ಮದರಂಗಿಯಲ್ಲಿ ಮನಸಿನ ರಂಗು ಮೂಡಿದೆ. ಅದಿತಿ ಪ್ರಭುದೇವಗೆ ಭಾವಿ ಪತಿಯ ಸಿಹಿಮುತ್ತು

ಕನ್ನಡ ಸಿನಿಮ ರಂಗದಲ್ಲಿ ಸ್ಟಾರ್ ನಟಿ ಹಾಗೂ ಬಹು ಬೇಡಿಕೆಯ ನಟಿಯಾಗಿ ಹೊರಹೊಮ್ಮಿರುವ ನಟಿ ಅದಿತಿ ಪ್ರಭುದೇವರವರು ಇದೀಗ ಮದುವೆಯ ಬಿಸಿಯಲ್ಲಿದ್ದಾರೆ. ಅದಿತಿ ಪ್ರಭುದೇವ ಸ್ಟಾರ್ ನಟಿಯಾಗಿದ್ದರು ಕೂಡ ಕನ್ನಡ ಚಿತ್ರರಂಗದಲ್ಲಿ ಒಂದೇ ಒಂದು ಕಪ್ಪು ಚುಕ್ಕೆ ಇಲ್ಲದೆ ಇಷ್ಟು ದಿನಗಳವರೆಗೂ ಸೌಜನ್ಯದಿಂದ ಚಿತ್ರಗಳಲ್ಲಿ ನಟಿಸಿಕೊಂಡು ಬರುತ್ತಿದ್ದಾರೆ. ನಾಳೆ ಬೆಂಗಳೂರಿನ ಅರಮನೆ ಮೈದಾನದ ಬಳಿ ಅದಿತಿ ಪ್ರಭುದೇವರವರ ಮದುವೆಯಾಗುತ್ತಿದೆ. ಇಂದು ಇವರ ಮದುವೆಯ ಅರಿಶಿಣ ಶಾಸ್ತ್ರ ನಡೆಯುತ್ತಿದ್ದು ಆ ಫೋಟೋಗಳನ್ನು ಇದೀಗ ಅದಿತಿ ಪ್ರಭುದೇವ ತಮ್ಮ ಸಾಮಾಜಿಕ ಜಾಲತಾಣಗಳಲ್ಲಿ ಶೇರ್ ಮಾಡಿಕೊಂಡಿದ್ದಾರೆ.

ಕನ್ನಡದ ಬಹು ಬೇಡಿಕೆ ನಟಿ ಅದಿತಿ ಪ್ರಭುದೇವರವರು ಯಶಸ್ ಎನ್ನುವ ಉದ್ಯಮಿಯನ್ನು ವಿವಾಹವಾಗುತ್ತಿದ್ದು ಯಶಸ್ರವರ ಜೊತೆ ನಾಳೆ ಅಧಿತಿ ಪ್ರಭುದೇವ ಹೊಸ ಜೀವನಕ್ಕೆ ಕಾಲಿಡುತ್ತಿದ್ದಾರೆ. ನಟಿ ಅದಿತಿ ಪ್ರಭುದೇವ ತಮ್ಮ ಭಾವಿಪತಿ ಯಶಸ್ರವರನ್ನು ತಮ್ಮ ಅಭಿಮಾನಿಗಳಿಗೆ ಹಲವಾರು ಬಾರಿ ಪರಿಚಯ ಮಾಡಿ ಕೊಟ್ಟಿದ್ದು ಹಲವಾರು ಕಾರ್ಯಕ್ರಮಗಳಿಗೂ ಕೂಡ ಅವರನ್ನು ಕರೆದುಕೊಂಡು ಹೋಗಿದ್ದಾರೆ. ನಟಿ ಅದಿತಿ ಪ್ರಭುದೇವರವರು ತಮ್ಮ ಭಾವಿಪತಿ ಯಶಸ್ ರವರ ಜೊತೆ ಕಾಡಿಗೆ ಹೋಗಿದ್ದರು ಅದರ ಎಕ್ಸ್ಪೀರಿಯನ್ಸ್ ಕೂಡ ಅವರು ತಮ್ಮ ಸೋಶಿಯಲ್ ಮೀಡಿಯಾ ಖಾತೆಯ ಮೂಲಕ ಹಂಚಿಕೊಂಡಿದ್ದರು.

ನಟಿಯ ಅದಿತಿ ಪ್ರಭುದೇವ ಕನ್ನಡ ಸಿನಿ ರಂಗದಲ್ಲಿ ಸಕ್ರಿಯರಾಗಿದ್ದು ಟಾಪ್ ನಟಿಯಾಗಿ ಬೆಳೆದಿದ್ದಾರೆ. ಆದರೆ ಅದಿಥಿ ರವರು ಉದ್ಯಮದ ಕ್ಷೇತ್ರದಲ್ಲಿರುವ ಯಶಸ್ರವರನ್ನು ತಮ್ಮ ಪತಿಯಾಗಿ ಆರಿಸಿಕೊಂಡಿದ್ದಾರೆ. ಯಶಸ್ ರವರು ಉದ್ಯಮಿ ಮಾತ್ರವಲ್ಲದೆ ಕಾಫಿ ಪ್ಲಾಂಟರ್ ಕೂಡ ಆಗಿದ್ದಾರೆ. ಅದಿತಿ ಪ್ರಭುದೇವ ತಮ್ಮ ಸೋಶಿಯಲ್ ಮೀಡಿಯಾ ಖಾತೆಯಲ್ಲಿ ನಾನು ಇಷ್ಟು ದಿನ ಕಾದಿದ್ದೆ ಇಂತಹ ಹುಡುಗನನ್ನು ಪಡೆದುಕೊಳ್ಳಲು ಎಂದು ಬರೆದುಕೊಂಡಿದ್ದರು.

ನಟಿ ಅದಿತಿ ಪ್ರಭುದೇವ ತಮ್ಮ ಮದುವೆಯ ಆಹ್ವಾನವನ್ನು ಹಲವಾರು ತಿಂಗಳುಗಳ ಮುಂಚೆ ಹೋದ ಕಾರ್ಯಕ್ರಮಗಳೆಲ್ಲ ತಮ್ಮ ಅಭಿಮಾನಿಗಳಿಗೆ ತಿಳಿಸುತ್ತಿದ್ದರು. ಇದೀಗಾಗಲೇ ನಟಿ ಅದಿತಿ ಪ್ರಭುದೇವ ತಮ್ಮ ಮದುವೆಯ ಆಹ್ವಾನ ಪತ್ರಿಕೆಯನ್ನು ಸ್ಯಾಂಡಲ್ವುಡ್ನ ಅನೇಕ ಗಣ್ಯರು ನಟ ನಟಿಯರು ತಂತ್ರಜ್ಞರಿಗೆ ಕೂಡ ನೀಡಿದ್ದು ಅವರೆಲ್ಲರೂ ನಾಳೆ ಅದಿತಿ ಪ್ರಭುದೇವರ ಮದುವೆಗೆ ಆಗಮಿಸುತ್ತಾರೆ. ಈ ತಿಂಗಳೇ ನಟಿ ಅದಿತಿರವರ ಎರಡು ಹೊಸ ಸಿನಿಮಾಗಳು ಕೂಡ ರಿಲೀಸ್ ಆಗುತ್ತಿದ್ದು ಇವರ ಆ ಹೊಸ ಪಾತ್ರಗಳಿಗೆ ಜನರ ಮೆಚ್ಚುಗೆಯು ಕೂಡ ಹರಿದು ಬರುತ್ತಿದೆ.

ನಟಿ ಅದಿತಿ ಪ್ರಭುದೇವ ಇದೀಗ ಯಶಸ್ ಎನ್ನುವ ಉದ್ಯಮಿಯನ್ನು ವಿವಾಹವಾಗುತ್ತಿದ್ದು ತಮ್ಮ ಮದುವೆಯ ನಂತರ ಅದಿತಿ ಸಿನಿಮಾ ರಂಗದಲ್ಲಿ ಮುಂದುವರೆಯುತ್ತಾರ ಅಥವಾ ಯಶ್ ರವರ ಪತ್ನಿ ರಾಧಿಕಾ ಪಂಡಿತ್ ಅವರಂತೆ ಸಿನಿಮಾರಂಗದಿಂದ ದೂರವಾಗುತ್ತಾರಾ ಎನ್ನುವ ಪ್ರಶ್ನೆ ಅಧಿತಿರವರ ಅಭಿಮಾನಿಗಳನ್ನು ಕಾಡುತ್ತಿದೆ. ಆದರೆ ಅಧಿತಿ ಇದರ ಬಗ್ಗೆ ಯಾವುದೇ ಮಾತನಾಡಿಲ್ಲ ಬಹುಶಃ ಇವರು ಸಿನಿಮಾರಂಗದಲ್ಲಿ ಮುಂದುವರೆಯುತ್ತಾರೆ ಎಂದು ಮೂಲಗಳಿಂದ ತಿಳಿದು ಬಂದಿದೆ.