ಲಕ್ಷ್ಮಿ ಹೆಬ್ಬಾಳ್ಕರ್ ಡ್ಯಾನ್ಸ್ ವಿಡಿಯೋ ವೈರಲ್

ಬೆಳಗಾವಿ ಗ್ರಾಮೀಣ ಕ್ಷೇತ್ರದ ಕಾಂಗ್ರೆಸ್ ಶಾಸಕಿ ಲಕ್ಷ್ಮಿ ಹೆಬ್ಬಾಳ್ಕರ್ ರವರ ಮಗನ ಅದ್ದೂರಿ ಮದುವೆ ಸಮಾರಂಭವು ಇತ್ತೀಚಿಗಷ್ಟೇ ನಡೆದಿದ್ದು. ಭದ್ರಾವತಿ ಶಾಸಕ ಸಂಗಮೇಶ್ ಸಹೋದರನ ಪುತ್ರಿ ಡಾ. ಹಿತಾರವರನ್ನು ಲಕ್ಷ್ಮಿ ಹೆಬ್ಬಾಳ್ಕರ್ ಅವರ ಪುತ್ರ ವಿವಾಹವಾಗಿದ್ದಾರೆ. ಈ ವಿವಾಹವು ಗೋವಾದಲ್ಲಿ ನಡೆದಿತ್ತು ಈ ವಿವಾಹ ಮಹೋತ್ಸವದಲ್ಲಿ ಬಹುತೇಕ ಕಾಂಗ್ರೆಸ್ ನಾಯಕರೆಲ್ಲರೂ ಭಾಗವಹಿಸಿದ್ದರು. ಡಿಕೆ ಶಿವಕುಮಾರ್, ಸಿದ್ದರಾಮಯ್ಯ, ಕೆಪಿಸಿಸಿ ಅಧ್ಯಕ್ಷ ಈಶ್ವರ್ ಕದ್ರ, ಅಜಯ್ ಸಿಂಗ್ ವಿವಾಹ ಮಹೋತ್ಸವಕ್ಕೆ ಶುಭ ಹಾರೈಸಿದರು.

ಲಕ್ಷ್ಮಿ ಹೆಬ್ಬಾಳ್ಕರ್ ಪುತ್ರ ಮೃಣಾಲ್ ಹಾಗೂ ಡಾಕ್ಟರ್ ಹಿತಾ ಅವರ ವಿವಾಹ ಅದ್ದೂರಿಯಾಗಿ ಜರುಗಿತು. ಭದ್ರಾವತಿಯ ಕಾಂಗ್ರೆಸ್ ಶಾಸಕ ಸಂಗಮೇಶ್ವರವರ ಸಹೋದರರ ಪುತ್ರಿಯ ಜೊತೆ ಮೃಣಾಲ್ ವಿವಾಹ ಮಹೋತ್ಸವ ಜರುಗಿತ್ತು. ಗೋವಾದ ಪ್ಯಾಲೇಸ್ ನಲ್ಲಿ ಈ ಅದ್ದೂರಿ ಮದುವೆ ಜರುಗಿದೆ. ರಾಜಕೀಯ ಜಂಜಾಟದಿಂದ ಬೇಸತ್ತಿದ್ದ ಲಕ್ಷ್ಮಿ ಹೆಬ್ಬಾಳ್ಕರ್ ಅವರು ಇದೀಗ ಮಗನ ಮದುವೆ ಸಂಭ್ರಮದಲ್ಲಿ ಖುಷಿಯಾಗಿ ಕುಣಿದು ಕುಪ್ಪಳಿಸಿದ್ದಾರೆ. ಲಕ್ಷ್ಮಿ ಹೆಬ್ಬಾಳ್ಕರ್ ತನ್ನ ಮಗನ ಮದುವೆಯಲ್ಲಿ ಮೈಮರೆತು ಕುಣಿಯುತ್ತಿರುವ ವಿಡಿಯೋ ಎಲ್ಲಾ ಕಡೆ ವೈರಲ್ ಆಗಿದ್ದು ನೆಟ್ಟಿಗರಿಗೆ ಒಂದು ಹೊಸ ವಿಷಯ ಸಿಕ್ಕಿದಂತಾಗಿದೆ.

ಇದೀಗ ಈ ವಿಡಿಯೋಗೆ ನೆಟ್ಟಿಗರು ಕಮೆಂಟ್ ಮಾಡುತ್ತಿದ್ದು ಪ್ರತಿಯೊಬ್ಬ ಮನುಷ್ಯನಿಗೂ ಕೂಡ ತನ್ನದೇ ಆದ ಪ್ರೈವೇಸಿ ಎನ್ನುವುದು ಇದ್ದೇ ಇರುತ್ತದೆ. ಲಕ್ಷ್ಮಿ ಹೆಬ್ಬಾಳ್ಕರ್ ರವರು ರಾಜಕೀಯ ಜಂಜಾಟದಿಂದ ಬೇಸತ್ತು ತಮ್ಮ ಮಗನ ಮದುವೆಯ ಖುಷಿಯಲ್ಲಿ ಕುಣಿಯುತ್ತಿದ್ದಾರೆ ಇದರ ಬಗ್ಗೆ ಯಾರೂ ಕೂಡ ತಕರಾರು ಮಾಡಬಾರದು ಎಂದು ಕಾಮೆಂಟ್ ಗಳು ಕೇಳಿ ಬರುತ್ತಿವೆ.