ನಟಿ ಅದಿತಿ ಪ್ರಭುದೇವ ಮದುವೆಯ ಆಭರಣಗಳ ಝಲಕ್

ಮೊನ್ನೆ ಅಷ್ಟೇ ನಟಿ ಅದಿತಿ ಪ್ರಭುದೇವ(Aditi Prabhu Deva) ಹಾಗೂ ಯಶಸ್ವಿ ಪಾಟ್ಲಾರವರ(yashasvi patla) ವಿವಾಹ ಮಹೋತ್ಸವ(marriage) ಬೆಂಗಳೂರಿನ ಪ್ಯಾಲೇಸ್ ಗ್ರೌಂಡ್ ನಲ್ಲಿರುವ ಗಾಯಿತ್ರಿ ವಿಹಾರದಲ್ಲಿ ನಡೆದಿತ್ತು. ನಟಿ ಅದಿತಿ ಪ್ರಭುದೇವ ಹಾಗೂ ಉದ್ಯಮಿ ಯಶಸ್ ರವರ ವಿವಾಹಕ್ಕೆ ಸ್ಯಾಂಡಲ್ವುಡ್ ನ ಹಲವಾರು ತಾರೆಯರು ಗಣ್ಯರು ಆಗಮಿಸಿ ಮದುವೆಗೆ ಶುಭಾಶಯಗಳು ತಿಳಿಸಿದರು ಅಷ್ಟೇ ಅಲ್ಲದೆ ನಟಿ ಅದಿತಿ ಪ್ರಭುದೇವ ತಮ್ಮ ಮದುವೆಗೆ ತಮ್ಮ ಅಭಿಮಾನಿಗಳನ್ನೆಲ್ಲಾ ಕರೆದಿದ್ದು ಅವರು ಕೂಡ ಮದುವೆಗೆ ಆಗಮಿಸಿ ವಧು ವರರಿಗೆ ಹಾರೈಸಿದರು ನಟಿ ಅದಿತಿ ಪ್ರಭುದೇವ್ ರವರ ಮದುವೆಯಲ್ಲಿ ಅವರ ಧರಿಸಿದ್ದ ಒಡವೆ ವಸ್ತ್ರಗಳ ಬಗ್ಗೆ ಎಲ್ಲರೂ ಕೂಡ ಕಣ್ಣು ಹಾಯಿಸಿದ್ದರು.

ನಟಿ ಅದಿತಿ ಪ್ರಭುದೇವ ತಮ್ಮ ಆಸೆಯಂತೆ ರೈತ ಹಾಗೂ ಉದ್ಯಮಿಯಾದ ಉದ್ಯಮಿ ಯಶಸ್ವಿ ಪಾಟ್ಲಾ ಎಂಬುವವರನ್ನು ವಿವಾಹವಾಗಿದ್ದಾರೆ.
ನಟಿ ಅದಿತಿ ಹಾಗೂ ಉದ್ಯಮಿ ಯಶಸ್ವಿರವರ ಮದುವೆಗೆ ಸ್ಯಾಂಡಲ್ವುಡ್ ನ ಹಲವಾರು ಗಣ್ಯರು ಆಗಮಿಸಿದ್ದು ಯಶ್ ಹಾಗೂ ರಾಧಿಕಾ ಪಂಡಿತ್ ದಂಪತಿಗಳು ,ಕನ್ನಡತಿ ಧಾರಾವಾಹಿ ಖ್ಯಾತಿಯ ರಂಜನಿ ರಾಘವನ್, ತ್ರಿಬಲ್ ರೈಡಿಂಗ್ ಚಿತ್ರದ ಪ್ರಖ್ಯಾತಿಯನ್ನು ಹೊಂದಿರುವಂತಹ ಜೊತೆ ಜೊತೆಯಲಿ ಧಾರವಾಹಿಯ ಮೇಘ ಶೆಟ್ಟಿ ಹಾಗೂ ಡಾರ್ಲಿಂಗ್ ಕೃಷ್ಣ ಹಾಗೂ ಮಿಲನ ನಾಗರಾಜ್ ದಂಪತಿಗಳ ನಿರ್ದೇಶನದಲ್ಲಿ ಮೂಡಿಬಂದಿದಂತಹ ಲವ್ ಮೊಕ್ ಟೇಲ್ ಚಿತ್ರದ ಖ್ಯಾತಿಯ ರಚನಾ ಇಂದರ್, ಚಿರಂಜೀವಿ ಸರ್ಜಾ ರವರ ಮುದ್ದಿನ ಮಡದಿ ಮೇಘನಾ ರಾಜ್ (Meghana Raj)ಹಾಗು ಅವರ ತಾಯಿ ಪ್ರಮೀಳಾ ಜೋಷಾಯಿ, ಹಾಸ್ಯ ನಟ ಚಿಕ್ಕಣ್ಣ ,ಪಾರು ಧಾರವಾಹಿ ಖ್ಯಾತಿಯ ಎಸ್ ನಾರಾಯಣ್ ಕರ್ನಾಟಕದ ಮಾನ್ಯ ಮುಖ್ಯಮಂತ್ರಿಗಳಾದ ಬಸವರಾಜ ಬೊಮ್ಮಾಯಿ ಮುಂತಾದ ಅತಿಥಿಗಳು ಆಗಮಿಸಿ ವಧು ವರರಿಗೆ ಹಾರೈಸಿದ್ದಾರೆ.

 

ನಟಿ ಅದಿತಿ ಪ್ರಭುದೇವ ಹಾಗೂ ಉದ್ಯಮಿ ಯಶಸ್ ರವರ ವಿವಾಹ ಮಹೋತ್ಸವವು ಬೆಂಗಳೂರಿನ ಪ್ಯಾಲೇಸ್ ಗ್ರೌಂಡ್ ನಲ್ಲಿರುವ ಗಾಯಿತ್ರಿ ವಿಹಾರದಲ್ಲಿ ಅದ್ದೂರಿಯಾಗಿ ನಡೆದಿದ್ದು ನಟಿ ಅದಿತಿ ಹಾಗೂ ಅವರ ಪತಿ ಯಶಸ್ವಿ ಮೆಹಂದಿ ಹಾಗೂ ಸಂಗೀತ ಕಾರ್ಯಕ್ರಮದಲ್ಲಿ ಕೆಂಪು ಬಣ್ಣದ ರೆಟ್ರೋ ಡ್ರೆಸ್ ಗಳನ್ನು ಧರಿಸಿ ಮಿಂಚಿದರು ನಟಿ ಅದಿತಿ ತಮ್ಮ ಹಳದಿ ಶಾಸ್ತ್ರದಲ್ಲಿ ಬಿಳಿ ಬಣ್ಣದ ಬಟ್ಟೆಯನ್ನು ತೊಟ್ಟು ರೀಲ್ಸ್ ಗಳನ್ನು ಕೂಡ ಮಾಡಿ ತಮ್ಮ instagram ಖಾತೆಯಲ್ಲಿ ಪೋಸ್ಟ್ ಮಾಡಿದ್ದರು.

ನಟಿ ಅದಿತಿ ಪ್ರಭುದೇವ್ ತಮ್ಮ ಮದುವೆಯಲ್ಲಿ ಹಲವಾರು ರೀತಿಯ ಒಡವೆಗಳನ್ನು ಧರಿಸಿದ್ದು ಆ ಎಲ್ಲಾ ಒಡವೆಗಳು ನೋಡುಗರ ಕಣ್ಣು ಕುಕ್ಕುವಂತೆ ಇದ್ದವು ನಟಿ ಅದಿತಿ ಪ್ರಭುದೇವ ಧರಿಸಿದ್ದ ಒಡವೆಗಳ ಬಗ್ಗೆ ಅಭಿಮಾನಿಗಳು ಕೂಡ ಆಸಕ್ತಿಯನ್ನು ತೋರಿಸಿದ್ದರು ಹಾಗಾಗಿ ನಟಿ ಅದಿತಿ ಪ್ರಭುದೇವ ಹಾಗೂ ಅವರ ಪತಿ ಯಶಸ್ವಿ ರವರು ಮದುವೆಯಲ್ಲಿ ಧರಿಸಿದ್ದ ಒಡವೆಗಳ ಒಂದು ಜಲಕ್ ಅನ್ನು ವಿಡಿಯೋ ಮಾಡಿ instagram ಖಾತೆಯಲ್ಲಿ ಪೋಸ್ಟ್ ಮಾಡಿದ್ದಾರೆ. ಇದನ್ನು ನೋಡಿದ ಅಭಿಮಾನಿಗಳು ಕೂಡ ಖುಷಿಪಟ್ಟು ಅವರಿಗೆ ಮದುವೆ ಶುಭಾಶಯಗಳನ್ನು ತಿಳಿಸಿದ್ದಾರೆ.