ಸಿಹಿ ಕಹಿ ಚಂದ್ರು ಮಗಳು ಹಿತ ಚಂದ್ರಶೇಖರ್ ರವರ ಸರಳ ಮದುವೆ ಸಮಾರಂಭ ಕ್ಷಣಗಳು

ಸಿಹಿ ಕಹಿ ಚಂದ್ರಶೇಖರ್ ಹಾಗೂ ಸಿಹಿ ಕಹಿ ಗೀತಾ ದಂಪತಿಗಳ ಮಗಳು ಹಿತ ಚಂದ್ರಶೇಖರ್ ರವರು ಹಾಗೆ ಸುಮ್ಮನೆ ಸಿನಿಮಾದಲ್ಲಿ ನಟಿಸಿರುವ ನಟ ಕಿರಣ್ ಶ್ರೀನಿವಾಸ್ ರವರ ಜೊತೆಗೆ ಇದೇ ತಿಂಗಳ ಮೇನಲ್ಲಿ ಇವರಿಬ್ಬರ ವಿವಾಹ ಮಹೋತ್ಸವ ನಡೆದಿದ್ದು ಈ ಜೋಡಿ ಮೊದಲು ತಮ್ಮ ನಿಶ್ಚಿತಾರ್ಥವನ್ನು ಕೂಡ ತುಂಬಾ ಅದ್ದೂರಿಯಾಗಿ ಮಾಡಿಕೊಂಡಿದ್ದರು ಇವರು ಈಗ ತಮ್ಮ ಮದುವೆಯನ್ನು ತುಂಬಾ ಸರಳವಾಗಿ ಬಂದು ಮಿತ್ರರ ಸಮ್ಮುಖದಲ್ಲಿ ಮಾಡಿಕೊಳ್ಳುತ್ತಿದ್ದಾರೆ.

ಹಿತ ಚಂದ್ರಶೇಖರ್ ಹಾಗೂ ನಟ ಕಿರಣ್ ಶ್ರೀನಿವಾಸ್ ಮದುವೆಯ ಬಳಿಕ ದ್ವೀಪ ರಾಷ್ಟ್ರಗಳಾದ ಫೇವಿಯಲ್ ನಲ್ಲಿ ಮಧುಚಂದ್ರದ ಪ್ರವಾಸಕ್ಕಾಗಿ ತೆರಳಿದ್ದು ಅದನ್ನು ಮುಗಿಸಿಕೊಂಡು ಬಂದು ನಂತರ ತಮ್ಮ ಕೆಲಸ ಕಾರ್ಯಗಳಲ್ಲಿ ತೊಡಗಿಕೊಂಡಿದ್ದಾರೆ.  ಹಿತ ಚಂದ್ರಶೇಖರ್ ಹಾಗೂ ಕಿರಣ್ ರವರ ವಿವಾಹದ ಬಳಿಕ ದುಬೈಗೆ ಹೋಗುವುದಾಗಿ ಕೂಡ ತಿಳಿಸಿದ್ದಾರೆ. ಹಿತ ಚಂದ್ರಶೇಖರ್ ರವರು ಇತ್ತೀಚಿಗಷ್ಟೇ ಪ್ರೀಮಿಯರ್ ಪದ್ಮಿನಿ ಎನ್ನುವ ಚಿತ್ರದಲ್ಲೂ ಕೂಡ ನಟಿಸಿದ್ದರು. ನಟ ಕಿರಣ್ ಶ್ರೀನಿವಾಸ್ ಕೂಡ ಹಾಗೆ ಸುಮ್ಮನೆ ಎನ್ನುವ ಚಿತ್ರದ ಮೂಲಕ ಪ್ರಖ್ಯಾತಿಯನ್ನು ಪಡೆದುಕೊಂಡಿದ್ದರು.

ಹಿತ ಹಾಗೂ ಕಿರಣ್ ರವರ ವಿವಾಹ ಮಹೋತ್ಸವವೂ ಕಗ್ಗಲಿಪುರದಲ್ಲಿರುವ ಪಂಚವಟಿ ಪೆವಿಲಿಯನ್ ಎಂಬ ಸಭಾಂಗಣದಲ್ಲಿ ಕುಟುಂಬ ಹಾಗೂ ಬಂಧು ಮಿತ್ರರ ಸಮ್ಮುಖದಲ್ಲಿ ನೆರವೇರಿತು. ಹಿತ ಚಂದ್ರಶೇಖರ್ ತಮ್ಮ ವಿವಾಹದಲ್ಲಿ ಬಾದಾಮಿ ಬಣ್ಣದ ರೇಷ್ಮೆ ಸೀರೆಯನ್ನು ಉಟ್ಟುಕೊಂಡು ಮಿಂಚುತ್ತಿದ್ದರು ಮುಹೂರ್ತ ಸಮಾರಂಭದಲ್ಲಿ ಲೂಸ್ ಮಾದ ಯೋಗೇಶ್ ,ನಿರ್ದೇಶಕರಾದ ಪನ್ನಾಗಭರಣ ಮುಖ್ಯಮಂತ್ರಿ ಚಂದ್ರು ಸೇರಿ ಅನೇಕ ಗಣ್ಯರು ಕೂಡ ಪಾಲ್ಗೊಂಡಿದ್ದರು ಇವರ ವಿವಾಹ ಮಹೋತ್ಸವದಲ್ಲಿ ಆಂಕರ್ ಅನುಪಮಾ ಗೌಡ, ಶ್ವೇತಾ ಚಂಗಪ್ಪ ,ಕೃಷಿ ತಾಪಂಡ, ಅಕುಲ್ ಬಾಲಾಜಿ ಮುಂತಾದವರು ಭಾಗವಹಿಸಿದ್ದರು.

ಹಿತ ಚಂದ್ರಶೇಖರ್ ಅವರ ವಿವಾಹದಲ್ಲಿ ಹಲವಾರು ತಂತ್ರಜ್ಞರು ಕೂಡ ಭಾಗವಹಿಸಿದ್ದು ಶನಿವಾರ ಇವರ ಶಾಸ್ತ್ರಗಳು ಪ್ರಾರಂಭವಾಗಿದ್ದು ಮದುವೆ ಸಂಪ್ರದಾಯದಂತೆ ಗೌರಿ ಪೂಜೆಯನ್ನು ಕೂಡ ಮಾಡಿದ್ದರು ತದನಂತರ ಸಂಗೀತ ಕಾರ್ಯಕ್ರಮ ಮೆಹಂದಿ ಶಾಸ್ತ್ರಗಳನ್ನು ಕೂಡ ಅದ್ದೂರಿಯಾಗಿ ಮಾಡಿದ್ದರು ಈ ಸಂದರ್ಭದಲ್ಲಿ ಹಿತ ಚಂದ್ರಶೇಖರ್ ರವರ ಸಹೋದರಿ ಖುಷಿ ಕೂಡ ಖುಷಿ ಖುಷಿಯಿಂದ ಭಾಗವಹಿಸಿದ್ದರು. ಹಿತ ಚಂದ್ರಶೇಖರ್ ರವರ ಸ್ನೇಹಿತೆಯರು ನೆಂಟರು ಬಂದು ಬಾಂಧವರು ಕೂಡ ಭಾಗವಹಿಸಿದ್ದರು.

ಹಿತ ಚಂದ್ರಶೇಖರ್ ತಮ್ಮ ಮೆಹಂದಿ ಶಾಸ್ತ್ರದಲ್ಲಿ ಪಿಂಕ್ ಲೆಹೆಂಗವನ್ನು ಧರಿಸಿ ಕಂಗೊಳಿಸುತ್ತಿದ್ದರು ಕಿರಣ್ ಶ್ರೀನಿವಾಸ್ ಕೂಡ ರೇಷ್ಮೆ ವಸ್ತ್ರಭರಣಗಳನ್ನು ಧರಿಸಿ ಮಿಂಚುತ್ತಿದ್ದರು. ಹಿತ ಚಂದ್ರಶೇಖರ್ ಅವರ ಪತಿ ಕಿರಣ್ ಚಂದ್ರಶೇಖರ್ ಅವರು ದುಬೈನಲ್ಲಿ ನಡೆಯುತ್ತಿರುವ ಕ್ರೀಡಾ ಕಾರ್ಯಕ್ರಮವನ್ನು ನಡೆಸಿಕೊಡುತ್ತಿದ್ದು ಮುಂಬೈನ ಟಿವಿ ಚಾನೆಲ್ ನಲ್ಲಿ ಈ ಕಾರ್ಯಕ್ರಮ ಪ್ರಸಾರವಾಗುತ್ತದೆ ಇದರ ಜೊತೆಗೆ ಕಿರಣ್ ಚಂದ್ರಶೇಖರ್ ಹಲವು ಸಿನಿಮಾಗಳಲ್ಲು ಕೂಡ ನಟಿಸುತ್ತಿದ್ದಾರೆ. ಹಿತ ಚಂದ್ರಶೇಖರ್ ಹಾಗೂ ಕಿರಣ್ ದಂಪತಿಗಳು ತಮ್ಮ ವಿವಾಹದ ನಂತರ ದುಬೈನಲ್ಲೇ ನೆನೆಸುವುದಾಗಿ ಹೇಳಿದ್ದಾರೆ.

ಸಿಹಿ ಕಹಿ ಮಗಳು ಹಿತ ಚಂದ್ರಶೇಖರ್ ಮೊನ್ನೆ ತಾನೆ ತಮ್ಮ ಸೋಶಿಯಲ್ ಮೀಡಿಯಾ ಖಾತೆಯಲ್ಲಿ ತಮ್ಮ ಮನೆಗೆ ಹೊಸ ಅತಿಥಿಯ ಆಗಮನವಾಗಿದೆ ಎಂದು ಪೋಸ್ಟ್ ಒಂದನ್ನು ಬರೆದುಕೊಂಡಿದ್ದರು ಇವರ ಹುಟ್ಟು ಹಬ್ಬದ ಪ್ರಯುಕ್ತವಾಗಿ ಹಿತಾರವರ ಪತಿ ಕಿರಣ್ ಇವರಿಗೆ ಉಡುಗೊರೆಯಾಗಿ ಒಂದು ನಾಯಿಮರಿಯನ್ನು ತೆಗೆದುಕೊಂಡು ಬಂದಿದ್ದು ಅದು ಭಾಗಶಃ ಕುರುಡಾಗಿದೆ ಅದಕ್ಕೆ ತಿನ್ನುವುದೆಂದರೆ ತುಂಬಾ ಇಷ್ಟ ಇದನ್ನು ನಾವು ಪ್ರೀತಿಯಿಂದ ನೋಡಿಕೊಳ್ಳುತ್ತೇವೆ ನಾವು ಕಣ್ಣಿಗೆ ಡ್ರಾಪ್ಸ ಹಾಕಲು ಹೋದಾಗ ನನಗೆ ತಿನ್ನಲು ಸಿಗುತ್ತದೆ ಎಂದು ಆಸೆಯಿಂದ ಹತ್ತಿರ ಬರುತ್ತದೆ ಏನಾದರೂ ತಿಂದು ಹೋಗುತ್ತದೆ ಎಂದು ತಮ್ಮ instagram ಖಾತೆಯಲ್ಲಿ ಬರೆದುಕೊಂಡಿದ್ದಾರೆ.