ಫೋಟೋಶೂಟ್ ನೋಡಿ: ಲಂಗಾ ದಾವಣಿ ಹಾಕಿ ಮುದ್ದಾಗಿ ಕನ್ನಡ ಇಂಡಸ್ಟ್ರಿಗೆ ಬಂದ ಪ್ರೇಮ್ ಮಗಳು ಅಮೃತ

ಸ್ಯಾಂಡಲ್ ವುಡ್ ನಲ್ಲಿ ಲವ್ಲಿ ಸ್ಟಾರ್ ಪ್ರೇಮ್ ನೆನಪಿರಲಿ ಪ್ರೇಮ್ (nenapirali Prem)ಎಂದೇ ಪ್ರಖ್ಯಾತಿಯನ್ನು ಹೊಂದಿರುವ ಪ್ರೇಮ್ ರವರು ಕನ್ನಡ ಚಿತ್ರರಂಗದಲ್ಲಿ ತಮ್ಮದೇ ಆದ ಜನಪ್ರಿಯತೆಯನ್ನು ಹೊಂದಿದ್ದಾರೆ. ಇದೀಗ ನೆನಪಿರಲಿ ಪ್ರೇಮ್ ತಮ್ಮ ಮಗಳು(Daughter) ಅಮೃತಾಳನ್ನು ಕೂಡ ಕನ್ನಡ ಚಿತ್ರರಂಗಕ್ಕೆ ಪರಿಚಯ ಮಾಡಿಕೊಡಬೇಕು ಎಂದು ಹೊಸ ಸಿನಿಮಾ ಒಂದರಲ್ಲಿ ನೆನಪಿರಲಿ ಪ್ರೇಮ್ ಮಗಳು ಅಮೃತ ಬಣ್ಣ ಹಚ್ಚಿದ್ದಾರೆ.

ಸಿನಿಮಾ ಸ್ಟಾರ್ ಗಳ ಮಕ್ಕಳು ಬಣ್ಣದ ಲೋಕಕ್ಕೆ ಪಾದಾರ್ಪಣೆ ಮಾಡುವುದು ಸಹಜವಾಗಿ ನಡೆದು ಬಂದಿದೆ. ಸ್ಯಾಂಡಲ್ ವುಡ್ ನ ಹಲವಾರು ಸ್ಟಾರ್ ನಟ ನಟಿಯರ ಮಕ್ಕಳು ಇದೀಗ ಕನ್ನಡ ಚಿತ್ರರಂಗಕ್ಕೆ ಎಂಟ್ರಿಕೊಟ್ಟು ತಮ್ಮ ಸಿನಿ ಜೀವನವನ್ನು ಆರಂಭಿಸುತ್ತಿದ್ದಾರೆ. ಇತ್ತೀಚಿಗಷ್ಟೇ ಕನಸಿನ ರಾಣಿ ಮಾಲಾಶ್ರೀ ಅವರ ಮಗಳು ರಾಧಾನಾ ರಾಮ್ ಡಿ ಬಾಸ್ ದರ್ಶನ್ ಅಭಿನಯದ D56 ಚಿತ್ರ ಹಾಗೂ ಆಕ್ಷನ್ ಪ್ರಿನ್ಸ್ ಧ್ರುವ ಸರ್ಜಾರವರ ಕೇಡಿ ಚಿತ್ರದಲ್ಲಿ ನಾಯಕ ನಟಿಯಾಗಿ ಅಭಿನಯಿಸುತ್ತಿರುವ ಸುದ್ದಿ ಸೋಶಿಯಲ್ ಮೀಡಿಯಾದಲ್ಲಿ ಹರಿದಾಡಿತ್ತು. ಇದೀಗ ನೆನಪಿರಲಿ ಪ್ರೇಮ್ ರವರ ಮಗಳು ಅಮೃತ ಕೂಡ ಸಿನಿ ರಂಗಕ್ಕೆ ಪಾದಾರ್ಪಣೆಯನ್ನು ಮಾಡಿದ್ದಾರೆ.

ಈ ಹಿಂದೆ ನೆನಪಿರಲಿ ಪ್ರೇಮ್ ಮಗಳು ಅಮೃತ ತಮ್ಮ ಹೊಸ ಹೊಸ ಫೋಟೋ ಶೂಟ್ ಗಳ ಮೂಲಕ ಕನ್ನಡಿಗರ ಗಮನ ಸೆಳೆದಿದ್ದರು ಇದೀಗ ಅವರು ಹಿರಿತೆರೆಯ ದೊಡ್ಡ ಪರದೆಯ ಮೇಲೆ ತಮ್ಮ ಹೊಸ ಸಿನಿಮಾಗಳಲ್ಲಿ ನಟಿಸಲು ಮುಂದಾಗಿದ್ದಾರೆ. ನೆನಪಿರಲಿ ಪ್ರೇಮ್ ಮಗಳು ಅಮೃತಾಗೆ ಇದೀಗ ಸ್ಯಾಂಡಲ್ ವುಡ್ ನಾ ಖ್ಯಾತ ನಟ ನಟಿಯರು ಶುಭಾಶಯಗಳನ್ನು ತಿಳಿಸುತ್ತಿದ್ದಾರೆ.

 

 

View this post on Instagram

 

A post shared by Jyothi Prem (@jyothiprem1008)

ನೆನಪಿರಲಿ ಪ್ರೇಮ್ ಮಗಳು ಅಮೃತ ಡಾಲಿ ಧನಂಜಯ್ ರವರ ನಿರ್ಮಾಣದ ಮೂರನೇ ಚಿತ್ರವಾದ “ಟಗರು ಪಲ್ಯ”(Tagaru palya) ಎನ್ನುವ ಚಿತ್ರದಲ್ಲಿ ನಟಿಸುವ ಮೂಲಕ ಕನ್ನಡ ಚಿತ್ರರಂಗಕ್ಕೆ ಪಾದರ್ಪಣೆಯನ್ನು ಮಾಡಿದ್ದಾರೆ. ಡಾಲಿ ಧನಂಜಯ್(Dali Dhananjay) ನಿರ್ಮಾಣದ ಟಗರು ಪಲ್ಯ ಚಿತ್ರದಲ್ಲಿ ನಟ ನಾಗಭೂಷಣ್ ನಾಯಕನಟನಾಗಿ ನಟಿಸುತ್ತಿದ್ದಾರೆ. ಹಾಗೆಯೇ ಈ ಚಿತ್ರಕ್ಕೆ ಉಮೇಶ್ ಕೆ ಕೃಪ ಅವರು ನಿರ್ದೇಶನವನ್ನು ಕೂಡ ಮಾಡುತ್ತಿದ್ದಾರೆ. ಇದೀಗಾಗಲೇ ಡಾಲಿ ಧನಂಜಯ್ ರವರ ನಿರ್ಮಾಣದಲ್ಲಿ ಮೂಡಿ ಬರುತ್ತಿರುವ ಟಗರು ಪಲ್ಯ ಚಿತ್ರದ ಪೋಸ್ಟರ್ ಅನ್ನು ಕೂಡ ರಿಲೀಸ್ ಮಾಡಿದ್ದು ನೆನಪಿರಲಿ ಪ್ರೇಮ್ ಮಗಳು ಅಮೃತ ಹಳ್ಳಿ ಹುಡುಗಿ ಸ್ಟೈಲ್ ನಲ್ಲಿ ಲಂಗ ದಾವಣಿಯನ್ನು ಧರಿಸಿ ಫೋಟೋಗಳಲ್ಲಿ ಕಾಣಿಸಿಕೊಂಡಿದ್ದಾರೆ.

ನೆನಪಿರಲಿ ಪ್ರೇಮ್ ರವರು ಕನ್ನಡ ಚಿತ್ರರಂಗದಲ್ಲಿ ತಮ್ಮ ನಟನಾ ಚಾತುರ್ಯದಿಂದ ತಮ್ಮದೇ ಆದ ಛಾಪು ಮೂಡಿಸಿದ್ದಾರೆ. ಇದೀಗ ಅವರ ಮಗಳು ಅಮೃತ ಕೂಡ ಚಂದನವನದ ಕಡೆಗೆ ಮುಖ ಮಾಡಿದ್ದಾರೆ. ಇತ್ತೀಚಿಗಷ್ಟೇ ಬಿಡುಗಡೆಯಾದ ನಟ ಶರಣ್ ಹಾಗೂ ನಿಶ್ವಿಕಾ ನಾಯ್ಡು ಅಭಿನಯದ ಗುರು ಶಿಷ್ಯರು ಚಿತ್ರದಲ್ಲಿ ನೆನಪಿರಲಿ ಪ್ರೇಮ್ ರವರ ಮಗ ಏಕಾಂತ ಕೂಡ ನಟಿಸಿದ್ದರು. ಇದೀಗ ನೆನಪಿರಲಿ ಪ್ರೇಮ್ ರವರ ಮಗಳು ಅಮೃತಾ ಟಗರು ಪಲ್ಯ ಎಂಬ ಚಿತ್ರದ ಮೂಲಕ ಕನ್ನಡ ಚಿತ್ರರಂಗಕ್ಕೆ ಪಾದಾರ್ಪಣೆ ಮಾಡಿದ್ದಾರೆ. ಇವರ ಹೊಸ ಪಾತ್ರ ಹೇಗೆ ಮೂಡಿ ಬರುತ್ತದೆ ಎನ್ನುವ ಕೌತುಕ ಎಲ್ಲರಲ್ಲೂ ಕೂಡ ಇದೆ.

ಡಾಲಿ ಧನಂಜಯ್ರವರು ನಟ ಮಾತ್ರವಲ್ಲದೇ ನಿರ್ಮಾಪಕನಾಗಿಯೂ ಕೂಡ ಕನ್ನಡ ಚಿತ್ರರಂಗದಲ್ಲಿ ಕೆಲಸ ಮಾಡುತ್ತಿದ್ದಾರೆ. ಇವರು “ಡಾಲಿ ಪಿಚ್ಚರ್ಸ್” ಎನ್ನುವ ಬ್ಯಾನರ್ ನ ಅಡಿಯಲ್ಲಿ ವಿಭಿನ್ನವಾದ ಸಿನಿಮಾಗಳು ಕೂಡ ಮೂಡಿ ಬರುತ್ತಿವೆ. ನೆನಪಿರಲಿ ಪ್ರೇಮ್ ರವರಿಗೂ ಕೂಡ ಒಳ್ಳೆಯ ಬ್ಯಾನರ್ ನಲ್ಲಿ ತಮ್ಮ ಮಗಳ ಚಿತ್ರ ಮೂಡಿ ಬರುತ್ತಿರುವುದು ಖುಷಿ ತಂದಿದೆ. ನೆನಪಿರಲಿ ಪ್ರೇಮ್ ಮಗಳು ಅಮೃತ ಚಿತ್ರಕ್ಕಾಗಿ ಸಾಕಷ್ಟು ತಯಾರಿ ಮಾಡಿಕೊಂಡಿದ್ದು

 

ನಟನೆಯ ಜೊತೆಗೆ ವಿದ್ಯಾಭ್ಯಾಸವನ್ನು ಕೂಡ ಮುಂದೆವರೆಸುತ್ತಾರೆ. ಇನ್ನು ಕೆಲವೇ ದಿನಗಳಲ್ಲಿ ಡಾಲಿ ನಿರ್ಮಾಣದಲ್ಲಿ ಮೂಡಿ ಬರುತ್ತಿರುವ ಟಗರು ಪಲ್ಯ ಚಿತ್ರದ ಶೂಟಿಂಗ್ ಹಳ್ಳಿಯ ಪರಿಸರದಲ್ಲಿ ನಿರ್ಮಾಣವಾಗುತ್ತಿದ್ದು ಟಗರು ಪಲ್ಯ ಚಿತ್ರದಲ್ಲಿ ನೆನಪಿರಲಿ ಪ್ರೇಮ್ ಮಗಳು ಅಮೃತ ಸೇರಿದಂತೆ ತಾರಾ, ಅನುರಾಧ, ರಂಗಾಯಣ ರಘು ಮುಂತಾದ ಹಿರಿಯ ಕಲಾವಿದರು ಬಣ್ಣ ಹಚ್ಚಲಿದ್ದಾರೆ.