ಇಬ್ಬರು ಮಕ್ಕಳಾದ ಮೇಲೆ ಫಸ್ಟ್ ಟೈಮ್ ಮನ ಬಿಚ್ಚಿ ಕುಪ್ಪಳಿಸಿ ಕುಣಿದ ನಟಿ ಅಮೂಲ್ಯ

ನಟಿ ಅಮೂಲ್ಯ(Amulya) ಕನ್ನಡ ಚಿತ್ರರಂಗದಲ್ಲಿ ಅತಿ ಹೆಚ್ಚು ಬೇಡಿಕೆಯನ್ನು ಹೊಂದಿದಂತಹ ನಟಿಯಾಗಿದ್ದರು ತಮ್ಮ ಮದುವೆಯ ಬಳಿಕ ಇವರು ಯಾವುದೇ ಚಿತ್ರಗಳಲ್ಲಿ ಕೂಡ ನಟಿಸಿಲ್ಲ. ಸದ್ಯಕ್ಕೆ ಇವರು ಜಗದೀಶ್ ಎಂಬುವ ಉದ್ಯಮಿಯೊಬ್ಬರನ್ನು ವಿವಾಹವಾಗಿದ್ದು ಅವರಿಗೆ ಇದೀಗಾಗಲೇ ಅವಳಿ ಮಕ್ಕಳು ಇದ್ದಾರೆ. ಎಂಬ ವಿಷಯ ಎಲ್ಲರಿಗೂ ಕೂಡ ತಿಳಿದೇ ಇದೆ. ನಟಿ ಅಮೂಲ್ಯ ಸಿನಿಮಾ ರಂಗವನ್ನು ಬಿಟ್ಟು ಇದೀಗ ತನ್ನ ಕುಟುಂಬದ ಬಗ್ಗೆ ಹೆಚ್ಚು ಕಾಳಜಿಯನ್ನು ವಹಿಸುತ್ತಿದ್ದಾರೆ. ನಟಿ ಅಮೂಲ್ಯ ಗೋಲ್ಡನ್ ಸ್ಟಾರ್ ಗಣೇಶ್(golden Star Ganesh) ರವರ ಜೊತೆಗೆ “ಚೆಲುವಿನ ಚಿತ್ತಾರ”(cheluvina chittara) ಎನ್ನುವ ಚಿತ್ರದ ಮೂಲಕ ಕನ್ನಡ ಚಿತ್ರರಂಗಕ್ಕೆ ಎಂಟ್ರಿ ಕೊಟ್ಟಿದ್ದರು ಇಂದು ಡಾರ್ಲಿಂಗ್ ಕೃಷ್ಣರವರ ಅಭಿನಯದ “ಶುಗರ್ ಫ್ಯಾಕ್ಟರಿ”(sugar factory) ಚಿತ್ರದ ಆಡಿಯೋ ಲಾಂಚ್ ಕಾರ್ಯಕ್ರಮಕ್ಕೆ ನಟಿ ಅಮೂಲ್ಯ ಹಾಗೂ ಜಗದೀಶ್ ದಂಪತಿಗಳು ಆಗಮಿಸಿದ್ದರು.

ಈ ವೇಳೆ ನಟಿ ಅಮೂಲ್ಯ ಮದುವೆಯಾಗಿ ಮಕ್ಕಳಾಗಿವೆ ಎಂಬುದನ್ನು ಮರೆತು ಉತ್ಸಾಹದಿಂದ ಸ್ಟೇಜ್ ಮೇಲೆ ಕುಣಿದಿದ್ದಾರೆ. ನಟಿ ಅಮೂಲ್ಯ ಬಾಲ ನಟಿಯಾಗಿ ಡಿ ಬಾಸ್ ದರ್ಶನ್(d boss Darshan) ರವರ “ಲಾಲಿ ಹಾಡು” ಚಿತ್ರದಲ್ಲಿ ಮೊದಲಿಗೆ ಕಾಣಿಸಿಕೊಂಡಿದ್ದರು. ತದನಂತರ ಇವರು ಚೆಲುವಿನ ಚಿತ್ತಾರ ಚಿತ್ರದ ಮೂಲಕ ಹೆಚ್ಚು ಪ್ರಖ್ಯಾತಿಯನ್ನು ಪಡೆದುಕೊಂಡರು ಚೈತ್ರದ ಚಂದ್ರಮ, ಶ್ರಾವಣಿ ಸುಬ್ರಮಣ್ಯ, ಗಜಕೇಸರಿ, ಮಳೆ ಮುಂತಾದ ಚಿತ್ರಗಳಲ್ಲಿ ಮೇರು ನಟರ ಜೊತೆ ನಟಿಸಿ ನಟನೆಯಲ್ಲಿ ಸೈ ಎನಿಸಿಕೊಂಡಿದ್ದಾರೆ.

ನಟ ಡಾರ್ಲಿಂಗ್ ಕೃಷ್ಣರವರು ಅಭಿನಯಿಸಿರುವ ಶುಗರ್ ಫ್ಯಾಕ್ಟರಿ ಚಿತ್ರದ ಚಿತ್ರೀಕರಣ ಇದೀಗಾಗಲೇ ಮುಗಿದಿದ್ದು ಶುಗರ್ ಫ್ಯಾಕ್ಟರಿ ಚಿತ್ರದಲ್ಲಿ ಸೋನೆ ಮೌಂಟ್ , ಶಿಲ್ಪಾ ಶೆಟ್ಟಿ ಹಾಗೂ ಅಧ್ವಿತಿ ಶೆಟ್ಟಿ ರವರು ನಾಯಕರಾಗಿ ನಟಿಯರಾಗಿ ನಟಿಸುತ್ತಿದ್ದಾರೆ. ನಟ ಡಾರ್ಲಿಂಗ್ ಕೃಷ್ಣ(darling Krishna) ಅಭಿನಯದ ಶುಗರ್ ಫ್ಯಾಕ್ಟರಿ ಚಿತ್ರ ಅಭಿಮಾನಿಗಳಲ್ಲಿ ಕುತೂಹಲವನ್ನು ಹುಟ್ಟು ಹಾಕಿದ್ದು ಇಂದು ಶುಗರ್ ಫ್ಯಾಕ್ಟರಿ ಚಿತ್ರದ ಆಡಿಯೋ ಲಾಂಚ್ ಕಾರ್ಯಕ್ರಮ ಕೂಡ ನಡೆದಿದೆ. ಶುಗರ್ ಫ್ಯಾಕ್ಟರಿ ಚಿತ್ರದ ಆಡಿಯೋ ಲಾಂಚ್ ಕಾರ್ಯಕ್ರಮಕ್ಕೆ ಅಮೂಲ್ಯ ಹಾಗೂ ಜಗದೀಶ್(Amulya Jagadish) ದಂಪತಿಗಳು ಕೂಡ ಹಾಜರಿದ್ದರು.

 

ಶುಗರ್ ಫ್ಯಾಕ್ಟರಿ ಚಿತ್ರದಲ್ಲಿ ರಂಗಾಯಣ ರಘು ರವರು ಹಾಗೂ ಕಾಮಿಡಿ ಕಿಲಾಡಿ ಖ್ಯಾತಿಯ ಸೂರಜ್ ಹಾಸ್ಯ ಕಲಾವಿದರಾಗಿ ನಟಿಸಿದ್ದಾರೆ. ಜಯಂತ್ ಕಾಯ್ಕಿಣಿ, ಯೋಗರಾಜ್ ಭಟ್(yograj Bhatt), ಚಂದನ್ ಶೆಟ್ಟಿ (Chandan Shetty)ಮುಂತಾದವರ ಸಾಹಿತ್ಯದಲ್ಲಿ ಹಾಡುಗಳು ಮೂಡಿಬಂದಿವೆ. ಶುಗರ್ ಫ್ಯಾಕ್ಟರಿ ಚಿತ್ರದ ಚಿತ್ರೀಕರಣ ಇದೀಗ ಮುಗಿದಿದ್ದು ಗೋವಾ, ಬೆಂಗಳೂರು, ಮೈಸೂರು, ಕಜಾಕಿಸ್ತಾನ ಮುಂತಾದ ಕಡೆಗಳಲ್ಲಿ ಕಳೆದ 55 ದಿನಗಳಿಂದ ಶುಗರ್ ಫ್ಯಾಕ್ಟರಿ ಚಿತ್ರದ ಚಿತ್ರೀಕರಣ ಅದ್ದೂರಿಯಾಗಿ ನಡೆದಿತ್ತು

ಶುಗರ್ ಫ್ಯಾಕ್ಟರಿ ಚಿತ್ರ ತನ್ನ ಚಿತ್ರವನ್ನು ಎಲ್ಲಾ ಕಡೆ ಪ್ರಮೋಷನ್ ಮಾಡಿದ್ದು ಅಭಿಮಾನಿಗಳಲ್ಲಿ ಕುತೂಹಲವನ್ನು ಹುಟ್ಟು ಹಾಕಿದೆ. ಶುಗರ್ ಫ್ಯಾಕ್ಟರಿ ಚಿತ್ರದಲ್ಲಿ ಮೂವರು ನಾಯಕ ನಟಿಯರಿದ್ದು ಈ ಹಿಂದೆ ಡಾರ್ಲಿಂಗ್ ಕೃಷ್ಣಾ ರವರ ಅಭಿನಯದ ದಿಲ್ ಪಸಂದ್ ಚಿತ್ರದಲ್ಲೂ ಕೂಡ ಜೊತೆ ಜೊತೆಯಲಿ ದಾರಾವಾಹಿ ಖ್ಯಾತಿಯ ಮೇಘ ಶೆಟ್ಟಿ(Megha Shetty) ಹಾಗೂ ನಿಶ್ವಿಕಾ ನಾಯ್ಡು(nishika Naidu) ರವರು ನಾಯಕಿಯರಾಗಿ ನಟಿಸಿದ್ದರು ಇದೀಗ ಡಾರ್ಲಿಂಗ್ ಕೃಷ್ಣರವರ ಚಿತ್ರದಲ್ಲಿ ಮೂರು ಜನ ನಾಯಕ ನಟಿಯರಿದ್ದು ಅಭಿಮಾನಿಗಳಲ್ಲಿ ಕುತೂಹಲವನ್ನು ಹುಟ್ಟಿಸಿದೆ.