ಯಶ್ ಹೆಸರು ಕೇಳಿ ಸೃಜನ್ ಲೋಕೇಶ್ ಗರಂ : ಯಶ್ ಮಜಾ ಟಾಕೀಸ್‌ನಲ್ಲಿ ಏಕೆ ಭಾಗವಹಿಸುತ್ತಿಲ್ಲ ಎಂಬ ಸತ್ಯವನ್ನು ಹೇಳಿದ ಸೃಜನ್

ಕಲರ್ಸ್ ಕನ್ನಡ ವಾಹಿನಿಯಲ್ಲಿ ಮೂಡಿ ಬರುತ್ತಿದ್ದ ಮಜಾ ಟಾಕೀಸ್ ಕಾರ್ಯಕ್ರಮವನ್ನು ಸೃಜನ್ ಲೋಕೇಶ್ ರವರು ನಡೆಸಿಕೊಡುತ್ತಿದ್ದರು ಈ ಕಾರ್ಯಕ್ರಮದಲ್ಲಿ ಶ್ವೇತಾ ಚಂಗಪ್ಪರವರು ರಾಣಿ ಪಾತ್ರದಲ್ಲಿ ಕಾಣಿಸಿಕೊಂಡಿದ್ದರು ಹಾಗೆ ಕುರಿ ಪ್ರತಾಪ್ ಅಪರ್ಣ ಪೂಜಾ ಲೋಕೇಶ್ ಇನ್ನು ಮುಂತಾದ ಕಲಾವಿದರು ಮನೋರಂಜನೆಯನ್ನು ನೀಡುತ್ತಾ, ಈ ಕಾರ್ಯಕ್ರಮದ ಮೆರುಗನ್ನು ಹೆಚ್ಚಿಸಿದ್ದರು.

ಗಿರಿಜಾ ಹಾಗೂ ಲೋಕೇಶ್ ದಂಪತಿಗಳ ಸುಪುತ್ರ ಸೃಜನ್ ರವರು ಮಜಾ ಟಾಕೀಸ್ ಅನ್ನು ನಡೆಸಿಕೊಡುತ್ತಿದ್ದು ಈ ಶೋ ಕರ್ನಾಟಕದಾದ್ಯಂತ ಹೆಚ್ಚು ಪ್ರಖ್ಯಾತಿಯನ್ನು ಕೂಡ ಪಡೆದುಕೊಂಡಿದ್ದು ಇದರಲ್ಲಿ ಹಲವಾರು ಜನ ಸೆಲೆಬ್ರಿಟಿಗಳು ಕೂಡ ಬಂದು ಇವರು ನೀಡುತ್ತಿದ್ದ ಮನರಂಜನೆಯನ್ನು ನೋಡಿ ಹೊಟ್ಟೆ ಹುಣ್ಣಾಗುವಂತೆ ನಗುತ್ತಿದ್ದರು ಮಜಾ ಟಾಕೀಸ್ ಕಾರ್ಯಕ್ರಮ ತಮ್ಮ ಸಿನಿಮಾಗಳನ್ನು ಪ್ರಮೋಷನ್ ಮಾಡಿಕೊಳ್ಳುವುದಕ್ಕೆ ಒಂದು ಉತ್ತಮ ವೇದಿಕೆಯಾಗಿತ್ತು. ಹಾಗಾಗಿ ಸಿನಿರಂಗದ ಕಲಾವಿದರೆಲ್ಲರೂ ಮಜಾ ಟಾಕೀಸ್ ಗೆ ಬರುತ್ತಿದ್ದರು.

ಮಜಾ ಟಾಕೀಸ್ ಕಾರ್ಯಕ್ರಮದಲ್ಲಿ ಪುನೀತ್ ರಾಜಕುಮಾರ್, ಶಿವರಾಜಕುಮಾರ್ ,ಸುದೀಪ್, ದರ್ಶನ್, ರಚಿತಾ ರಾಮ್ ,ಆಶಿಕಾ ರಂಗನಾಥ್, ಹರಿಪ್ರಿಯಾ, ಶಾನ್ವಿ ಶ್ರೀವತ್ಸ ಇನ್ನು ಮುಂತಾದ ಕಲಾವಿದರೆಲ್ಲರೂ ಆಗಮಿಸಿ ಈ ಕಾರ್ಯಕ್ರಮವನ್ನು ವೀಕ್ಷಿಸಿದ್ದರು ಇದರ ಜೊತೆಗೆ ಹೊಟ್ಟೆ ಹುಣ್ಣಾಗುವಂತೆ ಮಜಾ ಟಾಕೀಸ್ ತಂಡದ ಕಲಾವಿದರು ಮಾಡುವ ತಮಾಷೆಗಳನ್ನು ನೋಡಿ ನಕ್ಕಿದ್ದರು. ಮಜಾ ಟಾಕೀಸ್ ಇದೀಗಾಗಲೇ ಮೂರು ಸೀಸನ್ ಗಳನ್ನು ಕಂಪ್ಲೀಟ್ ಮಾಡಿದ್ದು ಒಂದೊಂದು ಸೀಸನ್ ಅಲ್ಲೂ ಕೂಡ ನೂರಾರು ಎಪಿಸೋಡ್ ಗಳನ್ನು ಕಂಡಿದೆ ಸೃಜನ್ ಲೋಕೇಶ್ ರವರ ತಂಡದ ಕಾಮಿಡಿಯು ಕರ್ನಾಟಕದ ಜನತೆಗೆ ಇಷ್ಟವಾಗಿ ಮಜಾ ಟಾಕೀಸ್ ಅನ್ನು ಮತ್ತೆ ಶುರು ಮಾಡಿ ಎಂದು ಕೂಡ ಜನರು ಬೇಡಿಕೊಳ್ಳುತ್ತಿದ್ದಾರೆ.

ಸೃಜನ್ ಲೋಕೇಶ್ ರವರು ಟಾಕಿಂಗ್ ಸ್ಟಾರ್ ಸೃಜನ್ ಎಂದೇ ಪ್ರಖ್ಯಾತಿಯನ್ನು ಪಡೆದುಕೊಂಡಿದ್ದಾರೆ. ಇವರು ನಟನಾಗಿ ಬಿಗ್ ಬಾಸ್ ನಲ್ಲಿ ಸ್ಪರ್ಧೆಯಾಗಿ ಕನ್ನಡಿಗರಿಗೆ ಇಷ್ಟವಾಗಿದ್ದರು ಆದರೆ ಮಜಾ ಟಾಕೀಸ್ ನ ಮೂಲಕ ಸೃಜನ್ ಲೋಕೇಶ್ ರವರು ಕನ್ನಡಿಗರ ಮನೆ ಮಾತಾಗಿದ್ದಾರೆ. ಸೃಜನ್ ಲೋಕೇಶ್ ರವರು ಮಜಾ ಟಾಕೀಸ್ ಮೂಲಕ ಹೆಚ್ಚು ಪ್ರಖ್ಯಾತಿಯನ್ನು ಪಡೆದುಕೊಂಡರು

ಕಳೆದ ವರ್ಷವಷ್ಟೇ ಮಜಾ ಟಾಕೀಸ್ ಗ್ರಾಂಡ್ ಫಿನಾಲೆ ಕೂಡ ನಡೆದಿತ್ತು ಯಾವುದೇ ಕಾರ್ಯಕ್ರಮವಾದರೂ ಕೂಡ ಅದಕ್ಕೆ ಒಂದು ಕೊನೆ ಎಂಬುದು ಇರಲೇ ಬೇಕು ಹಾಗಾಗಿ ಮಜಾ ಟಾಕೀಸ್ ಅನ್ನು ಕೊನೆಗೊಳಿಸಿದರು ಆದರೆ ಜನರು ಮಜಾ ಟಾಕೀಸ್ನ ಬಗ್ಗೆ ಒಲವನ್ನು ತೋರಿಸುತ್ತಿದ್ದು ಮತ್ತೊಮ್ಮೆ ಮಜಾ ಟಾಕೀಸ್ ಶುರು ಮಾಡಿ ಎಂದು ಕೂಡ ಕೇಳಿಕೊಳ್ಳುತ್ತಿದ್ದಾರೆ. ಸೃಜನ್ ಲೋಕೇಶ್ ರವರು ಇದೀಗ ನನ್ನಮ್ಮ ಸೂಪರ್ ಸ್ಟಾರ್ ರಿಯಾಲಿಟಿ ಶೋನಲ್ಲಿ ಬಿಸಿಯಾಗಿದ್ದಾರೆ ನನ್ನಮ್ಮ ಸೂಪರ್ ಸ್ಟಾರ್ ಶೋನಲ್ಲಿ ಸೃಜನ್ ಲೋಕೇಶ್ ರವರು ಜಡ್ಜ್ ಆಗಿ ಕಾಣಿಸಿಕೊಂಡಿದ್ದು ಇವರು ಭಾಗವಹಿಸುವ ಎಲ್ಲಾ ಶೋಗಳನ್ನು ಕೂಡ ಟಿಆರ್‌ಪಿ ಇದ್ದೇ ಇರುತ್ತದೆ.

ಸೃಜನ್ ಲೋಕೇಶ್ ರವರ ಮಜಾ ಟಾಕೀಸ್ ಶೋ ವನ್ನು ಮತ್ತೆ ಶುರು ಮಾಡುವಂತೆ ಜನರು ಬೇಡಿಕೆ ಇಡುತ್ತಿದ್ದು ಇದೀಗ ಸೃಜನ್ ಲೋಕೇಶ್ ಮತ್ತೆ ಲೈವ್ ಬಂದು ಮಜಾ ಟಾಕೀಸ್ ಬಗ್ಗೆ ಮಾತನಾಡಿದ್ದಾರೆ. ಮಜಾ ಟಾಕೀಸ್ ಕಾರ್ಯಕ್ರಮಕ್ಕೆ ಯಶ್, ಗಣೇಶ್ ಎಲ್ಲರನ್ನು ಕರೆದಿದ್ದೇನೆ ಆದರೆ ಅವರು ತಮ್ಮ ಶೂಟಿಂಗ್ನಲ್ಲಿ ಬಿಸಿ ಇರುತ್ತಾರೆ. ಶಿವಣ್ಣ ಪುನೀತ್ ಇವರೆಲ್ಲ ಯಾಕೆ ಬಂದಿಲ್ಲ ಎಂದು ಕೇಳಿದ್ದೀರಿ ಅವರು ಕೂಡ ನಮ್ಮ ಕಾರ್ಯಕ್ರಮಕ್ಕೆ ತದನಂತರ ಬಂದರು ಎಲ್ಲರಿಗೂ ಸಮಯದ ಅಭಾವವಿರುತ್ತದೆ. ಹಾಗಾಗಿ ಅವರು ಬರುವುದಿಲ್ಲ ನಾನು ಯಾರನ್ನು ಕರೆಯಬಾರದು ಎಂದು ಅಂದುಕೊಂಡಿಲ್ಲ ಎಲ್ಲರನ್ನು ಕೂಡ ಕರೆದಿದ್ದೇನೆ ಮಜಾ ಟಾಕೀಸ್ ಶೋ ನಡೆಯುತ್ತಿರುವುದೇ ಕನ್ನಡ ಸಿನಿಮಾಗಳನ್ನು ಪ್ರಮೋಟ್ ಮಾಡಲು ಹಾಗೂ ನಿಮಗೆಲ್ಲರಿಗೂ ಮನರಂಜನೆ ನೀಡಲು ನೀವೆಲ್ಲರೂ ನನ್ನ ಬೆನ್ನೆಲುಬಾಗಿ ನಿಂತು ನನ್ನ ಶೋಗೆ ಸಪೋರ್ಟ್ ಮಾಡುತ್ತಿರುವುದಕ್ಕೆ ನಾನು ಇಷ್ಟೇ ಎತ್ತರಕ್ಕೆ ಬೆಳೆದಿದ್ದೇನೆ ನಿಮಗೆಲ್ಲರಿಗೂ ಧನ್ಯವಾದಗಳು ಎಂದರು