viral:ರಾಯಲ್ ಎನ್ಫೀಲ್ಡ್ ಬೈಕಿನಲ್ಲಿ ತನ್ನ ಹೆಂಡತಿಯನ್ನು ಹಿಂದೆ ಕೂರಿಸಿಕೊಂಡು ಎದ್ದು ನಿಂತು ಸ್ಟಂಟ್ ಮಾಡಿದ ಯುವಕ
ಯುವಕನೊಬ್ಬನ ವಿಚಿತ್ರ ಬೈಕ್ ಸ್ಟಂಟ್ ವಿಡಿಯೋ ಒಂದು ಇದೀಗ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿದ್ದು ಈತನ ಈ ಸ್ಟಂಟ್ ವಿಡಿಯೋ ನೋಡಿ ಎಲ್ಲರಿಗೂ ಸಿಟ್ಟು ಹಾಗೂ ಆಕ್ರೋಶಗಳು ಮೂಡಿಬಂದಿವೆ. ಈ ಅಸಹಜ ವರ್ತನೆಗೆ ಹಲವು ಜನರು ಆಘಾತವನ್ನು ಕೂಡ ವ್ಯಕ್ತಪಡಿಸಿದ್ದಾರೆ ಜೊತೆಗೆ ಕೋಪಗೊಂಡಿದ್ದಾರೆ ದಯವಿಟ್ಟು ಇದನ್ನು ಯಾರು ಅನುಸರಿಸಲು ಹೋಗಬೇಡಿ ಎಂದು ಕೂಡ ಎಚ್ಚರಿಕೆ ನೀಡಿದ್ದಾರೆ.
ಈಗಿನ ಕಾಲದಲ್ಲಿ ಸೋಶಿಯಲ್ ಮೀಡಿಯಾದಲ್ಲಿ ಲೈಕ್ಸ್ ಹಾಗೂ ಕಮೆಂಟ್ಸ್ ಗಳಿಗಾಗಿ ಜನರು ಏನನ್ನು ಬೇಕಾದರೂ ಕೂಡ ಮಾಡಲು ರೆಡಿ ಇರುತ್ತಾರೆ. ತಮ್ಮ ಹಲವಾರು ಅಸಹನೀಯ ವಿಡಿಯೋಗಳು, ಸಾಹಸದ ವಿಡಿಯೋಗಳ ಮೂಲಕ ಎಲ್ಲರನ್ನು ಮೆಚ್ಚಿಸಿ ಲೈಕ್ಸ್ ಕಮೆಂಟ್ಸ್ ಅನ್ನು ತೆಗೆದುಕೊಳ್ಳಬೇಕು ಎನ್ನುವ ಹುಚ್ಚು ಆಸೆಯಿಂದ ಜನರು ತಮ್ಮ ಜೀವವನ್ನೇ ಪಣಕ್ಕಿಟ್ಟು ಸಾಹಸ ಮಾಡಲು ಹೋಗುತ್ತಾರೆ.
ನಮ್ಮ ಜೀವಕ್ಕೆ ಅಪಾಯವನ್ನು ತಂದುಕೊಳ್ಳುವುದರ ಜೊತೆಗೆ ತಮ್ಮ ಜೊತೆ ಇದ್ದವರ ಜೀವಕ್ಕೂ ಕೆಲವೊಮ್ಮೆ ಅಪಾಯವನ್ನು ತಂದೋಡ್ಡುತ್ತಾರೆ ತಮ್ಮ ಲೈಕ್ ಕಮೆಂಟ್ಸ್ ನ ದುರಾಸೆಗಾಗಿ ಬೇರೆಯವರ ಜೀವವನ್ನು ಅಪಾಯಕ್ಕೆ ತಳ್ಳುವಂತಹ ಕೆಲಸಗಳು ಸಾಕಷ್ಟು ನಡೆದಿವೆ. ಇಂತಹ ದೃಶ್ಯಗಳನ್ನು ಸೆರೆ ಹಿಡಿದು ಸೋಶಿಯಲ್ ಮೀಡಿಯಾದಲ್ಲಿ ಅಪ್ಲೋಡ್ ಮಾಡಿ ಲೈಕ್ಸ್ ಗಳನ್ನು ತೆಗೆದುಕೊಂಡು ತಮ್ಮ ಪ್ರೊಫೈಲ್ ಹೆಚ್ಚು ವೀಕ್ಷಣೆ ಆಗಲಿ ಹೆಚ್ಚು ಫಾಲೋವರ್ಸ್ ಆಗಲಿ ನಮಗೆ ಎಂದು ಇತರ ಕೆಲಸಗಳನ್ನು ಯುವಕರು ಮಾಡುತ್ತಲೇ ಇರುತ್ತಾರೆ ಇಂಥ ವಿಡಿಯೋಗಳು ಆಗಾಗ ವೈರಲ್ ಆಗುತ್ತಿರುತ್ತವೆ. ಈ ವಿಡಿಯೋಗಳನ್ನು ನೋಡಿದ ಮೇಲೆ ಜನರಿಗೂ ಕೂಡ ಕೋಪ ನೆತ್ತಿಗೆ ಏರುತ್ತದೆ.
View this post on Instagram
ಇಂದು ಯುವಕನೊಬ್ಬ ತನ್ನ ಬೈಕ್ ಮೇಲೆ ಇದೇ ರೀತಿ ಸ್ಟಂಟ್ ಮಾಡಿದ್ದು ಬೈಕಿನಲ್ಲಿ ಜೊತೆಗೆ ತನ್ನ ಹೆಂಡತಿಯನ್ನು ಕೂರಿಸಿಕೊಂಡಿದ್ದಾನೆ ಇದೊಂದು ಅಪಾಯಕಾರಿ ವಿಡಿಯೋ ಆಗಿದ್ದು. ಇದು ತುಂಬಾ ಡೇಂಜರಸ್ ಆಗಿದ್ದು ಇಂಟರ್ನೆಟ್ ನಲ್ಲಿ ಎಲ್ಲಾ ಕಡೆ ಈ ವಿಡಿಯೋ ಹರಿದಾಡುತ್ತಿದೆ ಇದನ್ನು ನೋಡಿದ ನೆಟ್ಟಿಗರು ಆಕ್ರೋಶವನ್ನು ವ್ಯಕ್ತಪಡಿಸುತ್ತಾ ಜೊತೆಗೆ ಉದ್ಘಾರವನ್ನು ವ್ಯಕ್ತಪಡಿಸಿದ್ದಾರೆ ಹಾಗೆ ಹಲವರು ಇದರ ಬಗ್ಗೆ ಕಮೆಂಟ್ ಮಾಡಿದ್ದಾರೆ.
ಯುವಕನೊಬ್ಬ ತನ್ನ instagram ಖಾತೆಯಲ್ಲಿ ಈ ಸಾಹಸದ ವಿಡಿಯೋವನ್ನು ಹಂಚಿಕೊಂಡಿದ್ದು ದಂಪತಿಗಳಿಬ್ಬರು ಬೈಕಿನಲ್ಲಿ ಹೋಗುತ್ತಿರುವಾಗ ಈ ದೃಶ್ಯವನ್ನು ಚಿತ್ರೀಕರಿಸಲಾಗಿದೆ. ಬೈಕಿನ ಸವರ ಬೈಕನ್ನು ನಡೆಸುತ್ತಲೇ ಈ ಸ್ಟಂಟ್ ಮಾಡಲು ಮುಂದಾಗಿದ್ದಾನೆ. ಇದ್ದಕ್ಕಿದ್ದ ಹಾಗೆ ಎದ್ದು ನಿಂತು ತನ್ನ ಬೈಕಿನ ಮೇಲೆ ಬ್ಯಾಲೆನ್ಸ್ ಮಾಡುತ್ತಾ ಈ ವಿಡಿಯೋವನ್ನು ಚಿತ್ರೀಕರಿಸಿದ್ದು ಇದನ್ನು ನೋಡಿದಾಗ ತುಂಬಾ ಭಯ ಹಾಗೂ ಆತಂಕ ಉಂಟಾಗುತ್ತದೆ.
ಇದೊಂದು ಅಪಾಯಕಾರಿ ಸ್ಟಂಟ್ ಆಗಿದ್ದು ದಂಪತಿಗಳಿಬ್ಬರು ಬೈಕಿನಲ್ಲಿ ಹೋಗುತ್ತಿರುವಾಗ ಈ ವಿಡಿಯೋ ಕ್ಲಿಪ್ ಅನ್ನು ಶುರು ಮಾಡಿದ ತದನಂತರ ಆತ ಇದ್ದಕ್ಕಿದ್ದ ಹಾಗೆ ಎದ್ದು ನಿಂತು ತನ್ನ ಬೈಕನ್ನು ಬ್ಯಾಲೆನ್ಸ್ ಮಾಡುತ್ತಾನೆ ರಾಯಲ್ ಎನ್ಫೀಲ್ಡ್ ಬೈಕ್ ನಲ್ಲಿ ಈ ವಿಡಿಯೋ ಚಿತ್ರೀಕರಿಸಿದ್ದು ಹಿಂದೆ ಅವರ ಹೆಂಡತಿ ಕೂಡ ಕೂತಿರುತ್ತಾಳೆ. ಈ ಬೈಕಿನಲ್ಲಿ ಆತ ಇದ್ದಕ್ಕಿದ್ದಂತೆ ಬ್ಯಾಲೆನ್ಸ್ ಮಾಡುತ್ತಿರುತ್ತನೆ ಇದನ್ನು ನೋಡುತ್ತಿರುವಾಗ ಒಂದು ಕ್ಷಣ ಎದೆ ಜಲ್ ಎನಿಸುತ್ತದೆ. ಈ ವಿಡಿಯೋವನ್ನು ಆತನ ಜೊತೆಗಿರುವವರು ಮಾಡಿದ್ದಾರೆ ಈ ವಿಡಿಯೋ ಎಲ್ಲಾ ಕಡೆ ವೈರಲ್ ಆಗುತ್ತಿದೆ