ಉಸಿರಾಗುವೆ ಹಸಿರಾಗುವೆ ಆ ಸೂರ್ಯ ಚಂದ್ರ ಇರುವವರೆಗೂ ಹಾಡಿಗೆ ಪುನೀತ್ ಜೊತೆಗೆ ರಾಧಿಕಾ ಕುಮಾರಸ್ವಾಮಿ ನೃತ್ಯ

ರಾಧಿಕಾ ಒಂದು ಕಾಲದಲ್ಲಿ ಟಾಪ್ ನಟಿಯಾಗಿದ್ದರು. ಬಹು ಬೇಡಿಕೆಯ ನಟಿಯಾಗಿ ಗುರುತಿಸಿಕೊಂಡಿದ್ದರು. ಸ್ಯಾಂಡಲ್​ವುಡ್​ನಲ್ಲಿ ಕ್ಯೂಟೆಸ್ಟ್ ತಂಗಿಯಾಗಿದ್ದರು. ಯಾವುದೇ ಸಿನಿಮಾ ಆದರೂ ಕೂಡ ರಾಧಿಕಾ ಕುಮಾರಸ್ವಾಮಿ ನಟಿಸಿದ್ದರೆ ಸಿನಿಮಾ ಹಿಟ್ ಎನ್ನುವ ಲೆಕ್ಕಾಚಾರವಿತ್ತು. ವಿಶೇಷವಾಗಿ ನಟಿ ತಮ್ಮದೇ ಆದ ಅಭಿಮಾನಿಗಳನ್ನು ಹೊಂದಿದ್ದರು.

ಸಿನಿಮಾರಂಗದಲ್ಲಿ ಗುರುತಿಸಿಕೊಂಡಿದ್ದ ರಾಧಿಕಾ ಕುಮಾರಸ್ವಾಮಿಯವರ ವೈವಾಹಿಕ ಜೀವನ ಅಷ್ಟೇನು ಚೆನ್ನಾಗಿರಲಿಲ್ಲ. ಮೂಲತಃ ಮಂಗಳೂರಿನವರಾದ ರಾಧಿಕಾ ಕುಮಾರ್ ಸ್ವಾಮಿ ಹದಿನಾಲ್ಕನೇ ವಯಸ್ಸಿನಲ್ಲಿ ರತನ್ ಕುಮಾರ್ ಎಂಬುವವರ ಜೊತೆ ಇವರಿಗೆ ಬಾಲ್ಯ ವಿವಾಹವಾದರು. ಆದರೆ ಇವರ ಪತಿ 2002 ರಲ್ಲಿ ಇವರ ಪತಿ ಹೃದಯಘಾತದಿಂದ ಸಾವನ್ನಪ್ಪಿದ್ದರು. 2006 ರಲ್ಲಿ ಕುಮಾರಸ್ವಾಮಿಯವರೊಂದಿಗೆ ವೈವಾಹಿಕ ಜೀವನಕ್ಕೆ ಕಾಲಿಟ್ಟರು. ಆದರೆ 2010 ರಲ್ಲಿ ಕೋರ್ಟ್ ಇವರಿಬ್ಬರ ಮದುವೆಯನ್ನು ಅಸಿಂಧು ಎಂದು ಘೋಷಿಸಿತು.

 

 

ಇನ್ನು ಕನ್ನಡದ ಟಾಪ್ ನಟಿಯರಲ್ಲಿ ಒಬ್ಬರಾಗಿದ್ದ ರಾಧಿಕಾ ಕುಮಾರಸ್ವಾಮಿ ಅವರೂ ಅಷ್ಟೆ ಡ್ಯಾನ್ಸ್ ವಿಚಾರಕ್ಕೆ ಬಂದರೆ ಸೂಪರ್. ಖಾಸಗಿ ಕಾರ್ಯಕ್ರಮ, ಅವರ ಫ್ಯಾಮಿಲಿ ಫಂಕ್ಷನ್​​ಗಳಲ್ಲಿ ನಟಿ ಡ್ಯಾನ್ಸ್ ಮಾಡುವ ಹಲವಾರು ವಿಡಿಯೋಗಳು ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿವೆ. ರಾಧಿಕಾ ಹಾಗೂ ಪುನೀತ್ ರಾಜ್​ಕುಮಾರ್ ಜೊತೆಯಾಗಿ ಕೊನೆಯಬಾರಿ ಯಾವಾಗ ಡ್ಯಾನ್ಸ್ ಮಾಡಿದ್ದರು ಗೊತ್ತೇ? ಅವರು ಜೊತೆಯಾಗಿ ಖುಷಿಯಾಗಿ ಕೊನೆಯಬಾರಿ ಒಟ್ಟಿಗೆ ಹೆಜ್ಜೆ ಹಾಕಿದ ವಿಡಿಯೋ ಒಂದು ಈಗ ಸೋಷಿಯಲ್ ಮಿಡಿಯಾದಲ್ಲಿ ಸದ್ದು ಮಾಡುತ್ತಿದೆ.

ನಟಿ ಸಿನಿಮಾರಂಗದಿಂದ ದೂರ ಉಳಿದಿದ್ದರೂ ಡ್ಯಾನ್ಸ್ ಮಾಡುವುದರ ಮೂಲಕ ತಮ್ಮ ಅಭಿಮಾನಿಗಳನ್ನು ತಲುಪುತ್ತಾರೆ. ವಿಡಿಯೋವನ್ನು ಹಂಚಿಕೊಳ್ಳುತ್ತಾರೆ. ಎರಡು ವರ್ಷದ ಹಿಂದೆ ಸುವರ್ಣ ವಾಹಿನಿಯಲ್ಲಿ ಮೂಡಿ ಬರುತ್ತಿದ್ದಂತಹ ಡ್ಯಾನ್ಸಿಂಗ್ ಕಾರ್ಯಕ್ರಮ ಒಂದರಲ್ಲಿಯೂ ರಾಧಿಕಾ ಕುಮಾರಸ್ವಾಮಿ ಅವರು ಜಡ್ಜ್ ಆಗಿ ಕಾಣಿಸಿಕೊಂಡಿದ್ದರು. ಈ ಸಮಯದಲ್ಲಿ ಪವರ್ ಸ್ಟಾರ್ ಪುನೀತ್ ರಾಜಕುಮಾರ್ ಅವರು ಕೂಡ ಆಗಮಿಸಿದ್ದರು.ಆ ವೇಳೆಯಲ್ಲಿ ಅಪ್ಪು ಅವರ ಜೊತೆಗೆ ರಾಧಿಕಾ ಕುಮಾರಸ್ವಾಮಿಯವರು ರಾಜ್ ಸಿನಿಮಾದ ಪಾರು ಎಂಬ ಹಾಡಿಗೆ ಹೆಜ್ಜೆಯನ್ನು ಹಾಕಿದ್ದರು. ಸದ್ಯಕ್ಕೆ ಅಪ್ಪು ಮತ್ತು ರಾಧಿಕಾ ಕುಮಾರಸ್ವಾಮಿಯವರು ಮಾಡಿದ ಡಾನ್ಸ್ ವಿಡಿಯೋವೊಂದು ವೈರಲ್ ಆಗಿದ್ದು ನೆಟ್ಟಿಗರ ಮನಸ್ಸನ್ನು ಗೆದ್ದಿದೆ.