ಈ ಆರು ಅಡಿನಾ ಹೊಡೆಯೋಕೆ ಎಷ್ಟು ಜನ ಕಾಯ್ತಿಲ್ಲ ನಾನು ಮನಸ್ಸು ಮಾಡಿದ್ರೆ ನಾಲ್ಕರಷ್ಟು ಸಂಭಾವನೆಯನ್ನು ಪಡೆಯುತ್ತಿದ್ದೆ – ದರ್ಶನ್

ಈ ಹಿಂದೆ ಎಷ್ಟೇ ತೆಲುಗು ಇಂಡಸ್ಟ್ರಿಯ ಹಲವಾರು ನಿರ್ದೇಶಕರ ಒಕ್ಕೂಟವು ಸೇರಿಕೊಂಡು ಯಾವುದಾದರೂ ಹಬ್ಬಗಳಿದ್ದಲ್ಲಿ ಅಥವಾ ನಮ್ಮ ಭಾಷೆಯ ದೊಡ್ಡ ಸ್ಟಾರ್ ನಟರ ಸಿನಿಮಾಗಳು ಬಿಡುಗಡೆಯಾದಲ್ಲಿ ಬೇರೆ ಭಾಷೆಯ ಸಿನಿಮಾಗಳಿಗೆ ನಾವು ಥಿಯೇಟರ್ ಗಳನ್ನು ನೀಡಬಾರದು ಎಂದು ಯೋಜನೆಯನ್ನು ಹಾಕಿದ್ದರು ಆದರೆ ಡಿ ಬಾಸ್ ದರ್ಶನ್ ರವರು ಈ ವಿಚಾರವಾಗಿ ಎರಡು ವರ್ಷದ ಹಿಂದೆಯೇ ಮಾತನಾಡಿ ನಮ್ಮ ರಾಜ್ಯದಲ್ಲಿ ನಾವೇ ಕಿಂಗ್ ಆಗಿರಬೇಕೇ ಹೊರತು ಬೇರೆ ಯಾವ ಭಾಷೆಯವರು ಕಿಂಗ್ ಆಗಲು ಬಿಡಬಾರದು ಎಂದಿದ್ದರು ಡಿ ಬಾಸ್ ದರ್ಶನ್ ರವರ ಈ ವಿಚಾರ ಇಂದು ನಿಜವಾಗುತ್ತಿದೆ.

ಈ ಕುರಿತು ಡಿ ಬಾಸ್ ದರ್ಶನ್ ರವರು ಮಾತನಾಡಿ ಕಳೆದ ಎರಡು ವರ್ಷಗಳಿಂದ ನಮ್ಮ ಕರ್ನಾಟಕದಲ್ಲಿ ಬೇರೆ ಚಿತ್ರಗಳ ಹವಾ ನಡೆಯುತ್ತಿತ್ತು ನಮ್ಮ ಚಿತ್ರಗಳೆಲ್ಲ ಪಾತಾಳಕ್ಕೆ ಸೇರಿದವು ಆದ್ದರಿಂದ ನಾನು ಅಂದೇ ಆ ನಿರ್ಧಾರವನ್ನು ಕೈಗೊಂಡಿದ್ದೆ ಆದರೆ ಅದಕ್ಕೆ ಯಾರೂ ಕೂಡ ಸಪೋರ್ಟ್ ಮಾಡಲಿಲ್ಲ. ನಾವು ಬೇರೆ ಭಾಷೆಯ ಚಿತ್ರಗಳನ್ನು ಬೆಳೆಸಿದವು ಆಗ ನಾವು ತಳಹದಿಗೆ ಸೇರಿ ಹೋದೆವು ಇದೀಗ ನಮ್ಮ ಕನ್ನಡ ಇಂಡಸ್ಟ್ರಿ ತಲೆ ಎತ್ತಿ ದೇಶ ಅಲ್ಲದೆ ಪ್ರಪಂಚದಾದ್ಯಂತ ಸದ್ದು ಮಾಡುತ್ತಿದೆ.

ನಾನು ಬೇರೆ ಭಾಷೆಗಳಲ್ಲಿ ನಟಿಸುವುದಿಲ್ಲ ನಾನು ಕನ್ನಡ ಚಿತ್ರಗಳಲ್ಲಿ ಮಾತ್ರ ನಟಿಸುವುದು ಯಾಕೆಂದರೆ ಕರ್ನಾಟಕ ಜನತೆ ನನಗೆ ಅನ್ನ ಹಾಕಿದ್ದಾರೆ. ಅವರು ನನ್ನನ್ನು ಇಲ್ಲಿಯವರೆಗೂ ಇಷ್ಟು ಎತ್ತರಕ್ಕೆ ಬೆಳೆಸಿದ್ದಾರೆ. ನಾನು ಫುಟ್ಬಾತ್ ಮೇಲೆ ಇದ್ದೆ, ಇದೀಗ ನನ್ನನ್ನು ಉಪ್ಪರಿಗೆ ಮೇಲೆ ತಂದು ಕೂರಿಸಿದ್ದಾರೆ. ಹಾಗಾಗಿ ನನಗೆ ಅನ್ನ ಹಾಕಿದವರನ್ನು ಬಿಟ್ಟು ಬೇರೆಯವರ ಹತ್ತಿರ ನಾನ್ಯಾಕೆ ಕೆಲಸ ಮಾಡಲು ಹೋಗಲಿ ಎಂದರು.

ಕರ್ನಾಟಕ ಜನತೆ ನನಗೆ ಅನ್ನ ಹಾಕಿದ್ದಾರೆ ಅವರಿಗೆ ನಾನು ಇನ್ನೂ ಋಣಿಯಾಗಿರುತ್ತೇನೆ. ಈ ಆರು ಅಡಿಯನ್ನು ಹೊಡೆಯಲು ಎಷ್ಟು ಜನ ಕಾಯಿದುಕೊಂಡಿದ್ದಾರೆ ನಾನು ಈಗಲೂ ವಿಲ್ಲನ್ ಆದರೆ ಎಷ್ಟೋ ಜನಕ್ಕೆ ಖುಷಿಯು ಇದೆ ಹಾಗೆ ನನಗೂ ಕೂಡ ಹೆಚ್ಚು ಸಂಭಾವನೆ ಸಿಗುತ್ತದೆ. ನಾನು ಇನ್ನೂ ಕೂಡ ವಿಲನ್ ಆಗಿ ಅಭಿನಯಿಸುತ್ತೇನೆ ಎಂದರೆ ನನಗೆ ಇದಕ್ಕಿಂತ ನಾಲ್ಕು ಪಟ್ಟು ಹಣವನ್ನು ಕೊಡುತ್ತಾರೆ. ಆದರೆ ಕರ್ನಾಟಕ ಜನತೆ ನನ್ನನ್ನು ಹೀರೋ ಎಂದುಕೊಂಡಿದ್ದಾರೆ ಹಾಗಾಗಿ ನಾನು ಈ ಪಾತ್ರವನ್ನು ಮಾಡಲು ಇಷ್ಟಪಡುತ್ತೇನೆ.

ನಾನು ಕರ್ನಾಟಕದವನು ಹಾಗಾಗಿ ಕನ್ನಡ ಭಾಷೆಯಲ್ಲಿ ಸಿನಿಮಾ ಮಾಡುತ್ತಿದ್ದೇನೆ ನನ್ನಿಂದ ನಾಲ್ಕು ಜನ ಪ್ರೊಡ್ಯೂಸರ್ ಖುಷಿ ಪಡುತ್ತಿದ್ದಾರೆ. ಹಾಗೆ ಕೈತುಂಬ ಹಣವನ್ನು ಕೂಡ ಸಂಪಾದಿಸುತ್ತಿದ್ದಾರೆ ನಾನು ಇದೀಗ ಸರ್ಕಾರಿ ಶಾಲೆಯ ಬಗ್ಗೆ ಸಿನಿಮಾ ಮಾಡುತ್ತಿದ್ದು ಪ್ರತಿಯೊಂದು ರಾಜ್ಯದಲ್ಲೂ ಬೇರೆ ಬೇರೆ ರೀತಿಯ ತೊಂದರೆಗಳಿರುತ್ತವೆ. ನಾನು ಪ್ರತಿಯೊಂದು ರಾಜ್ಯದ ತೊಂದರೆಗಳನ್ನು ಹುಡುಕಿಕೊಂಡು ಆರು ವರ್ಷಗಳ ತನಕ ರಿಸರ್ಚ್ ಮಾಡಿಕೊಂಡು ಕುಳಿತಿರುವುದಕ್ಕೆ ಸಾಧ್ಯವಿಲ್ಲ ಎರಡು ವರ್ಷಕ್ಕೆ ಎರಡೆರಡು ಸಿನಿಮಾ ಮಾಡಿಕೊಂಡು ಆರಾಮಾಗಿದ್ದೇನೆ. ಹಾಗೆ ಜನರು ಕೂಡ ನನಗೆ ಸಪೋರ್ಟ್ ಮಾಡುತ್ತಿದ್ದಾರೆ ಹಾಗಾಗಿ ನಾನು ಬೇರೆ ಭಾಷೆಗೆ ಹೋಗುವುದಿಲ್ಲ ಎಂದರು ಡಿ ಬಾಸ್ ದರ್ಶನ್