ಪಾಪ ಮೊನ್ನೆ ಕಾಲು ಮುರ್ಕೊಂಡವ್ನೆ ದಿಗಂತ್ ನೋಡಿದ್ರೆ ಬಹಳ ಬೇಜಾರಾಗುತ್ತೆ: ಸತೀಶ್ ನೀನಾಸಂ

ನಟ ದಿಗಂತ್(Diganth) ರವರ ನಟನೆಯಲ್ಲಿ ಮೂಡಿ ಬರುತ್ತಿರುವ ತಿಮ್ಮಯ್ಯ ಅಂಡ್ ತಿಮ್ಮಯ್ಯ(timayya and timayya) ಎನ್ನುವ ಚಿತ್ರವು ಇಂದು ತೆರೆಕಂಡಿದ್ದು ಈ ಚಿತ್ರದಲ್ಲಿ ಅನಂತ್ ನಾಗ್ (Anant nag)ರವರ ಜೊತೆಗೆ ದಿಗಂತ್ ರವರು ಸ್ಕ್ರೀನ್ ಶೇರ್ ಮಾಡಿಕೊಂಡಿದ್ದಾರೆ. ತಿಮ್ಮಯ್ಯ ಅಂಡ್ ತಿಮ್ಮಯ್ಯ ಚಿತ್ರದ ಚಿತ್ರೀಕರಣದ ವೇಳೆಯಲ್ಲಿ ನಟ ದಿಗಂತ್ ರವರಿಗೆ ಆಕ್ಸಿಡೆಂಟ್(Diganth accident) ಕೂಡ ಆಗಿತ್ತು. ಇವರು ತಮ್ಮ ಆಕ್ಸಿಡೆಂಟ್ ಮೂಲಕ ಕಾಲನ್ನು ಕೂಡ ಮುರಿದುಕೊಂಡಿದ್ದರು. ಈ ವೇಳೆ ಅವರು ಚೇತರಿಸಿಕೊಂಡು ತಮ್ಮ ಸಿನಿಮ ತಿಮ್ಮಯ್ಯ ಅಂಡ್ ತಿಮ್ಮಯ್ಯ ಎಲ್ಲಾ ಕಡೆ ಪ್ರಮೋಷನ್ ಮಾಡುವಲ್ಲಿ ಬಿಜಿಯಾಗಿದ್ದಾರೆ. ಸತೀಶ್ ನೀನಾಸಂ(Satish ninasam) ರವರು ಇಂದು ತಿಮ್ಮಯ್ಯ ಅಂಡ್ ತಿಮ್ಮಯ್ಯ ಚಿತ್ರವನ್ನು ನೋಡಿ ಅದರ ಬಗ್ಗೆ ಮಾತನಾಡಿದ್ದಾರೆ.

ನಟ ದಿಗಂತ ಅಭಿನಯದ ತಿಮ್ಮಯ್ಯ ಅಂಡ್ ತಿಮ್ಮಯ್ಯ ಚಿತ್ರವನ್ನು ನೋಡಿದೆ. ಹಲವಾರು ವರ್ಷಗಳ ನಂತರ ಇದೀಗ ನಟ ದಿಗಂತ್ ರವರ ಸಿನಿಮಾವನ್ನು ನೋಡುತ್ತಿದ್ದೇನೆ. ಹಲವಾರು ವರ್ಷಗಳ ನಂತರ ದಿಗಂತ್ ಸಿನಿಮಾ ವನ್ನು ನೋಡಿ ನನಗೆ ಖುಷಿಯಾಗುತ್ತಿದೆ. ದಿಗಂತ್ ಜೀವನದಲ್ಲಿ ಕಳೆದ ಮೂರು ನಾಲ್ಕು ವರ್ಷಗಳಿಂದ ಆದಂತಹ ಇನ್ಸಿಡೆಂಟ್ ಗಳನ್ನು ನೆನಪಿಸಿಕೊಂಡಾಗ ಬಹಳ ಬೇಜಾರ ಎನಿಸುತ್ತದೆ. ಅವನ ಭುಜದ ಬಗ್ಗೆ ಆಗಿರಬಹುದು, ಮೊನ್ನೆ ತಾನೆ ಕಾಲು ಮುರಿದುಕೊಂಡಿದ್ದಾನೆ.

ಸೀನಿಯರ್ ಅನಂತನಾಗ್ ಹಾಗೂ ಜೂನಿಯರ್ ದಿಗಂತ್ ಇವರಿಬ್ಬರನ್ನು ತಿಮ್ಮಯ್ಯ ಚಿತ್ರದಲ್ಲಿ ನೋಡಿ ನನಗೆ ಬಹಳ ಖುಷಿಯಾಯಿತು. ಅನಂತ್ ನಾಗ್ ಸರ್ ರವರ ಬಗ್ಗೆ ಹೇಳಬೇಕಾಗೇ ಇಲ್ಲ ಅವರ ನಟನೆಯನ್ನು ನೋಡುತ್ತಿದ್ದರೆ ಅವರು ನಟನೆಯನ್ನು ಹೇಳಿಕೊಡುವ ಚಾಣಕ್ಯನಂತೆ ನಮಗೆ ಕಾಣಿಸುತ್ತಾರೆ. ನಟ ಅನಂತನಾಗ್ ರವರ ಜೊತೆ ನಾನು ನಟಿಸಬೇಕು ಎನ್ನುವುದು ನನ್ನ ಬಹುದಿನದ ಕನಸು ಆದರೆ ಅದು ಇಂದಿಗೂ ಕೂಡ ನನಸಾಗಿಲ್ಲ ಅವರು ಮತ್ತು ನಾನು ನಟಿಸಲು ಯಾವುದೇ ಉತ್ತಮ ಕಥೆಗಳು ಸಿಕ್ಕಿಲ್ಲ ಹಾಗಾಗಿ ಉತ್ತಮ ಕಥೆಗಳಿಗಾಗಿ ನಾನು ವೇಟ್ ಮಾಡುತ್ತಿದ್ದೇನೆ.

ದಿಗಂತ್ ರವರ ಮಡದಿ ಐಂದ್ರಿತಾ ರೇ ರವರ ಬಗ್ಗೆ ಮಾತನಾಡಲೇಬೇಕು. ಅವರ ನಟನೆ ಇಡಿ ಸಿನಿಮಾದಲ್ಲಿ ಖುಷಿಯನ್ನು ನೀಡುತ್ತದೆ. ನಟಿ ಐಂದ್ರಿತಾ ರೇ(aindrita Ray) ರವರು ಇನ್ನು ಹೆಚ್ಚು ಸಿನಿಮಾಗಳನ್ನು ಮಾಡಬೇಕು ಇಂತಹ ಅದ್ಭುತ ನಟಿಯ ಜೊತೆ ನಾನ್ಯಾಕೆ ಇನ್ನೂ ಸಿನಿಮಾಗಳನ್ನು ಮಾಡಿಲ್ಲ ಎನಿಸುತ್ತದೆ. ಒಂದು ಸಣ್ಣ ಎಳೆಯನ್ನು ಇಟ್ಟುಕೊಂಡು ಈ ಸಿನಿಮಾವನ್ನು ತುಂಬಾ ಚೆನ್ನಾಗಿ ಚಿತ್ರಿಕರಿಸಿದ್ದಾರೆ. ಸಿನಿಮಾದಲ್ಲಿ ಕಾಸ್ ಟ್ಯೂಮ್ ಡಿಸೈನಿಂಗ್ ತುಂಬಾ ಚೆನ್ನಾಗಿದೆ ಸಿಲಿಮಾಟೋಗ್ರಾಫಿ ಹಾಗೂ ಎಲ್ಲರ ಆಕ್ಟಿಂಗ್ ಕೂಡ ಸೂಪರ್ ಆಗಿದೆ.

ದಿಗಂತ್ ಹಾಗೂ ಐಂದ್ರಿತಾ ರೇ(Diganth aindrita re) ರವರ ಜೋಡಿಯಲ್ಲಿ ಈ ಸಿನಿಮಾ ಮೂಡಿ ಬಂದಿದೆ ಅವರ ಜೋಡಿಯನ್ನು ನೋಡಿ ಮತ್ತೆ ನನಗೆ ಖುಷಿಯಾಯಿತು. ಡೈರೆಕ್ಟರ್ ಸುಬ್ಬರಾಯಪ್ಪ ,ಅನುಪ್ ಸೇರಿದಂತೆ ತಿಮ್ಮಯ್ಯ ಅಂಡ್ ತಿಮ್ಮಯ್ಯ ಚಿತ್ರತಂಡಕ್ಕೆ ಸತೀಶ್ ನೀನಾಸಂ ರವರು ಶುಭಾಶಯಗಳನ್ನು ತಿಳಿಸಿದರು ತಿಮ್ಮಯ್ಯ ಅಂಡ್ ತಿಮ್ಮಯ್ಯ ಚಿತ್ರಕ್ಕೆ ಹಾರೈಸಿದರು ತಿಮ್ಮಯ್ಯ ಅಂಡ್ ತಿಮ್ಮಯ್ಯ ಚಿತ್ರವನ್ನು ನೋಡಿದಾಗ ನನಗೆ ಮನಸಾರೆ, ಪಂಚರಂಗಿ(pancharangi) ಮುಂತಾದ ಚಿತ್ರಗಳು ನೆನಪಾಗುತ್ತಿದ್ದವು ನಾನು ದಿಗಂತ್ ಜೊತೆ ಆಗ ಸಣ್ಣ ಪುಟ್ಟ ಪಾತ್ರಗಳಲ್ಲಿ ನಟಿಸುತ್ತಿದ್ದೆ. ದಿಗಂತ್ ಹಾಗೂ ಐಂದ್ರಿತಾ ರೈ ರವರು ಯಾವಾಗಲೂ ಎಲ್ಲರಿಗೂ ಕೂಡ ಒಳ್ಳೆಯದನ್ನೇ ಬಯಸುತ್ತಾರೆ ಅವರಿಗೆ ಜೀವನದಲ್ಲಿ ಒಳ್ಳೆಯದಾಗಬೇಕು ಎಂದು ಸತೀಶ್ ನೀನಾಸಂ ಹಾರೈಸಿದರು