ನರ್ತನ ಜೊತೆ ಸಿನಿಮಾ, ನಟ ಯಶ್ ಮುಂದಿನ ಸಿನಿಮಾಗೆ ಮಗಳು ಐರಾ ನಿರ್ಮಾಪಕಿ

ಸ್ಯಾಂಡಲ್ ವುಡ್ ನಾ ಸಿಂಡ್ರೆಲ್ಲಾ ರಾಧಿಕಾ ಪಂಡಿತ್ ಹಾಗೂ ರಾಕಿಂಗ್ ಸ್ಟಾರ್ ಯಶ್ ರವರ ಮುದ್ದು ಮಗಳು ಐರಾ ನಾಲ್ಕನೇ ವರ್ಷಕ್ಕೆ ಕಾಲಿಟ್ಟಿದ್ದಾರೆ. ನಾಲ್ಕನೇ ವರ್ಷಕ್ಕೆ ಕಾಲಿಟ್ಟ ರಾಕೀ ಬಾಯ್ ಹಾಗೂ ರಾಧಿಕಾ ಪಂಡಿತ್ ಮಗಳು ಐರಾಗೆ ಸೋಶಿಯಲ್ ಮೀಡಿಯಾ ದಿಂದ ಶುಭಾಶಯಗಳ ಬರಪೂರವೆ ಹರಿದು ಬರುತ್ತಿದೆ. ಇನ್ನು ಯಶ್ ತಮ್ಮ ಮಗಳು ಐರಾ ಬರ್ತಡೇ ಗಿಫ್ಟ್ ಎನ್ನುವಂತೆ ಐರ ಪ್ರೊಡಕ್ಷನ್ ಹೌಸ್ ಮೂಲಕ ಸಿನಿಮಾಗಳನ್ನು ಚಿತ್ರೀಕರಿಸುತ್ತಿದ್ದಾರೆ ಎನ್ನುವ ಮಾತು ಇದೀಗ ಕೇಳಿ ಬರುತ್ತಿದೆ. ಇಂದು ಯಶ್ ರವರ ಮಗಳು ಐರಾ ಹುಟ್ಟುಹಬ್ಬವಿದ್ದು ಹುಟ್ಟು ಹಬ್ಬದ ಪ್ರಯುಕ್ತವೇ ಇಂದು ಹೊಸ ಪ್ರೊಡಕ್ಷನ್ ಹೌಸ್ ಬಗ್ಗೆ ಮಾಹಿತಿಯನ್ನು ನೀಡುತ್ತಾರೆ ಎಂದು ಅವರ ಅಭಿಮಾನಿಗಳು ಕಾತುರದಿಂದ ಕಾಯುತ್ತಿದ್ದಾರೆ.

ರಾಕಿಂಗ್ ಸ್ಟಾರ್ ಯಶ್ ರವರು ಇದೀಗ ಒಂದು ಹೊಸ ಸುದ್ದಿಯನ್ನು ನೀಡಿದ್ದು ನಟ ಯಶ್ ಮುಂದಿನ ಸಿನಿಮಾ ಗೆ ಮಗಳು ನಿರ್ಮಾಪಕಿಯಾಗಿ ಕಾರ್ಯನಿರ್ವಹಿಸುತ್ತಾರೆ. ರಾಕಿ ಬಾಯ್ ತಮ್ಮ ಮಗಳು ಐರ ಹೆಸರಿನಲ್ಲಿ ನಿರ್ಮಾಣ ಸಂಸ್ಥೆ ಯೊಂದನ್ನು ಸ್ಥಾಪಿಸಿ ಮೊದಲ ಸಿನಿಮಾದಲ್ಲಿ ನಟ ಯಶ್ ರವರ ನಟಿಸುತ್ತಾರೆ. ಈಗಾಗಲೇ ನಿರ್ಮಾಣ ಸಂಸ್ಥೆಗೆ ಬೇಕಾಗಿರುವಂತಹ ಚಟುವಟಿಕೆಗಳು ಕೂಡ ನಡೆಯುತ್ತಿವೆ. ನಟ ಯಶ್ ರವರ ಸಿನಿಮಾ ವಿಚಾರವಾಗಿ ತಿಂಗಳಿಗೊಂದು ಸುದ್ದಿ ಹೊರಬರುತ್ತದೆ. ಬರುತ್ತಲೇ ಇದೆ ಈ ಮೊದಲು ನರ್ತನ ಜೊತೆ ಸಿನಿಮಾ ಮಾಡಲಿದ್ದಾರೆ ಎನ್ನುವ ಸುದ್ದಿ ಎಲ್ಲಾ ಕಡೆ ಹರಿದಾಡುತ್ತಿತ್ತು.

ನಿರ್ದೇಶಕ ನರ್ತನ್ ಕೂಡ ಒಂದುವರೆ ವರ್ಷದಿಂದ ನಟ ಯಶ್ ರವರಿಗೆ ಕಥೆ ಬರೆಯುವುದರಲ್ಲಿ ಬಿಸಿಯಾಗಿದ್ದಾರೆ. ಆದರೆ ಇತ್ತೀಚೆಗಷ್ಟೇ ಆ ಸಿನಿಮಾ ಆಗುವುದಿಲ್ಲ ಎನ್ನುವ ಸುದ್ದಿ ಕೂಡ ಸಿಕ್ಕಿದೆ. ಇದೀಗ ನಿರ್ದೇಶಕ ನರ್ತನ ಕೂಡ ತಮ್ಮ ಹೊಸ ಸಿನಿಮಾದಲ್ಲಿ ತೊಡಗಿಕೊಂಡಿದ್ದಾರೆ ಎಂದು ಹೇಳಲಾಗುತ್ತಿದೆ. ನರ್ತನ ಸಿನಿಮಾ ಡ್ರಾಪ್ ಆಗುತ್ತಿದ್ದಂತೆ ನಟ ಯಶ್ ಕೆವಿಎಸ್ ಪ್ರೊಡಕ್ಷನ್ ನಲ್ಲಿ ಸಿನಿಮಾ ಮಾಡಲಿದ್ದಾರೆ ಎನ್ನುವ ಸುದ್ದಿಯಲ್ಲ ಕಡೆ ವೈರಲಾಗಿತ್ತು ಈ ಸುದ್ದಿಯ ಬೆನ್ನಲ್ಲೇ ಕೆಜಿಎಫ್ ಚಾಪ್ಟರ್ ಮೂರು ವಿಷಯವೂ ಕೂಡ ಹೊರಬಂದಿತ್ತು ಇದೀಗ ಎಲ್ಲವನ್ನು ದಾಟಿಕೊಂಡು ಹೊಸದೊಂದು ಸುದ್ದಿ ಹೊರ ಬಂದಿದ್ದು ತಮ್ಮದೇ ನಿರ್ಮಾಣ ಸಂಸ್ಥೆಯಲ್ಲಿ ಸಿನಿಮಾ ಒಂದರಲ್ಲಿ ನಟಿಸುತ್ತಿದ್ದಾರೆ ಎಂದು ಹೇಳಲಾಗುತ್ತದೆ.

ನಟ ಯಶ್ ಅವರ ಹುಟ್ಟು ಹಬ್ಬದ ದಿನದಂತೆ ಈ ಸುದ್ದಿಯನ್ನು ಹೇಳಲಿದ್ದಾರೆ. ಮಗಳು ಐರ ಎಂದರೆ ನಟ ಯಶ್ ಹಾಗೂ ರಾಧಿಕಾ ಪಂಡಿತ್ ಗೆ ಅಚ್ಚುಮೆಚ್ಚು ನಟ ಯಶ್ ಹಾಗೂ ರಾಧಿಕಾ ಪಂಡಿತ್ ದಂಪತಿಗಳಿಗೆ ಮಗಳು ಐರಾ ಲಕ್ಕಿ ಗರ್ಲ್ ಆಗಿದ್ದಾರೆ. ಹಾಗಾಗಿ ತಮ್ಮ ಮಗಳು ಐರ ಹೆಸರಿನಲ್ಲಿ ಪ್ರೊಡಕ್ಷನ್ ಹೌಸ್ ಅನ್ನು ಶುರು ಮಾಡಿ ಮಗಳನ್ನೇ ನಿರ್ಮಾಪಕಿಯನ್ನಾಗಿ ಮಾಡಬೇಕು ಎಂದು ಯಶ್ ಹಾಗು ರಾಧಿಕಾ ಪಂಡಿತ್ ದಂಪತಿಗಳು ಆಲೋಚಿಸುತ್ತಿದ್ದಾರೆ.