ಕಣ್ಣೀರು ಹಾಕುತ್ತಿರುವ ನಟಿ ರಾಗಿಣಿ ದ್ವಿವೇದಿ: ದಿಢೀರ್ ಆಸ್ಪತ್ರೆಗೆ ದಾಖಲು​

ಚಿತ್ರರಂಗದಲ್ಲಿ ಸಾವುಗಳು ಅಪಘಾತಗಳು ನೋವುಗಳು ಒಂದೊಂದೇ ಆಗುತ್ತಲೇ ಇವೆ. ಇದೀಗ ಖ್ಯಾತ ನಟಿ ಒಬ್ಬರಿಗೆ ಅಪಘಾತ ಕೂಡ ಆಗಿದೆ ಎಂದು ಸುದ್ದಿ ಬಂದಿದೆ. ತುಪ್ಪ ಬೇಕಾ ತುಪ್ಪ ಹಾಡಿನಿಂದ ಪ್ರಸಿದ್ಧಿ ಪಡೆದುಕೊಂಡಿದ್ದ ರಾಗಿಣಿ ದ್ವಿವೇದಿರವರಿಗೆ(Ragini dvivedi) ಇದೀಗ ಅಪಘಾತವಾಗಿದ್ದು ಅವರನ್ನು ಆಸ್ಪತ್ರೆಗೆ ಕೂಡ ದಾಖಲಿಸಲಾಗಿದೆ. ನಟಿ ರಾಗಿಣಿ ದ್ವಿವೇದಿರವರು ಕನ್ನಡದ ಹಲವು ಚಿತ್ರಗಳಲ್ಲಿ ನಟಿಸಿದ್ದಾರೆ. ಕಳೆದ ವರ್ಷವಷ್ಟೇ ಡ್ರಗ್ಸ್ ಕಾರಣಗಳಿಂದ ಇವರು ಜೈಲಿಗೆ ಕೂಡ ಹೋಗಿ ಬಂದಿದ್ದರು ಇದೀಗ ಮತ್ತೆ ಕನ್ನಡ ಚಿತ್ರರಂಗದಲ್ಲಿ ತಮ್ಮ ಚಾಪನ್ನು ಮೂಡಿಸುತ್ತಿದ್ದು ಮತ್ತೊಮ್ಮೆ ಚಿತ್ರರಂಗಕ್ಕೆ ಪ್ರವೇಶ ಪಡೆಯಲು ಹಲವಾರು ಹಾಟ್ ಫೋಟೋಶೂಟ್ಗಳನ್ನು ಕೂಡ ಮಾಡಿಸಿದ್ದಾರೆ.

ಆದರೆ ಇದೀಗ ರಾಗಿಣಿರವರಿಗೆ ಶೂಟಿಂಗ್ ವೇಳೆಯಲ್ಲಿ ಕೈಗೆ ಗಾಯ ಮಾಡಿಕೊಂಡಿದ್ದಾರೆ. ರಾಗಿಣಿ ರವರು ತಮ್ಮ ಜೀವನದ ಕಹಿ ನೋವುಗಳನ್ನೆಲ್ಲ ಮುಗಿಸಿ ಬಂದ ನಂತರ ಸಿನಿತೆರೆಯ ಮೇಲೆ ಕಮಾಂಡೋ ಎನ್ನುವ ಸಿನಿಮಾದಲ್ಲಿ ನಟಿಸುತ್ತಿದ್ದರು ಇದೀಗ ಈ ಚಿತ್ರದಲ್ಲಿ ನಟಿಸುತ್ತಿರುವ ರಾಗಿಣಿ ರವರ ಕೈಗೆ ಪೆಟ್ಟಾಗಿದ್ದು ಅದಕ್ಕೆ ಚಿಕಿತ್ಸೆಯನ್ನು ಕೂಡ ರಾಗಿಣಿ ಪಡೆದುಕೊಳ್ಳುತ್ತಿದ್ದಾರೆ. ವೈದ್ಯರು ಕೂಡ ರಾಗಿಣಿರವರಿಗೆ ನಾಲ್ಕು ದಿನಗಳ ಕಾಲ ಸಂಪೂರ್ಣ ವಿಶ್ರಾಂತಿಯನ್ನು ಸೂಚಿಸಿದ್ದಾರೆ.

ಈ ಬಗ್ಗೆ ರಾಗಿಣಿರವರು ಕೂಡ ತುಂಬಾ ನೊಂದುಕೊಂಡಿದ್ದಾರೆ ತಮ್ಮ ಜೀವನದಲ್ಲಿ ಈಗಾಗಲೇ ಹಲವು ನೋವುಗಳನ್ನು ಅನುಭವಿಸಿರುವ ರಾಗಿಣಿ ಮತ್ತೊಮ್ಮೆ ಕನ್ನಡ ಚಿತ್ರರಂಗದಲ್ಲಿ ಮಿಂಚೋಣವೆಂದು ಹೊಸ ಸಿನಿಮಾ ಒಂದನ್ನು ಒಪ್ಪಿಕೊಂಡಿದ್ದರು ಆದರೆ, ಕಮಾಂಡೋ ಸಿನಿಮಾದ ಶೂಟಿಂಗ್ ನಲ್ಲಿ ರಾಗಿಣಿ ರವರ ಕೈಗೆ ಗಾಯವಾಗಿದ್ದು ಡಾಕ್ಟರ್ ಕೂಡ ರೆಸ್ಟ್ ತೆಗೆದುಕೊಳ್ಳಬೇಕು ಎಂದು ಸೂಚಿಸಿದ್ದಾರೆ. ಇದರಿಂದ ಬೇಸರ ವ್ಯಕ್ತಪಡಿಸಿದರೆ ನಾನು ಇನ್ನೇನು ಗುಣಮುಖಳಾಗಿದ್ದೇನೆ ಮತ್ತೊಮ್ಮೆ ಶೂಟಿಂಗ್ನ ಕಡೆಗೆ ಮುಖ ಮಾಡುತ್ತೇನೆ ಎಂದಿದ್ದಾರೆ.

 

View this post on Instagram

 

A post shared by Ragini dwivedi (@rraginidwivedi)

ಕನ್ನಡ ಚಿತ್ರರಂಗದಲ್ಲಿ ತುಪ್ಪದ ಹುಡುಗಿ ಎಂದೇ ಪ್ರಸಿದ್ಧಿಯನ್ನು ಪಡೆದುಕೊಂಡಿರುವ ರಾಗಿಣಿ ವೇದಿಯವರು ಮೂಲತಃ ಪಂಜಾಬಿನವರಾಗಿದ್ದು ಇವರಿಗೆ ಈಗಾಗಲೇ 32 ವರ್ಷ ವಯಸ್ಸಾಗಿದೆ. ಇವರ ವಿವಾಹ ಗಂಡ ಮಕ್ಕಳ ಬಗ್ಗೆ ಈಗಾಗಲೇ ಹಲವಾರು ವದಂತಿಗಳು ಹಬ್ಬಿದ್ದು ರಾಗಿಣಿರವರು ವೀರಮದಕರಿ ಎನ್ನುವ ಚಿತ್ರದ ಮೂಲಕ ಕನ್ನಡ ಚಿತ್ರರಂಗಕ್ಕೆ ಎಂಟ್ರಿ ಕೊಟ್ಟರು ಕನ್ನಡ ಭಾಷೆಯಲ್ಲಿ ಬಾಕ್ಸ್ ಆಫೀಸ್ ಅನ್ನು ಕೊಳ್ಳೆ ಹೊಡೆದ ಕೆಂಪೇಗೌಡ ,ಶಿವ, ಬಂಗಾರಿ, ರಾಗಿಣಿ ಐಪಿಎಸ್ ಮುಂತಾದ ಸಿನಿಮಾಗಳಲ್ಲಿ ಇವರು ನಟಿಸಿದ್ದಾರೆ.

ರಾಗಿಣಿರವರು ಸ್ತ್ರೀ ಪ್ರಾಮುಖ್ಯ ಚಿತ್ರವಾದ ರಾಗಿಣಿ ಐಪಿಎಸ್ ಚಿತ್ರದಲ್ಲಿ ಪೊಲೀಸ್ ಆಫೀಸರ್ ಆಗಿ ಕಾಣಿಸಿಕೊಂಡಿದ್ದರು. ಈ ಚಿತ್ರವನ್ನು ನೋಡಿದ ಮೇಲೆ ಇವರಿಗೆ ಅಭಿಮಾನಿಗಳ ಸಂಖ್ಯೆ ಕೂಡ ಹೆಚ್ಚಾಯಿತು. ಇವರು ಮೊದಲು ಮಾಡಲಿಂಗ್ ಕ್ಷೇತ್ರದಲ್ಲಿ ಮಿಂಚುತ್ತಿದ್ದರು ತದನಂತರ ಕನ್ನಡ ಚಿತ್ರರಂಗಕ್ಕೆ ಎಂಟ್ರಿ ನೀಡಿದರು. ರಾಗಿಣಿ ಕನ್ನಡ ಮಾತ್ರವಲ್ಲದೆ ತೆಲುಗು ಸಿನಿಮಾಗಳಲ್ಲೂ ಕೂಡ ಕಾಣಿಸಿಕೊಂಡಿದ್ದಾರೆ.

ನಟಿ ರಾಗಿಣಿ ದ್ವಿವೇದಿರವರು ಉಪೇಂದ್ರರವರ ಜೊತೆಗೆ ಆರಕ್ಷಕ ಚಿತ್ರ ಹಾಗೂ ಶಿವರಾಜ್ ಕುಮಾರ್ ಅವರ ಜೊತೆಗೆ ಶಿವಾ ಚಿತ್ರ ಸುದೀಪ್ ರವರ ಜೊತೆಗೆ ಕೆಂಪೇಗೌಡ ಮುಂತಾದ ಖ್ಯಾತ ನಟರ ಜೊತೆಗೆ ಸರಣಿ ಚಿತ್ರಗಳಲ್ಲಿ ತಮ್ಮ ನಟನೆಯನ್ನು ಪೂರೈಸಿದ್ದಾರೆ. ಇವರು ಮಲಯಾಳಂ ಚಿತ್ರಗಳಲ್ಲೂ ಕೂಡ ನಟಿಸಿದ್ದು ರಾಗಿಣಿ ದ್ವಿವೇದಿ ರವರು ತಮ್ಮ ಡ್ರಗ್ ಕೇಸ್ ನಿಂದ ಜೈಲಿಗೆ ಕೂಡ ಹೋಗಿದ್ದರು ಅಲ್ಲಿಂದ ಬಿಡುಗಡೆಯಾಗಿ ಬಂದು ಇದೀಗ ರಾಗಿಣಿರವರು ತಮ್ಮ ಹೊಸ ಚಿತ್ರವಾದ ಕಮೆಂಡೋನಲ್ಲಿ ನಟಿಸುತ್ತಿದ್ದು ಈ ವೇಳೆ ಅವರ ಕೈಗೆ ಗಂಭೀರವಾದ ಪೆಟ್ಟು ತಗುಲಿದೆ ಹಾಗಾಗಿ ವೈದ್ಯರು ನಾಲ್ಕು ದಿನಗಳ ಕಾಲ ರೆಸ್ಟ್ ತೆಗೆದುಕೊಳ್ಳುವಂತೆ ಸೂಚಿಸಿದ್ದಾರೆ. ನಟಿ ರಾಗಿಣಿರವರು ಕೂಡ ತಾವು ಸುಧಾರಿಸಿಕೊಂಡು ನಂತರ ಶೂಟಿಂಗ್ನಲ್ಲಿ ಭಾಗಿ ಆಗುತ್ತೇನೆ ಎಂದು ತಮ್ಮ ಅಭಿಮಾನಿಗಳಿಗೆ ತಿಳಿಸಿದ್ದಾರೆ.