ನಟಿ ಹರಿಪ್ರಿಯಾ ಜೊತೆ ನಟ ವಸಿಷ್ಠ ಸಿಂಹ ಮದುವೆ ಫಿಕ್ಸ್

ಸ್ಯಾಂಡಲ್ ವುಡ್ ನ ಹಿರಿತೆರೆ ಹಾಗೂ ಕಿಋತೆರೆಯಲ್ಲಿ ಇದೀಗ ಮದುವೆ ಸಂಭ್ರಮ ಒಬ್ಬೊಬ್ಬರಾಗಿಯೇ ನಟ ಹಾಗು ನಟಿಯರು ದಾಂಪತ್ಯ ಜೀವನಕ್ಕೆ ಕಾಲಿಡುತ್ತಿದ್ದಾರೆ. ಅದೇ ರೀತಿ ಇಂದು ಅದಿತಿ ಪ್ರಭುದೇವರವರು ದಾಂಪತ್ಯ ಜೀವನಕ್ಕೆ ಕಾಲಿಡುತ್ತಿದ್ದಾರೆ. ಇದೇ ಬೆನ್ನಲ್ಲೇ ನಟಿ ಹರಿ ಪ್ರಿಯಾರವರ ಮದುವೆ ವಿಚಾರ ಕೂಡ ವೈರಲ್ ಆಗಿದೆ. ಕನ್ನಡದ ಖ್ಯಾತ ನಟಿ ಹರಿಪ್ರಿಯಾ ಹಸೆಮಣೆಯನ್ನು ಏರುವುದಕ್ಕೆ ಸಜ್ಜಾಗಿದ್ದಾರೆ. ನಟಿ ಹರಿಪ್ರಿಯಾರವರ ಮದುವೆ ವಿಷಯ ಕಳೆದ ಹಲವು ದಿನಗಳಿಂದ ಸೋಶಿಯಲ್ ಮೀಡಿಯಾದಲ್ಲಿ ಸದ್ದು ಮಾಡುತ್ತಿತ್ತು. ಹರಿಪ್ರಿಯಾರವರ ಮದುವೆ ವಿಚಾರ ಸುದ್ದಿಯಾಗುತ್ತಿದ್ದಂತೆ ಹುಡುಗ ಯಾರು ಮದುವೆ ಯಾವಾಗ ಎನ್ನುವ ಸುದ್ದಿಯು ಕೂಡ ಚರ್ಚೆಯಾಗುತ್ತಿತ್ತು ಸದ್ಯ ಈ ಬಗ್ಗೆ ಮಾಹಿತಿ ಇದೀಗ ರೀವಿಲ್ ಆಗಿದೆ.

ಬಲ್ಲ ಮೂಲಗಳಿಂದ ತಿಳಿದು ಬಂದಿರುವುದೇನೆಂದರೆ, ನಟಿ ಹರಿಪ್ರಿಯಾ ಇದೀಗ ನಮ್ಮ ಮದುವೆ ವಿಚಾರದಲ್ಲಿ ಮುಂದುವರೆದಿದ್ದಾರೆ. ನಟಿ ಹರಿಪ್ರಿಯಾರವರಿಗೆ ಮದುವೆ ಹುಡುಗ ಕೂಡ ಫಿಕ್ಸ್ ಆಗಿದ್ದು ಅವರು ಇಷ್ಟರಲ್ಲಿ ಮದುವೆ ಕೂಡ ಆಗುತ್ತಾರೆ. ಕಳೆದ ವಾರವಷ್ಟೇ ನಟಿ ಹರಿಪ್ರಿಯಾ ಮೂಗು ಚುಚ್ಚಿಸಿಕೊಳ್ಳುವ ವಿಡಿಯೋ ಒಂದು ವೈರಲಾಗಿತ್ತು ಅದೇ ವೇಳೆ ನಟಿ ಹರಿಪ್ರಿಯರವರು ಮದುವೆಯಾಗುತ್ತಾರೆ ಎಂದು ಅವರ ಅಭಿಮಾನಿಗಳೆಲ್ಲರೂ ಹೇಳುತ್ತಿದ್ದರು. ಆದರೆ ಇದೀಗ ಈ ಸುದ್ದಿ ನಿಜ ಎನ್ನುತ್ತಿದ್ದಾವೆ ಮೂಲಗಳು.

ಬಹುಭಾಷಾ ನಟಿಯಾಗಿ ಹರಿಪ್ರಿಯ ಮದುವೆಯಾಗುತ್ತಿರುವ ಹುಡುಗ ಬೇರೆ ಯಾರು ಅಲ್ಲ ಕನ್ನಡದ ಸ್ಟಾರ್ ವಶಿಷ್ಟಸಿಂಹ ಕಂಚಿನ ಕಂಠದ ಮೂಲಕ ಹಲವಾರು ಹಾಡುಗಳನ್ನು ಹಾಡಿದ್ದು ಅವರು ಹಾಡಿರುವ ಹಾಡುಗಳೆಲ್ಲ ಸಕ್ಕತ್ ಫೇಮಸ್ ಆಗಿವೆ ಇದೀಗ ನಟಿ ಹರಿಪ್ರಿಯಾ ಕನ್ನಡದ ಖ್ಯಾತ ನಟ ವಸಿಷ್ಠ ಸಿಂಹರವರ ಜೊತೆಗೆ ಹಸೆಮಣೆ ಏರಲಿದ್ದಾರೆ.ನಟಿ ಹರಿಪ್ರಿಯಾ ವಸಿಷ್ಠ ಸಿಂಹರವರ ಜೊತೆ. ಹಸೆಮಣೆ ಏರುತ್ತಾರೆ ಎಂದು ಹೊಸ ಸುದ್ದಿ ಇದೀಗ ಕೇಳಿ ಬಂದಿದೆ. ನಟಿ ಹರಿಪ್ರಿಯಾ ಹಾಗೂ ನಟ ವಶಿಷ್ಠ ಸಿಂಹ ಮದುವೆ ಲವ್ ಮ್ಯಾರೇಜ್ ಆಗಿದ್ದು ಇವರಿಬ್ಬರೂ ತುಂಬಾನೇ ಆಪ್ತರಾಗಿದ್ದಾರೆ ಆಗಾಗ ತಮ್ಮ ಡ್ಯಾನ್ಸ್ ವಿಡಿಯೋಗಳನ್ನು ಕೂಡ ಶೇರ್ ಮಾಡಿಕೊಳ್ಳುತ್ತಿರುತ್ತಾರೆ.

ಅಷ್ಟೇ ಅಲ್ಲದೆ ಇವರಿಬ್ಬರು ಪಾರ್ಟ್ನರ್ ಎಂದು ಪ್ರೀತಿಯಿಂದ ಕರೆದುಕೊಳ್ಳುತ್ತಾರೆ. ಆದರೆ ಇಷ್ಟು ದಿನಗಳಲ್ಲಿ ಎಲ್ಲಿಯೂ ಕೂಡ ತಮ್ಮಿಬ್ಬರ ಮದುವೆ ವಿಚಾರವನ್ನು ಬಿಟ್ಟು ಕೊಟ್ಟಿರಲಿಲ್ಲ. ಆದರೆ ಇದೀಗ ವಸಿಷ್ಟ ಸಿಂಹರವರ ಪ್ರೀತಿ ವಿಚಾರ ಎಲ್ಲಾ ಕಡೆ ಬಹಿರಂಗವಾಗಿದೆ. ಹರಿಪ್ರಿಯಾರವರು ಮೂಗು ಚುಚ್ಚಿಸಿಕೊಳ್ಳುತ್ತಿದ್ದ ವೇಳೆಯಲ್ಲಿ ಈ ವಿಚಾರ ರಿವಿಲ್ ಆಗಿದೆ. ಇತ್ತೀಚಿಗಷ್ಟೇ ನಟಿ ಹರಿಪ್ರಿಯಾ ಮೂಗು ಚುಚ್ಚಿಸಿಕೊಂಡಿದ್ದರು ನಟಿ ಹರಿಪ್ರಿಯಾ ಮೂಗು ಚುಚ್ಚಿಸಿಕೊಂಡ ವಿಡಿಯೋವನ್ನು ಕೂಡ ತಮ್ಮ ಸೋಶಿಯಲ್ ಮೀಡಿಯ ಖಾತೆಗಳಲ್ಲಿ ಶೇರ್ ಮಾಡಿಕೊಂಡಿದ್ದರು.

ಆ ವೇಳೆ ವಶಿಷ್ಟ ಸಿಂಹ ಕೂಡ ನಟಿ ಹರಿಪ್ರಿಯ ರವರ ಜೊತೆಗೆ ಇದ್ದು ಅವರು ಮೂಗು ಚುಚ್ಚಿಸಿಕೊಳ್ಳುವಾಗ ಎಲ್ಲಿ ಚುಚ್ಚಬೇಕು ಎಂದು ಮಾರ್ಕ್ ಕೂಡ ಮಾಡಿದ್ದರು ಹಾಗೆ ಮೂಗು ಚುಚ್ಚಿಸಿಕೊಂಡು ಅಳುತ್ತಿದ್ದ ಹರಿಪ್ರಿಯಾರವರಿಗೆ ಮುತ್ತು ಕೊಟ್ಟು ಸಮಾಧಾನವನ್ನು ಕೂಡ ಮಾಡಿದ್ದರು ಸ್ವತಃ ಈ ವಿಡಿಯೋ ಹರಿಪ್ರಿಯಾರವರೆ ಹಂಚಿಕೊಂಡಿದ್ದು ವಸಿಷ್ಟ ಸಿಂಹರವರ ಮುಖವನ್ನು ವಿಡಿಯೋದಲ್ಲಿ ರಿವೀಲ್ ಮಾಡಿರಲಿಲ್ಲ ಆದರೆ ನಟಿ ಹರಿಪ್ರಿಯಾ ಮೂಗು ಚುಚ್ಚಿಕೊಳ್ಳುತ್ತಿದ್ದ ವೇಳೆ ಜೊತೆಗಿದ್ದವರು ವಸಿಷ್ಟ ಸಿಂಹ ಎಂದು ತಿಳಿದುಬಂದಿದೆ. ಇವರಿಬ್ಬರು ಆಫೀಸಿಯಲ್ ಆಗಿ ತಮ್ಮ ಮದುವೆ ವಿಚಾರವನ್ನು ತಮ್ಮ ಅಭಿಮಾನಿಗಳಿಗೆ ತಿಳಿಸಿ ಯಾವಾಗ ಹಸೆಮಣೆ ಏರುತ್ತಾರೆ ಎನ್ನುವುದನ್ನು ಕಾದು ನೋಡಬೇಕಾಗಿದೆ.