ಹೆಣ್ಣು ಮಗು ಆಗಲಿಲ್ಲ ಎಂದು ಮಾಸ್ಟರ್ ಆನಂದ್ ಮಾಡಿದ ಕೆಲಸ ನೋಡಿದರೆ ನಿಜಕ್ಕೂ ಹ್ಯಾಟ್ಸಾಫ್ ಹೇಳಬೇಕು ಅನಿಸುತ್ತದೆ

ಈಗಿನ ಕಾಲದಲ್ಲಿ ಹೆಣ್ಣು ಮಗು ಎಂದರೆ ಮೂಗು ಮುರಿಯುವವರು ಇದ್ದಾರೆ. ಕೆಲವೊಬ್ಬರು ಗಂಡು ಮಗು ಆಗಿಲ್ಲವೆಂದು ತಮ್ಮ ಸೊಸೆಯನ್ನೇ ಬದಲಿಸಲು ಕೂಡ ತಯಾರಾಗಿರುತ್ತಾರೆ. ಇನ್ನು ಕೆಲವರು ಹೆಣ್ಣು ಮಗು ಆಯಿತು ಎಂದು ಸಂಭ್ರಮವನ್ನು ಆಚರಿಸುವವರು ಕೂಡ ಇದ್ದಾರೆ. ಇದೆಲ್ಲದಕ್ಕೂ ಮೀರಿ ಮಾಸ್ಟರ್ ಆನಂದ್ ರವರು ಒಂದು ಕೆಲಸವನ್ನು ಮಾಡಿದ್ದಾರೆ ಇದನ್ನು ನೋಡಿದಾಗ ಮಾಸ್ಟರ್ ಆನಂದ್ ಗ್ರೇಟ್ ಎನಿಸಿಬಿಡುತ್ತಾರೆ. ಕಳೆದ ವರ್ಷವಷ್ಟೇ ಜೀ ಕನ್ನಡ ವಾಹಿನಿಯಲ್ಲಿ ನನ್ನಮ್ಮ ಸೂಪರ್ ಸ್ಟಾರ್ ಎನ್ನುವ ರಿಯಾಲಿಟಿ ಶೋ ಒಂದು ಶುರುವಾಗಿತ್ತು ಅದರಲ್ಲಿ ಪುಟ್ಟ ಪುಟ್ಟ ಮಕ್ಕಳು ತಮ್ಮ ತಾಯಿಯೊಂದಿಗೆ ಎಂಟ್ರಿ ನೀಡಿದ್ದರು.

ಆ ರಿಯಾಲಿಟಿ ಶೋ ನಲ್ಲಿ ವಂಶಿ ಎನ್ನುವವರು ಕೂಡ ಎಂಟ್ರಿ ನೀಡಿದರು ಆ ಮಗು ಬೇರೆ ಯಾರು ಅಲ್ಲ ಮಾಸ್ಟರ್ ಆನಂದ್ ರವರ ಮಗಳು ಇದ್ದದ್ದನ್ನು ಇದ್ದ ಹಾಗೆ ಮಾತನಾಡುವ ವಂಶಿಕ ಅಂಜನಿ ಕಶ್ಯಪ ರವರನ್ನು ನೋಡಿದಾಗ ಮಾಸ್ಟರ್ ಆನಂದ್ ರವರ ಬಾಲ್ಯವೇ ನೆನಪಾಗುತ್ತದೆ. ಮಾಸ್ಟರ್ ಆನಂದ್ ಮಗಳು ವಂಶಿಕರನ್ನು ನೋಡಿದಾಗ ಮಾಸ್ಟರ್ ಆನಂದ್ ಬಾಲ್ಯದಲ್ಲಿ ನಟಿಸಿದ್ದ ಗೌರಿ ಗಣೇಶ ಸಿನಿಮಾವೇ ತಟ್ಟಂತ ನೆನಪಿಗೆ ಬರುತ್ತದೆ. ಮಾಸ್ಟರ್ ಆನಂದ ಬಾಲ್ಯದಲ್ಲಿ ಎಷ್ಟು ಚುರಕಾಗಿದ್ದರೋ ಅದಕ್ಕಿಂತ 10 ಪಟ್ಟು ಅವರ ಮಗಳು ಚುರುಕಾಗಿದ್ದಾಳೆ. ವಂಚಿಕ ಅಂಜನಿ ಕಶ್ಯಪ ರವರ ಪಟ ಪಟ ಮಾತುಗಳು ಒಮ್ಮೆ ಆಶ್ಚರ್ಯವನ್ನುಂಟು ಮಾಡಿದರೆ ಇನ್ನೊಮ್ಮೆ ಹೊಟ್ಟೆ ಹುಣ್ಣಾಗಿ ವಂತೆ ನಗಿಸುತ್ತವೆ.

ಇನ್ನು ಮಾಸ್ಟರ್ ಆನಂದ್ ಅವರ ವೈಯಕ್ತಿಕ ಜೀವನದ ವಿಷಯಕ್ಕೆ ಬಂದರೆ ಮಾಸ್ಟರ್ ಆನಂದ್ ರವರು ಕಳೆದ 12 ವರ್ಷಗಳ ಹಿಂದೆ ಎಂದರೆ 2010 ಯಶಸ್ವಿನಿ ಎನ್ನುವವರ ಜೊತೆ ವೈವಾಹಿಕ ಜೀವನಕ್ಕೆ ಕಾಲಿಟ್ಟಿದ್ದರು. ಹಲವು ತಿಂಗಳುಗಳ ನಂತರ ಯಶಸ್ವಿನಿ ಗರ್ಭಿಣಿಯಾದರೂ ಎಲ್ಲರೂ ಸಾಮಾನ್ಯವಾಗಿ ತಮ್ಮ ಮೊದಲನೇ ಮಗು ಗಂಡು ಮಗುವಾಗಿರಲಿ ಎಂದು ಬಯಸುತ್ತಾರೆ ಆದರೆ ಮಾಸ್ಟರ್ ಆನಂದ್ ಎಲ್ಲರಿಗಿಂತ ವಿಶೇಷವಾಗಿ ನನ್ನ ಮೊದಲನೇ ಮಗು ಹೆಣ್ಣು ಮಗುವಾಗಿರಬೇಕು ಎಂದು ಹಲವಾರು ದೇವರಲ್ಲಿ ಹರಕೆಯನ್ನು ಕಟ್ಟಿಕೊಂಡು ಬಹಳಷ್ಟು ದೇವರಲ್ಲಿ ಬೇಡಿಕೊಂಡಿದ್ದರು.

ಯಶಸ್ವಿನಿ ರವರಿಗೆ ಒಂಬತ್ತು ತಿಂಗಳು ತುಂಬುವ ವರೆಗೂ ನನಗೆ ಹೆಣ್ಣು ಮಗುವೇ ಆಗುವುದು ಎಂದು ಸಂಭ್ರಮಿಸಿದ್ದರಂತೆ ಆ ಮಗುವಿಗಾಗಿ ವಿಶೇಷ ಹೆಸರೊಂದನ್ನು ಆಯ್ಕೆ ಮಾಡಿದ್ದರಂತೆ ಹೆರಿಗೆ ಆದಾಗ ಗಂಡು ಮಗು ಎಂದು ಗೊತ್ತಾದ ನಂತರ ಮಾಸ್ಟರ್ ಆನಂದ್ ತಂದೆಯಾದೆ ಎನ್ನುವ ಸಂತೋಷ ಒಂದು ಕಡೆ ಆದರೆ ಹೆಣ್ಣು ಮಗು ಆಗಲಿಲ್ಲ ಎನ್ನುವ ದುಃಖ ಕೂಡ ನನಗೆ ಇತ್ತು ಬಹಳಷ್ಟು ದಿನಗಳ ಕಾಲ ಅದರ ಯೋಚನೆಯಲ್ಲಿ ಮುಳುಗಿದ್ದೆ ಎಂದರು. ಗಂಡು ಮಗು ಬೇಕು ಎಂದು ಎಲ್ಲರೂ ಆಸೆ ಪಡುತ್ತಿರುವಾಗ ಹೆಣ್ಣು ಮಗು ಎಂದರೆ ಸಾಕು ಮೂಗು ಮುರಿಯುವ ಈ ಕಾಲದಲ್ಲಿ ಮಾಸ್ಟರ್ ಆನಂದ್ ರವರು ಹೆಣ್ಣು ಮಗು ಬೇಕು ಎಂದು ಆಸೆ ಪಟ್ಟಿದ್ದರು.

ಇದರ ಬಗ್ಗೆ ಏನು ಹೇಳಬೇಕು ಎಂದೇ ಗೊತ್ತಾಗುತ್ತಿಲ್ಲ. ಮಾಸ್ಟರ್ ಆನಂದ್ ರವರು ತಮ್ಮ ಮಗಳಿಗಾಗಿ ಒಂದು ವಿಶೇಷ ಹೆಸರನ್ನು ಕೂಡ ಆಯ್ಕೆ ಮಾಡಿದ್ದು ಆ ಹೆಸರು ಹಾಗೆ ಉಳಿಯಬಾರದು ಅದು ನಮ್ಮ ಜೊತೆ ಇರಬೇಕು ಎಂದು ಒಂದು ಹೊಸ ಮನೆಯನ್ನು ಕಟ್ಟಿ ಆ ಮನೆಗೆ ಆ ಹೆಸರನ್ನ ಇಟ್ಟಿದ್ದರು. ಆನಂದ್ ರವರ ಮನಸ್ಸಿನಲ್ಲಿ ನನಗೆ ಹೆಣ್ಣು ಮಗು ಬೇಕು ಎನ್ನುವ ಬೇಜಾರಿತ್ತು ಇದರ ಬಗ್ಗೆ ದೇವರಿಗೆ ತಿಳಿಯಿತೋ ಏನೋ ಆನಂದ್ ಹಾಗೂ ಯಶಸ್ವಿನಿ ದಂಪತಿಗೆ ಎರಡನೆ ಮಗು ಹೆಣ್ಣಾಯಿತು ಆ ಕಂದನೇ ವಂಶಿಕ ಸಾಮಾನ್ಯವಾಗಿ ನನ್ನ ವಂಶವನ್ನು ಬೆಳಗುವವನು ಗಂಡು ಮಗ ಎಂದು ಎಲ್ಲರೂ ಅಂದುಕೊಂಡರೆ ಮಾಸ್ಟರ್ ಆನಂದ ತಮ್ಮ ಮಗಳೇ ನಮ್ಮ ಮನೆಯ ನಂದಾ ದೀಪ ಎಂದು ತಮ್ಮ ಮಗಳಿಗೆ ವಂಶಿಕ ಅಂಜನಿ ಕಶ್ಯಪ ಎಂದು ಹೆಸರಿಟ್ಟಿದ್ದಾರೆ.

ಮಾಸ್ಟರ್ ಆನಂದ ಹಾಗೂ ಯಶಸ್ವಿನಿರವರ ಮುದ್ದಿನ ಮಗಳು ವಂಶಿಕ ಅಂಜನಿ ಕಶ್ಯಪ ಇದೀಗಾಗಲೇ ನನ್ನಮ್ಮ ಸೂಪರ್ ಸ್ಟಾರ್ ರಿಯಾಲಿಟಿ ಶೋನಲ್ಲಿ ಭಾಗವಹಿಸಿ ವಿನ್ನರ್ ಆಗಿದ್ದು ಇದೀಗ ಗಿಚ್ಚ ಗಿಲಿ ಗಿಲಿ ಶೋನಲ್ಲೂ ಕೂಡ ವಿನ್ನರ್ ಆಗಿದ್ದಾರೆ. ವಂಶಿಕಾ ಅಂಜನಿ ಕಶ್ಯಪ ಇಷ್ಟು ಸಣ್ಣ ವಯಸ್ಸಿನಲ್ಲೇ ಹೆಚ್ಚು ಜನಪ್ರಿಯತೆಯನ್ನು ಪಡೆದುಕೊಂಡು ಕನ್ನಡಿಗರ ಮನಸನ್ನು ಗೆದ್ದಿದ್ದಾಳೆ. ಇವಳು ಡ್ಯಾನ್ಸ್ ನಲ್ಲೂ ಮುಂದು ಮಾತನಾಡುವುದರಲ್ಲಿ ಮುಂದಿದ್ದಾಳೆ ಡ್ರಾಮ ಮಾಡುವುದರಲ್ಲೂ ಮುಂದಿದ್ದಾಳೆ. ವಂಶಿಕ ಈಗಾಗಲೇ ತನ್ನ ಸ್ವಂತ ಯುಟ್ಯೂಬ್ ಅಕೌಂಟನ್ನು ಹೊಂದಿದ್ದು ಅದರಲ್ಲಿ ಶಾರ್ಟ್ ಮೂವಿ ಗಳನ್ನು ಅಪ್ಲೋಡ್ ಮಾಡುತ್ತಿರುತ್ತಾರೆ ತಮ್ಮ ತಾಯಿ ಯಶಸ್ವಿನಿ ಕೂಡ ವಂಶಿಕಾಗೆ ತುಂಬಾ ಸಪೋರ್ಟ್ ಮಾಡುತ್ತಾರೆ.