ರಾಯನ್ ಬಿಟ್ಟು ಮೋಜು ಮಸ್ತಿ ಮಾಡಲು ಹೋದ ಮೇಘನಾ ಎಂದು ಹೇಳಿದವರಿಗೆ ತಕ್ಕ ಶಾಸ್ತಿ ಮಾಡಿದ ಮೇಘನಾ ರಾಜ್

ನಟಿ ಮೇಘನಾ ಚಿಕ್ಕ ವಯಸ್ಸಿನಲ್ಲಿ ಸಾಕಷ್ಟು ಕಷ್ಟ ನಷ್ಟಗಳನ್ನು ನೋಡಿ ಬೆಳೆದಂಥ ಹುಡುಗಿಯಾಗಿದ್ದಾರೆ. ಪ್ರಾಣಕ್ಕಿಂತ ಹೆಚ್ಚಾಗಿ ಪ್ರೀತಿಸಿದ್ದ ಚಿರು ಸರ್ಜಾ ಅವರು ವಿವಾಹವಾಗಿ ಕೇವಲ ಎರಡೇ ವರ್ಷವಾಗಿದ್ದಾಗ ಹೃದಯ ಘಾತದಿಂದ ಸಾವನ್ನಪ್ಪಿದ್ದರು ಇದನ್ನು ಕೇಳಿ ಮೇಘನಾ ದಿಗ್ಭ್ರಮೆಗೆ ಒಳಗಾಗಿದ್ದರು. ನಟಿ ಮೇಘನಾ ರಾಜ್ ಅವರಿಗೆ ಆಸರೆಯಾಗಿ ತಮ್ಮ ಮಗ ರಾಯನ್ ರಾಜ್ ಸರ್ಜಾ ಜೊತೆಗಿದ್ದಾನೆ. ತಮ್ಮ ಮಗ ರಾಯನ್ ಗಾಗಿ ನಟಿ ಮೇಘನಾ ರಾಜ್ ತುಂಬ ಲವಲವಿಕೆಯಿಂದ ಜೀವಿಸುತ್ತಿದ್ದಾರೆ.

ಜೀವನದಲ್ಲಿ ಹಲವಾರು ನೋವುಗಳ ನಂತರ ಇದೀಗ ಮತ್ತೊಂದು ಆಘಾತ ಶುರುವಾಗಿದೆ. ಅದೇನೆಂದರೆ, ನಟಿ ಮೇಘನರಾಜ್ ಮೊನ್ನೆ ತಾನೇ ತಮ್ಮ ಸ್ನೇಹಿತರ ಜೊತೆ ಥೈಲ್ಯಾಂಡ್ ಟ್ರಿಪ್ ಗೆ ಹೋಗಿದ್ದರು ಇದರ ಕುರಿತು ಹಲವು ಫೋಟೋಗಳನ್ನು ತಮ್ಮ ಸೋಶಿಯಲ್ ಮೀಡಿಯಾ ಖಾತೆಯಲ್ಲಿ ಕೂಡ ಹಂಚಿಕೊಂಡಿದ್ದರು. ಈ ಫೋಟೋಗಳು ಎಲ್ಲಾ ಕಡೆ ವೈರಲ್ ಆಗಿದ್ದು ಇದರ ಬಗ್ಗೆ ಜನರು ಕೆಟ್ಟದಾಗಿ ಕಾಮೆಂಟ್ ಕೂಡ ಮಾಡುತ್ತಿದ್ದಾರೆ.

ನಟಿ ಮೇಘನ ರಾಜ್ ತಮ್ಮ ಮಗನನ್ನು ತಮ್ಮ ತಂದೆ ತಾಯಿ ಬಳಿ ಬಿಟ್ಟು ಥೈಲ್ಯಾಂಡ್ ನಲ್ಲಿ ಎಂಜಾಯ್ ಮಾಡಲು ಹೋಗಿದ್ದಾರೆ. ಎಂದೆಲ್ಲಾ ಎಲ್ಲಾ ಕಡೆ ಸುದ್ದಿಗಳು ಹರಡುತ್ತಿವೆ. ಮೇಘನಾ ರಾಜ್ ಥೈಲ್ಯಾಂಡ್ ಟ್ರಿಪ್ ಗೆ ಹೋಗಿದ್ದ ವಿಷಯ ತಿಳಿದು ಕೆಲವು ಅಭಿಮಾನಿಗಳು ಇವರು ತಮ್ಮ ಪತಿಯಿಂದ ಅಗಲಿ ಬಹಳ ಖಿನ್ನತೆಗೆ ಒಳಗಾಗಿದ್ದರು ಇವರಿಗೆ ಇದೀಗ ಇಂತಹ ಪ್ರವಾಸಗಳ ಅಗತ್ಯವಿದೆ. ಹಾಗಾಗಿ ಇವರು ಖಂಡಿತವಾಗಿಯೂ ಪ್ರವಾಸವನ್ನು ಕೈಗೊಳ್ಳಬೇಕು ಎಂದು ಪಾಸಿಟಿವ್ ಆಗಿ ಕಮೆಂಟ್ಗಳನ್ನು ಮಾಡಿದ್ದರು ಇನ್ನು ಕೆಲವರು ತಮ್ಮ ಮಗುವನ್ನು ಮನೆಯಲ್ಲಿ ಬಿಟ್ಟು ಥೈಲ್ಯಾಂಡ್ ಗೆ ಹೋಗುವಂತ ಅರ್ಜೆಂಟ್ ಏನಿತ್ತು ಇವರಿಗೆ ಎಂದು ಮಾತನಾಡಿಕೊಳ್ಳುತ್ತಿದ್ದಾರೆ.

ಇದ್ಯಾವುದಕ್ಕೂ ತಲೆ ಕೆಡಿಸಿಕೊಳ್ಳದ ಮೇಘನಾ ತಮ್ಮ ಬಾಲ್ಯದ ಸ್ನೇಹಿತರ ಜೊತೆ ಥೈಲ್ಯಾಂಡ್ ನಲ್ಲಿ ಖುಷಿ ಖುಷಿಯಿಂದ ಎಂಜಾಯ್ ಮಾಡಿದ್ದಾರೆ. ಥೈಲ್ಯಾಂಡ್ ಟ್ರಿಪ್ಪಿನಲ್ಲಿನ ಹಲವು ಫೋಟೋಗಳನ್ನು ತಮ್ಮ ಸೋಶಿಯಲ್ ಮೀಡಿಯಾದಲ್ಲಿ ಶೇರ್ ಮಾಡಿಕೊಂಡಿದ್ದು ಇದಕ್ಕೆ ಲೈಕ್ ಹಾಗೂ ಕಮೆಂಟ್ಗಳ ಸುರಿಮಳೆ ಹರಿದು ಬರುತ್ತಿದೆ. ಆದರೆ ನಟಿ ಮೇಘನ ತನ್ನ ಮಗ ರಾಯನ್ ತಮ್ಮ ತಂದೆ ಸುಂದರರಾಜ ಹಾಗೂ ತಾಯಿ ಪ್ರಮೀಳಾ ಜೋಷಾಯಿ ರವರ ಬಳಿ ಬಿಟ್ಟು ಥೈಲ್ಯಾಂಡ್ ಗೆ ಟ್ರಿಪ್ ಹೋಗಿದ್ದಕ್ಕೆ ಹಲವಾರು ಜನರು ನೆಗೆಟಿವ್ ಕಾಮೆಂಟ್ಸ್ ಅನ್ನು ಕೂಡ ಮಾಡುತ್ತಿದ್ದು ಇದರ ಬಗ್ಗೆ ಮೇಘನಾ ತಂದೆ ಸುಂದರ ರಾಜ್ ಈ ಮೊದಲೇ ವಾರ್ನಿಂಗ್ ನೀಡಿದ್ದರೂ ಇದೀಗ ಮೇಘನ ರಾಜ ಲೈವ್ ಬಂದು ತಮ್ಮ ಅಭಿಮಾನಿಗಳಿಗೆ ಮತ್ತೊಮ್ಮೆ ಖಡಕ್ಕಾಗಿ ವಾರ್ನಿಂಗ್ ನೀಡಿದ್ದಾರೆ.