ರಾಧಿಕಾ ಪಂಡಿತ್ ಗೆ ಅದಿತಿ ಕಿಸ್ ಕೊಟ್ಟಿದ್ದಕ್ಕೆ ಮೇಘನಾ ರಾಜ್ ರಿಯಾಕ್ಷನ್ ಹೇಗಿತ್ತು ನೋಡಿ

ಸ್ಯಾಂಡಲ್ ವುಡ್ ನ ಕ್ಯೂಟ್ ಬೆಡಗಿ ಎಂದೇ ಪ್ರಖ್ಯಾತಿಯನ್ನು ಹೊಂದಿರುವ ನಟಿ ಅದಿತಿ ಪ್ರಭುದೇವ ನಮ್ಮ ಬ್ಯಾಚುಲರ್ ಜೀವನಕ್ಕೆ ಗುಡ್ ಬೈ ಹೇಳಿ ಇದೀಗ ವೈವಾಹಿಕ ಜೀವನ ಕಾಲಿಟ್ಟಿದ್ದಾರೆ. ಉದ್ಯಮಿ ಯಶಸ್ವಿ ಎಂಬುವವರ ಜೊತೆ ಅದಿತಿ ಪ್ರಭುದೇವ ಆಸೆಮಣೆ ಏರಿದರು. ಅದಿತಿ ಪ್ರಭುದೇವ ಹಾಗೂ ಅವರ ಗಂಡ ಯಶಸ್ವಿರವರ ವಿವಾಹ ಮಹೋತ್ಸವ ಬೆಂಗಳೂರಿನ ಅರಮನೆ ಮೈದಾನದ ಗಾಯಿತ್ರಿ ವಿಹಾರದಲ್ಲಿ ಅದ್ದೂರಿಯಾಗಿ ನಡೆದಿತ್ತು. ಕಳೆದ ಮೂರು ದಿನಗಳಿಂದ ನಡೆಯುತ್ತಿರುವ ಅಧಿತಿ ಪ್ರಭುದೇವರ ಮದುವೆಯಲ್ಲಿ ಅದಿತಿ ಹಾಗೂ ಯಶಸ್ವಿ ಸಂಪ್ರದಾಯದಂತೆ ಎಲ್ಲಾ ಆಚರಣೆಗಳನ್ನು ಕೂಡ ಮಾಡಿದ್ದಾರೆ.

ನವೆಂಬರ್ 26ರಂದು ಹಳದಿ ಸಮಾರಂಭ ನವೆಂಬರ್ 27ರಂದು ಮೆಹಂದಿ ಮತ್ತು ಸಂಗೀತ ಸಮಾರಂಭ ಹಾಗೂ ರಾತ್ರಿಯ ಆರತಕ್ಷತೆ ಸಮಾರಂಭ ಜೋರಾಗಿಯೇ ಇತ್ತು. ನವೆಂಬರ್ 27ರಂದು ಅದಿತಿ ಪ್ರಭುದೇವ ಹಾಗೂ ಯಶಸ್ವಿಯವರ ಆರತಾಕ್ಷತೆಗಳಿದ್ದು ಈ ಸಮಾರಂಭದಲ್ಲಿ ಅನೇಕ ಗಣ್ಯರು ಉಪಸ್ಥಿತರಿದ್ದರು. ಅದಿತಿ ಪ್ರಭುದೇವರ ಸ್ನೇಹಿತರು ಸ್ಯಾಂಡಲ್ವುಡ್ ನ ಅನೇಕ ಗಣ್ಯರು ಭಾಗಿಯಾಗಿದ್ದರು. ಆದರೆ ಇವರಲ್ಲಿ ರಾಧಿಕಾ ಪಂಡಿತ್ ಹಾಗೂ ಯಶ್ ದಂಪತಿಗಳು ಎಲ್ಲರ ಗಮನವನ್ನು ಸೆಳೆದಿದ್ದರು.

ನಟಿ ರಾಧಿಕಾ ಪಂಡಿತ್ ಹಾಗೂ ಯಶ್, ಅದಿತಿ ಪ್ರಭುದೇವ ಹಾಗೂ ಯಶಸ್ವಿಯವರ ಮದುವೆ ಸಮಾರಂಭಕ್ಕೆ ಹಾಜರಾಗಿ ಶುಭಾಶಯಗಳನ್ನು ತಿಳಿಸಿದ್ದಾರೆ. ನಟಿ ರಾಧಿಕಾ ಪಂಡಿತ್ ನೀಲಿ ಬಣ್ಣದ ಡ್ರೆಸ್ ನಲ್ಲಿ ಮಿಂಚಿದ್ದರು ಹಾಗೆಯೇ ರಾಧಿಕಾ ಪಂಡಿತ್ ರವರ ಪತಿ ಯಶ್ ಕೂಡ ಬ್ಲಾಕ್ ಶರ್ಟ್ ನಲ್ಲಿ ಕಂಗೊಳಿಸುತ್ತಿದ್ದರು. ಅದಿತಿ ಪ್ರಭುದೇವ ಹಾಗೂ ಯಶಸ್ವಿ ದಂಪತಿಗಳಿಗೆ ರಾಧಿಕಾ ಪಂಡಿತ್ ಹಾಗೂ ಯಶ್ ದಂಪತಿಗಳು ಮದುವೆಯ ಶುಭಾಶಯಗಳನ್ನು ತಿಳಿಸಿ ತದ ನಂತರ ತಮ್ಮ ಅಭಿಮಾನಿಗಳ ಜೊತೆ ಸೆಲ್ಫಿಯನ್ನು ಕೂಡ ಕ್ಲಿಕ್ಕಿಸಿಕೊಂಡಿದ್ದರು.

ನಟಿ ಅದಿತಿ ಪ್ರಭುದೇವ ರಾಧಿಕಾ ಪಂಡಿತ್ ರವರನ್ನು ಹಗ್ ಮಾಡಿ ಕಿಸ್ ಮಾಡಿ ಸಂಭ್ರಮಿಸಿದರು ಹಾಗೆಯೇ ರಾಧಿಕಾ ಪಂಡಿತ್ ಯಶ್ ದಂಪತಿಗಳ ಮಕ್ಕಳಾದ ಐರಾ ಹಾಗೂ ಯಥರ್ವ ಯಶ್ ನನ್ನು ಕರೆದುಕೊಂಡು ಬರಬೇಕಿತ್ತು ಎಂದು ಅದಿತಿಯವರು ಕೇಳಿದರು ನಟಿ ರಾಧಿಕಾ ಪಂಡಿತ್ ಗೆ ಅದಿತಿ ಪ್ರಭುದೇವ ಕಿಸ್ ಮಾಡುವುದನ್ನು ನೋಡಿದ ಮೇಘನಾ ರಾಜ್ ನಾಚಿಕೆಯಿಂದ ಸ್ಮೈಲ್ ಮಾಡಿದ್ದಾರೆ. ನಟಿ ಮೇಘನಾ ರಾಜ್ ಕೂಡ ತಮ್ಮ ಮಗ ರಾಯನ್ ರಾಜ್ ಸರ್ಜಾ ಜೊತೆ ಅದಿತಿ ಪ್ರಭುದೇವ ಹಾಗೂ ಯಶಸ್ವಿರವರ ಮದುವೆಗೆ ಹಾಜರಾಗಿ ಗಿಫ್ಟ್ ನೀಡಿ ನಿಮ್ಮ ಹೊಸ ಜೀವನ ಶಾನೆ ಟಾಪ್ ಆಗಿರಲಿ ಎಂದು ಶುಭಾಶಯಗಳನ್ನು ತಿಳಿಸಿದ್ದಾನೆ. ಗೋಲ್ಡನ್ ಸ್ಟಾರ್ ಗಣೇಶ್ ರವರ ಜೊತೆಗೆ ತ್ರಿಬಲ್ ರೈಡಿಂಗ್ ಚಿತ್ರದಲ್ಲಿ ಅದಿತಿ ಪ್ರಭುದೇವ ಮೇಘ ಶೆಟ್ಟಿ ರಚನಾ ರವರು ಒಟ್ಟಿಗೆ ನಟಿಸಿದ್ದರು ಆದ್ದರಿಂದ ನಟಿಯರಾದ ಮೇಘ ಶೆಟ್ಟಿ ಹಾಗೂ ರಚನಾ ಕೂಡ ಅದಿತಿ ರವರ ಮದುವೆಯಲ್ಲಿ ಹಾಜರಿದ್ದರು.