶ್ 64ರ ಅರೆಯದರಲ್ಲೂ ಹ್ಯಾಂಡ್ಸಮ್ ಆಗಿದ್ದಾರೆ. ಅಂಬರೀಶ್, ವಿಷ್ಣುವರ್ಧನ್, ಶಂಕರ್ ನಾಗ್, ಅನಂತ್ ನಾಗ್ ಹೀಗೆ ಇವರ ಸಮಕಾಲಿನವರೆ ಜೈ ಜಗದೀಶ್. ಜೈ ಜಗದೀಶ್ ರವರು ಸುಮಾರು 300ಕ್ಕೂ ಹೆಚ್ಚು ಚಿತ್ರಗಳಲ್ಲಿ ನಟಿಸಿದ್ದಾರೆ. 1976 ರಲ್ಲಿ “ಫಲಿತಾಂಶ” ಎಂಬ ಚಿತ್ರದ ಮೂಲಕ ಜೈ ಜಗದೀಶ್ ರವರು ಕನ್ನಡ ಚಿತ್ರರಂಗಕ್ಕೆ ಎಂಟ್ರಿ ಕೊಟ್ಟರು.

1978 ರಲ್ಲಿ ಪುಟ್ಟಣ್ಣ ಕಣಗಾಲ್ ರವರ ಪಡುವಾರಹಳ್ಳಿ ಪಾಂಡವರು ಎಂಬ ಚಿತ್ರದ ಮೂಲಕ ಇವರು ಕನ್ನಡ ಚಿತ್ರರಂಗದಲ್ಲಿ ಬ್ರೇಕ್ ಪಡೆದುಕೊಂಡರು. ವಿಷ್ಣುವರ್ಧನ್ ಹಾಗೂ ಸುಹಾಸಿನಿ ಯವರ ಜೊತೆ ಬಂಧನ ಚಿತ್ರದಲ್ಲಿ ಇವರು ನಟಿಸಿದ್ದು ಬಂಧನ ಚಿತ್ರದಲ್ಲಿ ಇವರ ನಟನೆಯನ್ನು ಇಂದಿಗೂ ಯಾರು ಮರೆಯಲು ಸಾಧ್ಯವೇ ಇಲ್ಲ. 1998ರಲ್ಲಿ ತೆರೆ ಕಂಡ “ಭೂಮಿ ತಾಯಿಯ ಚೊಚ್ಚಲ ಮಗ” ಚಿತ್ರದ ನಿರ್ಮಾಪಕರಾಗಿ ಹೊರಹೊಮ್ಮಿದರು. ಇವರಿಗೆ ಹೆಚ್ಚು ಹೆಸರು ತಂದು ಕೊಟ್ಟಿದ್ದು “ಗಾಳಿಮಾತು” ಎಂಬ ಚಿತ್ರ ಇವರು “ಮದನ್” ಎಂಬ ಚಿತ್ರದ ಮೂಲಕ ನಿರ್ದೇಶನಕ್ಕೂ ಕೂಡ ಇಳಿದರು.

ನಟ ಜೈ ಜಗದೀಶ್ ರವರು ನಂತರ ಹಲವಾರು ಚಿತ್ರಗಳನ್ನು ಕೂಡ ನಿರ್ದೇಶಿಸಿದ್ದಾರೆ. ಜೈ ಜಗದೀಶ್ ರವರು ಮೊದಲಿಗೆ ರೂಪ ಎನ್ನುವವರನ್ನು ವಿವಾಹವಾಗಿದ್ದರು ನಂತರ ಇವರ ದಾಂಪತ್ಯದಲ್ಲಿ ಕೆಲವು ವರ್ಷಗಳ ನಂತರ ಬಿರುಕು ಮೂಡಿದ್ದು ಇವರು ರೂಪಾ ರವರಿಗೆ ವಿಚ್ಛೇದನವನ್ನು ನೀಡಿದರು ಜೈ ಜಗದೀಶ್ ರವರಿಗೆ ತಮ್ಮ ಮೊದಲ ಹೆಂಡತಿಯಿಂದ ಅರ್ಪಿತ ಎನ್ನುವ ಮಗಳು ಒಬ್ಬಳು ಇದ್ದಾಳೆ.

ತದನಂತರ ಖ್ಯಾತ ನಿರ್ದೇಶಕ ರಾಜೇಂದ್ರ ಸಿಂಗ್ ಬಾಬುರವರ ಸಹೋದರಿ, ವಿಜಯಲಕ್ಷ್ಮಿ ಸಿಂಗ್ ರವರನ್ನು ವಿವಾಹವಾದರು ಇವರಿಗೆ ವೈಭವಿ ವೈನಿಧಿ ವೈಸಿರಿ ಎಂಬ ಮೂವರು ಹೆಣ್ಣು ಮಕ್ಕಳಿದ್ದಾರೆ. ಜೈ ಜಗದೀಶ್ ರವರು ಇತ್ತೀಚಿಗೆ ಮುಕ್ತಾಯಗೊಂಡ ಬಿಗ್ ಬಾಸ್ ಸೀಸನ್ ಏಳರಲ್ಲೂ ಕೂಡ ಭಾಗವಹಿಸಿದ್ದರು. ಬಿಗ್ ಬಾಸ್ ನ ಮೂಲಕ ಕಿರುತೆರೆಯ ಪ್ರೇಕ್ಷಕರನ್ನು ಕೂಡ ರಂಜಿಸಿದ್ದರು.

ಜೈ ಜಗದೀಶ್ ರವರು ತಮ್ಮ ಮಕ್ಕಳಾದ ವೈಭವಿ ವೈನಿಧಿ ವೈಸಿರಿ ರವರನ್ನು ಈಗಾಗಲೇ ಕನ್ನಡ ಚಿತ್ರರಂಗಕ್ಕೆ ಪರಿಚಯ ಮಾಡಿ ಕೊಟ್ಟಿದ್ದು ಈ ಮೂವರು “ಯಾನ” ಎನ್ನುವ ಚಿತ್ರದಲ್ಲಿ ಒಟ್ಟಿಗೆ ಕಾಣಿಸಿಕೊಂಡಿದ್ದರು. ತದನಂತರ ಇವರು ಹಲವಾರು ಚಿತ್ರಗಳಲ್ಲಿ ಕಾಣಿಸಿಕೊಂಡಿದ್ದು ಇತ್ತೀಚಿಗಷ್ಟೇ ಬಿಡುಗಡೆಯಾದ ಡಾಲಿ ಧನಂಜಯ್ ಅಭಿನಯದ “ರತ್ನನ್ ಪ್ರಪಂಚ” ಚಿತ್ರದಲ್ಲೂ ಕೂಡ ಜೈ ಜಗದೀಶ್ ರವರ ಮಗಳು ವೈಭವಿ ಕಾಣಿಸಿಕೊಂಡಿದ್ದರು.

ಜೈ ಜಗದೀಶ್ ಪತ್ನಿ ವಿಜಲಕ್ಷ್ಮೀ ಸಿಂಗ್ ಕೂಡ ಕಿರುತೆರೆಯಲ್ಲಿ ಸಕ್ರಿಯ ವಾಗಿದ್ದು ಪ್ರಸ್ತುತ ಜಿ ಕನ್ನಡದ ಜೊತೆ ಜೊತೆಯಲಿ ಧಾರವಾಹಿಯಲ್ಲಿ ಮೇಘಾ ಶೆಟ್ಟಿ ಹಾಗೂ ಅನಿರುಧ್ ರವರ ಜೊತೆ ನಟಿಸುತ್ತಿದ್ದಾರೆ. ನಿರ್ದೇಶಕ ರಾಜೇಂದ್ರ ಸಿಂಗ್ ಬಾಬು ರವರ ಮಗ ಡೆಡ್ಲಿ ಸೋಮ ಖ್ಯಾತಿಯ ಆದಿತ್ಯ ರವರು ಜೈ ಜಗದೀಶ್ ಹಾಗೂ ವಿಜಯಲಕ್ಷ್ಮಿ ಸಿಂಗ್ ರವರ ಸೋದರಳಿಯ ಆಗಬೇಕು. ಆದಿತ್ಯ ಕೂಡ ಕನ್ನಡ ಚಿತ್ರರಂಗದಲ್ಲಿ ಹಲವಾರು ಚಿತ್ರಗಳಲ್ಲಿ ನಟಿಸಿದ್ದಾರೆ.