ಜೊತೆ ಜೊತೆಯಲಿ ನಟಿ ರಶ್ಮಿ ಜಯರಾಜ್ ಮಗಳ ನಾಮಕರಣ ಹೆಸರೇನು ಗೊತ್ತಾ?

ಜೊತೆ ಜೊತೆಯಲಿ ದಾರಾವಾಹಿ ಖ್ಯಾತಿಯರಶ್ಮಿ ಜಯರಾಜ್ ರವರು ಇತ್ತೀಚಿಗಷ್ಟೇ ಹೆಣ್ಣು ಮಗುವಿನ ತಾಯಿಯಾಗಿದ್ದು ಅವರ ಮಗಳ ಮುಖವನ್ನು ಇಲ್ಲಿಯವರೆಗೂ ರಿವಿಲ್ ಮಾಡಿರಲಿಲ್ಲ ಇದೀಗ ತಮ್ಮ ಮಗಳ ಮುಖವನ್ನು ರಿವೀಲ್ ಮಾಡಿದ್ದು ಜೊತೆಗೆ ಮಗಳ ಜೊತೆಗೆ ತಂದೆ ಆಟವಾಡುತ್ತಿರುವ ವಿಡಿಯೋವನ್ನು ಕೂಡ ಹಂಚಿಕೊಂಡಿದ್ದಾರೆ.

ನಟಿ ರಶ್ಮಿ ಜಯರಾಜ್ ಮೂಲತಹ ಕರ್ನಾಟಕದವರು ಇವರು ಕಿರುತೆರೆ ಲೋಕದಲ್ಲಿ ಹೆಸರು ಮಾಡಿರುವ ವಿಧಿ ಧಾರವಾಹಿಯ ಮೂಲಕ ತಮಿಳು ಭಾಷೆಯಲ್ಲೂ ನಟಿಸಿದ್ದರು. ಇಷ್ಟೇ ಅಲ್ಲದೆ ಇದರ ಜೊತೆಗೆ ಹಲವಾರು ತಮಿಳು ಧಾರಾವಾಹಿಗಳಲ್ಲಿ ಅಭಿನಯಿಸಿದ್ದಾರೆ. ಇವರು ಜೀ ಕನ್ನಡ ವಾಹಿನಿಯಲ್ಲಿ ಪ್ರಸಾರವಾಗುವ ಜೊತೆ ಜೊತೆಯಲಿ ದಾರವಾಹಿಯಲ್ಲೂ ಕೂಡ ನಟಿಸಿದ್ದರು.

ರಶ್ಮಿ ಜಯರಾಜ್ ನವೆಂಬರ್ 27 2020 ರಲ್ಲಿ ಮೈಸೂರಿನಲ್ಲಿ ರಿಚ್ ಎನ್ನುವವರ ಜೊತೆ ಅದ್ದೂರಿಯಾಗಿ ತಮ ನಿಶ್ಚಿತಾರ್ಥವನ್ನು ಕೂಡ ಮಾಡಿಕೊಂಡಿದ್ದರು. ಫೆಬ್ರವರಿ 10 2021 ರಂದು ಚೆನ್ನೈನ ಚರ್ಚ್ ಒಂದರಲ್ಲಿ ನಟಿ ರಶ್ಮಿ ಜಯರಾಜ್ ರಚ್ಚು ರವರನ್ನು ವಿವಾಹವಾಗಿದ್ದರು. ಇದೇ ವರ್ಷ ಫೆಬ್ರವರಿ ತಿಂಗಳಿಂದ ತಾವು ತಾಯಿ ಆಗುತ್ತಿರುವ ವಿಚಾರವನ್ನು ಸೋಶಿಯಲ್ ಮೀಡಿಯಾದಲ್ಲಿ ತಮ್ಮ ಅಭಿಮಾನಿಗಳೊಂದಿಗೆ ಹಂಚಿಕೊಂಡಿದ್ದರು.

ಇದಾದ ನಂತರ ರಶ್ಮಿರವರ ಪತಿ ರಿಚ್ಚು ರಶ್ಮಿ ಜಯರಾಜ್ ರವರ ಸೀಮಂತವನ್ನೂ ಅದ್ದೂರಿಯಾಗಿ ಮಾಡಿದ್ದರು ನಟಿ ರಶ್ಮಿ ಜಯರಾಜ್ ತಮ್ಮ ಸೀಮಂತ ಕಾರ್ಯಕ್ರಮದಲ್ಲಿ ಹಸಿರು ಸೀರೆ ಹಾಗೂ ಕೆಂಪು ಡಿಸೈನ್ ಬ್ಲೌಸ್ ನಲ್ಲಿ ಮಿಂಚಿದ್ದರು. ಇವರು ಕುಳಿತಿದ್ದ ಜಾಗವನ್ನು ಬಿಳಿ ಹೂಗಳಿಂದ ಡಿಸೈನ್ ಮಾಡಲಾಗಿತ್ತು. ಇದಾದ ನಂತರ ಇವರು ಕೆಂಪು ಬಣ್ಣದ ಗೌನ್ ಒಂದನ್ನು ಧರಿಸಿ ಬೇಬೀ ಬಂಪ್ ಫೋಟೋ ಶೂಟ್ ಕೂಡ ಮಾಡಿಸಿಕೊಂಡಿದ್ದರು. ನಟಿ ರಶ್ಮಿ ಜಯರಾಜ್ ಅವರು ತಮ್ಮ ಸೀಮಂತ ಹಾಗೂ ಬೇಬಿ ಬಂಪ್ ಫೋಟೋ ಹಾಗೂ ವಿಡಿಯೋಗಳನ್ನು ತಮ್ಮ ಸೋಶಿಯಲ್ ಮೀಡಿಯಾ ಖಾತೆಯನ್ನು ಕೂಡ ಹಂಚಿಕೊಂಡಿದ್ದರು.

ಇದಾದ ನಂತರ ರಶ್ಮಿ ಜಯರಾಜ್ ಹೆಣ್ಣು ಮಗುವಿಗೆ ಜನ್ಮ ನೀಡಿದರು. ನಟಿ ರಶ್ಮಿ ಜಯರಾಜ್ ಹಾಗೂ ಅವರ ಪತೀ ರಿಚೂರವರು ತಮ್ಮ ಕುಟುಂಬ ಹಾಗೂ ಸ್ನೇಹಿತರ ಸಮ್ಮುಖದಲ್ಲಿ ತಮ್ಮ ಮಗಳಿಗೆ ಅರಿನಾ ರಿಚ್ಚು ಎಂದು ಹೆಸರಿಟ್ಟಿದ್ದಾರೆ. ತಮ್ಮ ಮಗಳ ಅದ್ದೂರಿ ನಾಮಕರಣವನ್ನು ಮಾಡುವ ಮೂಲಕ ಅವರ ಅಭಿಮಾನಿಗಳಿಗೆ ತಮ್ಮ ಮಗಳ ಮುಖವನ್ನು ತೋರಿಸಿದ್ದಾರೆ. ರಶ್ಮಿ ಜಯರಾಜ್ ರವರ ಮಗಳು ನೋಡುವುದಕ್ಕೆ ತುಂಬಾನೇ ಕ್ಯೂಟ್ ಆಗಿದ್ದಾಳೆ.

ನಟಿ ರಶ್ಮಿ ಜಯರಾಜ್ ಕೆಲವು ವರ್ಷಗಳ ಹಿಂದೆ ನಟ ವಿರಾಟ್ ಹಾಗೂ ಹಾಗೂ ನಟಿ ಆಶಿತಾ ಚಂದ್ರಪ್ಪ ನಟನೆಯ ಜೊತೆ ಜೊತೆಯಲಿ ದಾರವಾಹಿಯಲ್ಲಿ ಆಶಿತಾ ಚಂದ್ರಪ್ಪನವರ ತಂಗಿ ಪಾತ್ರದಲ್ಲಿ ರಶ್ಮಿ ಜಯರಾಜ್ ತೆರೆಯ ಮೇಲೆ ಕಾಣಿಸಿಕೊಂಡಿದ್ದರು. ಇದಾದ ನಂತರ ರಶ್ಮಿ ಜಯರಾಜ್ ಹೆಚ್ಚಾಗಿ ಲೀಡ್ ಪಾತ್ರಗಳ ಮೂಲಕವೇ ಕಿರುತೆರೆಯಲ್ಲಿ ಕಾಣಿಸಿಕೊಂಡಿದ್ದಾರೆ. ಇದಾದ ನಂತರ ರಶ್ಮಿ ಜಯರಾಜ್ ಜಸ್ಟ್ ಮಾತ್ ಮಾತಲ್ಲಿ, ಮದುಮಗಳು, ವಿಧಿ ,ನೀ ಹಚ್ಚಿದ ಕುಂಕುಮ ಮುಂತಾದ ಧಾರವಾಹಿಗಳಲ್ಲಿ ನಟಿ ರಶ್ಮಿ ಜಯರಾಜ್ ನಟಿಸಿದ್ದಾರೆ.ಕನ್ನಡ ಮಾತ್ರವಲ್ಲದೆ ಹಲವು ಬೇರೆ ಬೇರೆ ಭಾಷೆಗಳಲ್ಲೂ ಕೂಡ ರಶ್ಮಿ ಜಯರಾಜರವರಿಗೆ ಅಭಿಮಾನಿಗಳಿದ್ದಾರೆ, ರಶ್ಮಿರವರು ಬಣ್ಣದ ಲೋಕಕ್ಕೆ ಕಾಲಿಟ್ಟು ಈಗಾಗಲೇ ಏಳೆಂಟು ವರ್ಷಗಳು ಕಳೆದಿವೆ. ಇದೀಗ ನಟಿ ರಶ್ಮಿ ಜಯರಾಜ್ ತಮ್ಮ ಪತಿ ಹಾಗೂ ಮಗಳ ಜೊತೆ ಸಂತೋಷವಾಗಿ ಜೀವನವನ್ನು ಸಾಗಿಸುತ್ತಿದ್ದಾರೆ.