ಅಪ್ಪನಿಗೆ ತೊದಲು ನುಡಿಯಲ್ಲಿ ಸಕ್ಕತ್ ಅವಾಜ್ ಹಾಕಿದ ಲೂಸ್ ಮಾದ ಯೋಗಿ ಮಗಳು

ನಟ ಯೋಗೇಶ್ ಕನ್ನಡ ಚಿತ್ರರಂಗದಲ್ಲಿ ಲೂಸ್ ಮಾದ ಯೋಗಿ ಎನ್ನುವ ಹೆಸರಿನಿಂದಲೇ ಪ್ರಖ್ಯಾತಿಯನ್ನು ಪಡೆದುಕೊಂಡಿದ್ದಾರೆ. ಇವರು ಮೂಲತಃ ಬೆಂಗಳೂರಿನವರಾಗಿದ್ದು ಇವರಿಗೆ ಇದೀಗ 32 ವರ್ಷ ವಯಸ್ಸು ಇವರು ಕನ್ನಡ ಚಿತ್ರರಂಗದಲ್ಲಿ ನಟ ನಿರ್ಮಾಪಕ ಗಾಯಕಮಾಗಿ ಗುರುತಿಸಿಕೊಂಡಿದ್ದಾರೆ ಕಳೆದ 2007 ರಿಂದ ಇಂದಿನವರೆಗೂ ಇವರು ಕನ್ನಡ ಚಿತ್ರರಂಗದಲ್ಲಿ ಸಕ್ರಿಯ ರಾಗಿದ್ದಾರೆ. ಲೂಸ್ ಮಾದ ಯೋಗಿ ರವರು ದುನಿಯಾ ಹಾಗೂ ಅಂಬಾರಿ ಚಿತ್ರಗಳ ಮೂಲಕ ಹೆಚ್ಚು ಪ್ರಖ್ಯಾತಿಯನ್ನು ಪಡೆದುಕೊಂಡರು ಇವರು ಅಂಬಾರಿ ಚಿತ್ರದಲ್ಲಿ ಮೊಟ್ಟಮೊದಲ ಬಾರಿಗೆ ನಾಯಕನಟನಾಗಿ ಅಭಿನಯಿಸಿದ್ದರು.

 

ತದನಂತರ ಸಿದ್ಲಿಂಗು, ಅಲೆಮಾರಿ, ಯಾರೇ ಕೂಗಾಡಲಿ ಮುಂತಾದ ಚಿತ್ರಗಳ ಮೂಲಕ ಯಶಸ್ವಿ ನಾಯಕರಾಗಿ ಗುರುತಿಸಿಕೊಂಡರು. ಯೋಗೇಶ್ ರವರು ನಿರ್ಮಾಪಕ ಟಿಪಿ ಸಿದ್ದರಾಜುರವರ ಪುತ್ರರಾಗಿದ್ದು ಅವರು ತಮ್ಮ ಬಾಲ್ಯದ ಗೆಳತಿ ಸಾಹಿತಿ ರವರನ್ನು ವಿವಾಹವಾಗಿದ್ದಾರೆ. ಇವರಿಗೆ ಶ್ರೀನಿಕ ಎನ್ನುವ ಮಗಳು ಕೂಡ ಇದ್ದಾಳೆ. ಲೂಸ್ ಮಾದ ಯೋಗಿ ಬಿಗ್ ಬಾಸ್ ನಲ್ಲಿ ಗೆಸ್ಟ್ ಆಗಿ ಹೋಗಿದ್ದರು ಹಾಗೆ ತಕದಿಮಿತ ಡ್ಯಾನ್ಸಿಂಗ್ ಸ್ಟಾರ್ ನಲ್ಲಿ ತೀರ್ಪುಗಾರರಾಗಿ ಕೂಡ ಕೆಲಸ ಮಾಡಿದ್ದರು.

ನಟ ಲೂಸ್ ಮಾದ ಯೋಗಿ ಇದೀಗ ತಮ್ಮೆಲ್ಲ ಸಿನಿಮ ಗಳಿಂದ ಬಿಡುಗಡೆ ಪಡೆದುಕೊಂಡು ತಮ್ಮ ಜೀವನದಲ್ಲಿ ಸುಂದರ ಕ್ಷಣಗಳನ್ನು ಅನುಭವಿಸುತ್ತಿದ್ದಾರೆ. ಲೂಸ್ ಮಾದ ಯೋಗಿ ತಮ್ಮ ಮಗಳ ಲಾಲನೆ ಪಾಲನೆ ಆಟ ಪಾಠಗಳಲ್ಲಿ ತಮ್ಮನ್ನು ತಾವು ತೊಡಗಿಸಿಕೊಂಡು ಬಿಸಿಯಾಗಿದ್ದಾರೆ. ಲೂಸ್ ಮಾದ ಯೋಗಿ ಹಾಗೂ ಅವರ ಪತ್ನಿ ತಮ್ಮ ಮಗಳ ಮುದ್ದಾದ ವಿಡಿಯೋಗಳನ್ನು ಮಾಡಿ ಆಗಾಗ ಸೋಶಿಯಲ್ ಮೀಡಿಯಾ ಖಾತೆಯಲ್ಲಿ ಹಂಚಿಕೊಳ್ಳುತ್ತಿರುತ್ತಾರೆ. ಇದೀಗ ಲೂಸ್ ಮಾದ ಯೋಗಿ ರವರು ತಮ್ಮ ಮಗಳ ಜೊತೆ ಆಟವಾಡುತ್ತಿರುವಾಗ ಲೂಸ್ ಮಾದ ರವರ ಮುದ್ದು ಮಗಳು ತಮ್ಮ ತಂದೆಯ ಜೊತೆ ಆಟವಾಡುತ್ತಾ ತಂದೆಗೆ ಅವಾಜ್ ಹಾಕಿದ್ದಾಳೆ.

 

 

ಲೂಸ್ ಮಾದ ಯೋಗಿರವರ ಮಗಳು ತಮ್ಮ ತಂದೆಗೆ ಕ್ಯೂಟ್ ಕ್ಯೂಟ್ ಆಗಿ ಅವಾಜ್ ಹಾಕಿರುವ ವಿಡಿಯೋ ಇದೀಗ ಸೋಶಿಯಲ್ ಮೀಡಿಯಾದಲ್ಲಿ ಫುಲ್ ವೈರಲ್ ಆಗುತ್ತಿದೆ. ಚಿಕ್ಕ ಮಕ್ಕಳ ತೊದಲ್ ನುಡಿಯನ್ನು ಕೇಳುವುದೇ ಚೆಂದ ಆ ಮುದ್ದಾದ ತೊದಲ್ ನುಡಿಯ ಮೂಲಕ ಅಪ್ಪ ಯೋಗಿಗೆ ಮಗಳು ಸಕ್ಕತ್ ಅವಾಜ್ ಹಾಕುತ್ತಿದ್ದಾಳೆ ಈ ವಿಡಿಯೋ ನೋಡಿದ ನೆಟ್ಟಿಗರು ಕೂಡ ಫಿದಾ ಆಗಿದ್ದಾರೆ.