ಅಭಿಷೇಕ್‌ ಮುಂದಿನ ಸಿನಿಮಾಗೆ ರಾಣಾ ವಿಲನ್:ಮೈತುಂಬ ಅಭಿಷೇಕ್ ಅಂಬರೀಶ್ ಟ್ಯಾಟೋ ಹಾಕಿಸಿಕೊಂಡ ಅಭಿಮಾನಿ

ಕಳೆದ ಒಂದು ವಾರದಿಂದ ಅಂಬರೀಶ್ ಹಾಗೂ ಸುಮಲತಾ ದಂಪತಿಗಳ ಮಗ ಜೂನಿಯರ್ ರೆಬಲ್ ಸ್ಟಾರ್(junior Rebel Star) ಅಭಿಷೇಕ್ ರವರ ಸುದ್ದಿ ಸೋಶಿಯಲ್ ಮೀಡಿಯಾದಲ್ಲಿ ಸಿಕ್ಕಾಪಟ್ಟೆ ವೈರಲಾಗುತ್ತಿದೆ. ನಟ ಅಭಿಷೇಕ್ ಅಂಬರೀಶ್ (Abhishek Ambarish)ರವರ ನಿಶ್ಚಿತಾರ್ಥದ ಕುರಿತು ಒಂದು ಕಡೆ ಸುದ್ದಿ ಆಗುತ್ತಿದ್ದರೆ ಇನ್ನೊಂದು ಕಡೆ ನಟ ಅಭಿಷೇಕ್ ಅಂಬರೀಶ್ ರವರ ಟ್ಯಾಟೋವನ್ನು ಬೆನ್ನ ಹಿಂದೆ ಹಾಕಿಸಿಕೊಂಡಿರುವ ಅಭಿಮಾನಿಯ ಕುರಿತು ಕೂಡ ವೈರಲ್ ಆಗುತ್ತಿದೆ ಇದೀಗ ತೆಲುಗಿನ ಬಲ್ಲಾಳದೇವ ರಾಣಾ ದಗ್ಗುಬಟಿ(Rana daggubati) ಕೂಡ ಅಭಿಷೇಕ್ ಅಂಬರೀಶ್ ಮನೆಗೆ ವಿಸಿಟ್ ಮಾಡಿದ್ದಾರೆ ಈ ಮೂರು ವಿಷಯಗಳಿಂದ ಅಭಿಷೇಕ ಸಿಕ್ಕಾಪಟ್ಟೆ ವೈರಲ್ ಆಗುತ್ತಿದ್ದಾರೆ.

ಅಭಿಮಾನಿಗಳು ಕೂಡ ಅಭಿಷೇಕ್ ಅಂಬರೀಶ್ ರವರ ಜೀವನದಲ್ಲಿ ಸಿಕ್ಕಾಪಟ್ಟೆ ಪಾಸಿಟಿವ್ ವಿಷಯಗಳು ನಡೆಯುತ್ತಿರುವುದಕ್ಕೆ ಖುಷಿಪಡುತ್ತಿದ್ದಾರೆ ಹಾಗೆಯೇ ಜೂನಿಯರ್ ರೆಬಲ್ ಸ್ಟಾರ್ ಈ ಹಿಂದೆ “ಅಮರ್” ಎನ್ನುವ ಚಿತ್ರದ ಮೂಲಕ ಸಿನಿಮಾ ರಂಗಕ್ಕೆ ಎಂಟ್ರಿ ಕೊಟ್ಟಿದ್ದರು ಇದೀಗ ಜೂನಿಯರ್ ರೆಬಲ್ ಸ್ಟಾರ್ ಹಲವಾರು ಸಿನಿಮಾಗಳಲ್ಲಿ ಬಿಜಿಯಾಗಿದ್ದಾರೆ ರಚಿತಾ ರಾಮ್(rachita Ram) ರವರ ಜೊತೆ “ಬ್ಯಾಡ್ ಮ್ಯಾನರ್ಸ್”(bad manners) ಎನ್ನುವ ಸಿನಿಮಾದಲ್ಲಿ ಬಿಸಿಯಾಗಿದ್ದಾರೆ ಹಾಗೆಯೇ ಕಾಂತಾರ(kantara) ಚಿತ್ರದ ಖ್ಯಾತಿಯ ಸಪ್ತಮಿ ಗೌಡ(saptami Gowda) ರವರ ಜೊತೆ ಕಾಳಿ ಚಿತ್ರದ ಮಹೂರ್ತವನ್ನು ಕೂಡ ಇದೀಗಾಗಲೇ ಫಿಕ್ಸ್ ಮಾಡಲಾಗಿದೆ.

ಈ ಹಿನ್ನೆಲೆಯಲ್ಲಿ ಅಭಿಷೇಕ್ ಅಂಬರೀಷ್ ರವರ ನಿಶ್ಚಿತಾರ್ಥದ (Abhishek Ambarish engagement)ಕುರಿತು ಕೂಡ ಸಿಕ್ಕಾಪಟ್ಟೆ ಸುದ್ದಿಯಾಗುತ್ತಿದೆ. ಫ್ಯಾಶನ್ ಡಿಸೈನಿಂಗ್ ಕ್ಷೇತ್ರದಲ್ಲಿ ಸದ್ದು ಮಾಡಿರುವ ಅವಿವಾ ಬಿದ್ದಪ್ಪ (Aviva biddappa)ಎನ್ನುವವರನ್ನು ನಟ ಅಭಿಷೇಕ್ ಅಂಬರೀಶ್ ಡಿಸೆಂಬರ್ ತಿಂಗಳ ಎರಡನೇ ವಾರದಲ್ಲಿ ಬೆಂಗಳೂರಿನ ಅರಮನೆ ಮೈದಾನದಲ್ಲಿ ಅದ್ದೂರಿಯಾಗಿ ಎಂಗೇಜ್ಮೆಂಟ್ ಮಾಡಿಕೊಳ್ಳುತ್ತಾರೆ ಎನ್ನುವ ಸುದ್ದಿ ಎಲ್ಲಾ ಕಡೆ ವೈರಲಾಗುತ್ತಿದೆ. ಆದರೆ ಅಭಿಷೇಕ್ ಅಂಬರೀಶ್ ಆಗಲಿ ಅಥವಾ ಅವರ ತಾಯಿ ಸುಮಲತಾ(sumalatha Ambarish) ರವರ ಇದರ ಬಗ್ಗೆ ತುಟಿ ಬಿಚ್ಚಿಲ್ಲ

ಟಾಲಿವುಡ್ ನ ಬಲ್ಲಾಳದೇವ ಪ್ರಾಣ ದಗ್ಗುಬಾಟಿ ಕೂಡ ಅಭಿಷೇಕ್ ಅಂಬರೀಶ್ ರವರ ಮನೆ ವಿಸಿಟ್ ಮಾಡಿದ್ದು ಇವರ ಜೊತೆ ಅಭಿಷೇಕ ಅಂಬರೀಶ್ ಫೋಟೋ ತೆಗೆಸಿಕೊಂಡಿದ್ದಾರೆ ಈ ಫೋಟೋ ಎಲ್ಲಾ ಕಡೆ ವೈರಲ್ ಆಗಿದೆ. ರಾಣ ದಗ್ಗುಬಾಟಿ ಬೆಂಗಳೂರಿಗೆ ಬಂದಾಗ ಅಭಿಷೇಕ್ ಅಂಬರೀಶ್ ರವರನ್ನು ಭೇಟಿ ಮಾಡಿ ಸೌಜನ್ಯದಿಂದ ಫೋಟೋ ತೆಗೆಸಿಕೊಂಡಿದ್ದಾರೆ ಎಂದು ಮೂಲಗಳು ಹೇಳುತ್ತಿವೆ ಆದರೆ ಅಭಿಮಾನಿಗಳಿಗೆ ಮಾತ್ರ ರಾಣ ದಗ್ಗುಬಾಟಿ ಅಭಿಷೇಕ್ ಅಂಬರೀಶ್ ರವರನ್ನು ಭೇಟಿ ಮಾಡಿದ್ದು ಅನುಮಾನವನ್ನು ಎಡೆ ಮಾಡಿಕೊಟ್ಟಿದೆ.

ಇಷ್ಟೇ ಅಲ್ಲದೆ ಅಭಿಷೇಕ್ ಅಂಬರೀಶ್ ರವರ ಅಭಿಮಾನಿಯಾಗಿರುವ ಮದ್ದೂರು ತಾಲೂಕು ಕೊಪ್ಪ ಹೋಬಳಿ ಅರಳಿಕೆರೆ ಗ್ರಾಮದ ನಿವಾಸಿಯಾಗಿರುವ ಅಶ್ವತ್ ರವರು ಅಭಿಷೇಕ್ ಅಂಬರೀಶ್ ರವರ ಟ್ಯಾಟೋವನ್ನು ತಮ್ಮ ಬೆನ್ನಿನ ಮೇಲೆ ಹಾಕಿಸಿಕೊಂಡಿದ್ದಾರೆ. ಈ ಟ್ಯಾಟೋ ಒಂದು ನೋಡಿದ ಅಭಿಷೇಕ್ ಅಂಬರೀಶ್ ಆತನನ್ನು ಮನೆಗೆ ಕರೆಸಿ ಮಾತನಾಡಿದ್ದಾರೆ. ಈ ವೇಳೆ ತಮ್ಮ ಅಭಿಮಾನಿಗೆ ಬೈದು “ನನ್ನ ಟ್ಯಾಟೋ ಹಾಕಿಸಿಕೊಳ್ಳುವ ಬದಲು ನಿಮ್ಮ ತಂದೆ ತಾಯಿ ಟ್ಯಾಟೋ ಹಾಕಿಸಿಕೊಳ್ಳಿ ನನ್ನ ಸಿನಿಮಾಗಳನ್ನು ಪ್ರಮೋಷನ್ ಮಾಡಿ ಸೋಶಿಯಲ್ ಮೀಡಿಯಾ ಖಾತೆಗಳಲ್ಲಿ ಸಿನಿಮಾ ಪೋಸ್ಟರ್ಗಳನ್ನು ಶೇರ್ ಮಾಡಿಕೊಳ್ಳಿ ನನ್ನ ಸಿನಿಮಾಗೆ ಸಪೋರ್ಟ್ ಮಾಡಿ ಆದರೆ ಈ ರೀತಿ ನೋವು ಮಾಡಿಕೊಳ್ಳಬೇಡಿ” ಎಂದು ಅಭಿಷೇಕ ಅಂಬರೀಶ್ ತಮ್ಮ ಅಭಿಮಾನಿಗೆ ಬುದ್ಧಿ ಹೇಳಿ ಕಳುಹಿಸಿದ್ದಾರೆ.