ನೋವಾಗುತ್ತಿದೆ ಅಯ್ಯೋ ಬೇಡ : ಮಗುವಿನಂತೆ ಕಣ್ಣೀರು ಹಾಕಿದ ನಟಿ ಹರಿಪ್ರಿಯ

ನಟಿ ಹರಿಪ್ರಿಯವರು ಕನ್ನಡ ಚಿತ್ರರಂಗದಲ್ಲಿ ಹೆಚ್ಚು ಖ್ಯಾತಿಯನ್ನು ಪಡೆದಿದ್ದು ಕನ್ನಡ ಜನಮಾನಸದಲ್ಲಿ ಉತ್ತಮ ಹೆಸರನ್ನು ಕೂಡ ಪಡೆದುಕೊಂಡಿದ್ದಾರೆ. ಇವರ ಮೂಲ ಹೆಸರು ಶೃತಿ ಎಂಬುದಾಗಿದ್ದು ಇವರು ಕನ್ನಡ ಚಿತ್ರರಂಗಕ್ಕೆ ಬಂದ ನಂತರ ಹರಿಪ್ರಿಯಾ ಎಂದೇ ಪ್ರಸಿದ್ಧಿ ಪಡೆದುಕೊಂಡಿದ್ದಾರೆ. ನಟಿ ಹರಿಪ್ರಿಯಾ ರವರು ಕನ್ನಡ ಚಿತ್ರರಂಗದಲ್ಲಿ ಮಾತ್ರವಲ್ಲದೆ ತೆಲುಗು ತಮಿಳು ಚಿತ್ರಗಳಲ್ಲಿಯೂ ಕೂಡ ಸಕ್ರಿಯರಾಗಿದ್ದಾರೆ. ನಟಿ ಹರಿಪ್ರಿಯಾ ರವರು ಬೆಂಗಳೂರು ಮೂಲದವರು ಆಗಿದ್ದು ಇವರು ಭರತನಾಟ್ಯಂ ನೃತ್ಯದ ಕೂಡ ತರಬೇತಿಯನ್ನು ಕೂಡ ಪಡೆದುಕೊಂಡಿದ್ದಾರೆ. ನಟಿ ಹರಿಪ್ರಿಯಾ ರವರು ಮನಸುಗಳ ಮಾತು ಮಧುರ ಎನ್ನುವ ಸಿನಿಮಾದ ಮೂಲಕ ಕನ್ನಡ ಚಿತ್ರರಂಗಕ್ಕೆ ಪ್ರವೇಶಿಸಿದರು.

 

ನಟಿ ಹರಿಪ್ರಿಯಾ ರವರು ಅತ್ಯುತ್ತಮ ಕನ್ನಡ ನಟಿ ಎಂದು ಫಿಲಂ ಫೇರ್ ಅವಾರ್ಡ್ ಅನ್ನು ಕೂಡ ಪಡೆದಿದ್ದಾರೆ. ಕನ್ನಡದಲ್ಲಿ ನಟ ಶ್ರೀ ಮುರುಳಿರವರ ಜೊತೆ ಉಗ್ರಂ ಎನ್ನುವ ಚಿತ್ರದಲ್ಲೂ ಕೂಡ ಅಭಿನಯಿಸಿದ್ದು ಈ ಚಿತ್ರ ಅವರಿಗೆ ಹೆಚ್ಚು ಖ್ಯಾತಿಯನ್ನು ಕೂಡ ತಂದು ಕೊಟ್ಟಿತು. ಇವರು ಸುದೀಪ್ ರವರ ಜೊತೆ ರನ್ನ ಹಾಗೂ ರಕ್ಷಿತ್ ಶೆಟ್ಟಿ ರವರ ಜೊತೆಯಲ್ಲಿ ರಿಕ್ಕಿ ಚಿತ್ರಗಳಲ್ಲು ಕೂಡ ನಟಿಸಿದ್ದಾರೆ. ಹರಿಪ್ರಿಯಾ ರವರ ನೀರುದೋಸೆ ಚಿತ್ರವು 2016ರಲ್ಲಿ ತೆರೆ ಕಂಡಿದ್ದು ಈ ಚಿತ್ರದಲ್ಲಿ ಹರಿಪ್ರಿಯಾ ಜಗ್ಗೇಶ್ ಗೆ ಜೊತೆಯಾಗಿದ್ದಾರೆ. ಈ ಚಿತ್ರ ಭಾರಿ ಸದ್ದು ಮಾಡಿದ್ದು ಹರಿಪ್ರಿಯಾ ರವರು ನೀರು ದೋಸೆ ಹರಿಪ್ರಿಯಾ ಎಂದೇ ಪ್ರಸಿದ್ಧಿಯನ್ನು ಪಡೆದುಕೊಂಡರು.

ಇಷ್ಟೇ ಅಲ್ಲದೆ ನಟಿ ಹರಿಪ್ರಿಯಾ ರವರು ಶ್ರೀನಗರ ಕಿಟ್ಟಿ ಅವರ ಜೊತೆ ಮಳೆ ಬರಲಿ ಮಂಜು ಇರಲಿ ಚಿತ್ರದಲ್ಲಿ ಅಭಿನಯಿಸಿದ್ದಾರೆ. ಯಶ್ ರವರ ಜೊತೆ ಕಲ್ಲರ ಸಂತೆ, ಶಿವರಾಜ್ ಕುಮಾರ್ ರವರ ಜೊತೆ ಚೆಲುವೆಯೇ ನಿನ್ನೇ ನೋಡಲು, ಶ್ರೀನಗರ ಕಿಟ್ಟಿ ಜೊತೆ ಕಿಲಾಡಿ ಕಿಟ್ಟಿ, ಪ್ರಜ್ವಲ್ ದೇವರಾಜ್ ಜೊತೆಗೆ ಸಾಗರ್ ಹಾಗೂ ಸೂಪರ್ ಶಾಸ್ತ್ರಿ ಚಿತ್ರಗಳು , ಶರಣ್ ರವರ ಜೊತೆ ಬುಲೆಟ್ ಬಸ್ಯಾ, ದ್ರುವ ಸರ್ಜಾ ಅವರ ಜೊತೆ ಭರ್ಜರಿ, ಪುನೀತ್ ರಾಜಕುಮಾರ್ ರವರ ಜೊತೆ ಅಂಜನಿಪುತ್ರ ,ದುನಿಯಾ ವಿಜಯ್ ರವರ ಜೊತೆ ಕನಕ ಚಿತ್ರ, ರಿಷಬ್ ಶೆಟ್ಟಿ ಅವರ ಜೊತೆ ಬೆಲ್ ಬಾಟಮ್ ಮುಂತಾದ ಚಿತ್ರಗಳಲ್ಲಿ ಕಾಣಿಸಿಕೊಂಡಿದ್ದಾರೆ.

ಕನ್ನಡದ ಹಲವಾರು ಸ್ಟಾರ್ ನಗರ ಜೊತೆ ಕೂಡ ನಟಿಸಿದ ಈಕೆ ಕನ್ನಡದ ಜನತೆಯಿಂದ ಸೈ ಎನಿಸಿಕೊಂಡಿದ್ದಾರೆ. ಹಾಗೆ ತೆಲುಗಿನ ಧನುಷ್ ಇನ್ನು ಮುಂತಾದ ಟಾಪ್ ನಟರ ಜೊತೆ ಕೂಡ ನಟಿಸಿದ್ದಾರೆ. ಇದೀಗ ನಟಿ ಹರಿಪ್ರಿಯಾ ರವರು ರಿಷಬ್ ಶೆಟ್ಟಿರವರ ಜೊತೆಗಿನ ಬೆಲ್ ಬಾಟಮ್ ಭಾಗ-2 ಚಿತ್ರದಲ್ಲೂ ಕೂಡ ನಟಿಸುತ್ತಿದ್ದಾರೆ . ನಟಿ ಹರಿಪ್ರಿಯಾ ರವರು ಹಿಂದೂ ಸಂಪ್ರದಾಯದಂತೆ ಇಂದು ತಮ್ಮ ಮೂಗನ್ನು ಚುಚ್ಚಿಸಿಕೊಂಡು ಚಿಕ್ಕ ಮಗುವಿನಂತೆ ಮುಗ್ಧತೆಯಿಂದ ಅಳುತ್ತಿರುವ ವಿಡಿಯೋ ಸೋಶಿಯಲ್ ಮೀಡಿಯಾದಲ್ಲಿ ಸೆನ್ಸೇಷನ್ ಸುದ್ದಿಯಾಗಿ ಹೊರಬಂದಿದ್ದು ನೆಟ್ಟಿಯರೆಲ್ಲರೂ ಕಮೆಂಟ್ ಮಾಡುತ್ತಿದ್ದಾರೆ.