ಪ್ಲಾಪ್ ಸಿನಿಮಾಗಳ ಬಗ್ಗೆ ಪ್ರೆಶ್ನೆ ಮಾಡಿದ್ದಕ್ಕೆ ದಿಗಂತ್ ಹೇಗಿತ್ತು ನೋಡಿ

ಕನ್ನಡದ ಖ್ಯಾತ ನಟರಲ್ಲಿ ಒಬ್ಬರಾದ ನಟ ದಿಗಂತರವರು ಇದೀಗ ಅನಂತನಾಗ್ ರವರ ಜೊತೆಗೆ ತಿಮ್ಮಯ್ಯ ಅಂಡ್ ತಿಮ್ಮಯ್ಯ ಎನ್ನುವ ಚಿತ್ರದಲ್ಲಿ ನಟಿಸುತ್ತಿದ್ದಾರೆ. ಈ ಚಿತ್ರದ ಶೂಟಿಂಗ್ ಹಿನ್ನೆಲೆಯಲ್ಲಿ ನಟ ದಿಗಂತ್ ರವರಿಗೆ ಆಕ್ಸಿಡೆಂಟ್ ಕೂಡ ಆಗಿತ್ತು. ಈ ಆಕ್ಸಿಡೆಂಟ್ ನಿಂದ ಚೇತರಿಸಿಕೊಂಡ ನಟ ದಿಗಂತ್ ಇದೀಗ ಮತ್ತೆ ತಿಮ್ಮಯ್ಯ ಅಂಡ್ ತಿಮ್ಮಯ್ಯ ಶೂಟಿಂಗ್ ನಲ್ಲಿ ಬಿಜಿ ಇದ್ದು ಇದೀಗಾಗಲೇ ಚಿತ್ರವು ಕೊನೆಯ ಹಂತದಲ್ಲಿದೆ. ನಟ ದಿಗಂತ್ ಒಂದು ಸಂದರ್ಶನದಲ್ಲಿ ತಮ್ಮ ಫ್ಲಾಪ್ ಸಿನಿಮಾಗಳ ಬಗ್ಗೆ ಮಾತನಾಡಿದ್ದಾರೆ.

ನಟ ದಿಗಂತ್ ಕನ್ನಡದ ಖ್ಯಾತ ನಟರಲ್ಲಿ ಒಬ್ಬರಾಗಿದ್ದು ಇವರು ಗೋಲ್ಡನ್ ಸ್ಟಾರ್ ಗಣೇಶ್ ಅಭಿನಯದ ಗಾಳಿಪಟ ಎನ್ನುವ ಚಿತ್ರದ ಮೂಲಕ ಕನ್ನಡ ಚಿತ್ರರಂಗಕ್ಕೆ ಪಾದಾರ್ಪಣೆಯನ್ನು ಮಾಡಿದ್ದರು ನಟ ದಿಗಂತ್ ಐಂದ್ರಿತಾ ರೇ ರವರನ್ನು ವಿವಾಹವಾಗಿದ್ದಾರೆ. ನಟ ದಿಗಂತ್ ಗಾಳಿಪಟ, ಲೈಫು ಇಷ್ಟೇನೆ, ಪಂಚರಂಗಿ, ಪಾರಿಜಾತ, ದೂದ್ ಪೇಡ ಮುಂತಾದ ಚಿತ್ರಗಳಲ್ಲಿ ನಟಿಸಿದ್ದಾರೆ. ಅಷ್ಟೇ ಅಲ್ಲದೆ ಇತ್ತೀಚಿಗಷ್ಟೇ ಗೋಲ್ಡನ್ ಸ್ಟಾರ್ ಗಣೇಶ್ ರವರ ಅಭಿನಯದ ಗಾಳಿಪಟ 2 ಚಿತ್ರದಲ್ಲೂ ಕೂಡ ದಿಗಂತ್ ರವರು ಅಗೋರಿ ಪಾತ್ರದಲ್ಲಿ ನಟಿಸಿದ್ದರು ಈ ಚಿತ್ರ ಕೂಡ ತುಂಬಾ ಪ್ರಶಂಸಗೆ ಒಳಗಾಗಿತ್ತು.

ನೀವು ಹಲವಾರು ಸಿನಿಮಾಗಳನ್ನು ಮಾಡಿದ್ದೀರಿ ಅದರಲ್ಲಿ ಕೆಲವು ಸಿನಿಮಾ ಹಿಟ್ಟಾಗಿವೆ ಇನ್ನೂ ಕೆಲವು ಸಿನಿಮಾಗಳು ಫ್ಲಾಪ್ ಆಗಿವೆ. ಸ್ಲಾಪ್ ಆದ ಸಿನಿಮಾಗಳ ನಂತರ ನೀವು ಹೇಗೆ ಇನ್ಸ್ಪಿರೇಷನ್ ತೆಗೆದುಕೊಂಡು ಹೊಸ ಸಿನಿಮಾಗಳನ್ನು ಮಾಡುತ್ತಿದ್ದೀರಿ ಎಂದು ಸಂದರ್ಶಕರು ಕೇಳಿದ ಪ್ರಶ್ನೆಗೆ ನಟ ದಿಗಂತ್ ಉತ್ತರಿಸಿ, ನಾನು ಕ್ರಿಕೆಟ್ ಪ್ಲೇಯರ್ ಹಲವಾರು ಬಾರಿ ಆಟಗಳಲ್ಲಿ ಸೋತಿದ್ದೇನೆ ಗೆದ್ದಿದ್ದೇನೆ ಸೋತ ನಂತರವೂ ಕೂಡ ಕ್ರಿಕೆಟ್ ಬ್ಯಾಟ್ ಹಿಡಿದುಕೊಂಡು ಮತ್ತೆ ನೆಕ್ಸ್ಟ್ ಮ್ಯಾಚ್ ಗೆ ರೆಡಿ ಆಗುತ್ತೆನೆ ಅದೇ ರೀತಿ ಜೀವನದಲ್ಲೂ ಕೂಡ ಬೀಳುತ್ತೇವೆ ಏಳುತ್ತೇವೆ ಅದು ಸಹಜ ಬಿದ್ದಾಗ ನಾವು ಹೇಗೆ ಎದ್ದು ಬರುತ್ತೇವೆ ಎನ್ನುವುದೇ ಜೀವನ ಹಾಗಾಗಿ ನಾನು ಸೋತಾಗಲು ಎಲ್ಲೂ ತಲೆತಗ್ಗಿಸಿಲ್ಲ ಗೆದ್ದಾಗಲೂ ಕೂಡ ಎದೆ ತಟ್ಟಿಕೊಂಡು ಓಡಾಡಿಲ್ಲ ಎಂದರು

ಬಾಲಿವುಡ್ ನಿಂದ ಕೂಡ ನಟ ದಿಗಂತ್ ರವರೆಗೆ ಆಫರ್ಸ್ ಗಳು ಬರುತ್ತಿದ್ದು ಅವರು ಬಾಲಿವುಡ್ ನ ಹಲವಾರು ಓಟಿಟಿ ಪ್ಲಾಟ್ ಫಾರ್ಮಾ ವೆಬ್ ಸೀರೀಸ್ ಗಳಲ್ಲಿ ಕೂಡ ನಟಿಸುತ್ತಿದ್ದಾರೆ. ಬಾಲಿವುಡ್ ಸಿನಿಮಾಗಳಲ್ಲಿ ನಟನೆ ಮಾಡಲು ಬೆಂಗಳೂರು ಬಿಟ್ಟು ದುಬೈ ಅಥವಾ ದೆಹಲಿಗೆ ಹೋಗಬೇಕು ಆದರೆ ನನಗೆ ನನ್ನ ಫ್ಯಾಮಿಲಿ ನಾಯಿ ಎಲ್ಲವನ್ನು ಬಿಟ್ಟು ಅಲ್ಲಿಗೆ ಹೋಗಲು ಸಾಧ್ಯವಿಲ್ಲ. ಬಾಂಬೆ ಸಿಟಿ ತುಂಬಾ ಚೆನ್ನಾಗಿದೆ ಆದರೆ ಅಲ್ಲಿ ಲೈಫ್ ಸ್ಟೈಲ್ ಬೇರೆ ಇರುತ್ತದೆ ಹಾಗಾಗಿ ಅಲ್ಲಿನ ಲೈಫ್ಸ್ಟೈಲ್ ನನಗೆ ಸೆಟ್ ಆಗುವುದಿಲ್ಲ ನಾನು ಕನ್ನಡ ಸಿನಿಮಾವನ್ನೇ ಮಾಡುತ್ತೇನೆ ಇಲ್ಲೇ ಇರುತ್ತೇನೆ ಎಂದರು.

ನೀವು ಪ್ಯಾನ್ ಇಂಡಿಯಾ ಸಿನಿಮಾವನ್ನೂ ಯಾವಾಗ ಮಾಡುತ್ತೀರಿ ಎಂದು ಸಂದರ್ಶಕರು ಪ್ರಶ್ನಿಸಿದಾಗ ದಿಗಂತ್ ಉತ್ತರಿಸಿ ನಟ ರಿಷಬ್ ಶೆಟ್ಟಿ ಕಾಂತರಾ ಸಿನಿಮಾವನ್ನು ಪ್ಯಾನ್ ಇಂಡಿಯಾ ಚಿತ್ರ ಎಂದೇ ಮಾಡಲಿಲ್ಲ ಆದರೂ ಕೂಡ ಕಾಂತಾರ ಚಿತ್ರ ಪ್ಯಾನ್ ಇಂಡಿಯಾ ಮಟ್ಟದಲ್ಲಿ ಸಕ್ಸಸ್ ಆಯ್ತು ಪ್ಯಾನ್ ಇಂಡಿಯಾ ಸಿನಿಮಾವನ್ನೇ ಮಾಡಬೇಕು ಎಂದು ಹೇಳುವುದು ಸ್ಟುಪಿಡಿಟಿ ಹಾಗಾಗಿ ಒಳ್ಳೆಯ ಸಿನಿಮಾವನ್ನೇ ಮಾಡುತ್ತೇನೆ ಅದು ಎಲ್ಲಾ ಕಡೆ ಡಬ್ ಆಗಿ ಪಾನ್ ಇಂಡಿಯಾ ಚಿತ್ರವಾಗಿ ಎಲ್ಲರೂ ಕೂಡ ನೋಡುತ್ತಾರೆ ಎಂದರು