ಸ್ವಲ್ಪ ಆಟ, ಸ್ವಲ್ಪ ಧರ್ಮ, ಸ್ವಲ್ಪ ನಿಜ ನಿನ್ನೊಂದಿಗೆ ನನ್ನ ಈ ಜೀವನ ನಿಜಕ್ಕೂ ಅದ್ಭುತ ನಟಿ ರಾಧಿಕಾ ಪಂಡಿತ್

Yash Radhika pandit sixth wedding anniversary: ಕರ್ನಾಟಕದ ಸ್ಟಾರ್ ಸೆಲೆಬ್ರಿಟಿಗಳು ಎಂದೇ ಹೆಸರನ್ನು ಪಡೆದು ಕೊಂಡಿರುವ ನಟ ಯಶ್ ಹಾಗೂ ರಾಧಿಕಾ ಪಂಡಿತ್ ಸ್ಯಾಂಡಲ್ ವುಡ್ ನ ಸ್ಟಾರ್ ಸೆಲೆಬ್ರಿಟಿಗಳು ಎಂಬುದು ಎಲ್ಲರಿಗೂ ಗೊತ್ತೇ ಇದೆ. ಇಂದು ನಟ ಯಶ್ ಹಾಗೂ ನಟಿ ರಾಧಿಕಾ ಪಂಡಿತ್ ರವರ ಆರನೇ ವರ್ಷದ ವಿವಾಹ ವಾರ್ಷಿಕೋತ್ಸವ ಸಂಭ್ರಮ ಇದರ ಹಿನ್ನೆಲೆಯಲ್ಲಿ ನಟಿ ರಾಧಿಕಾ ಪಂಡಿತ್ ತಮ್ಮ ಇನ್ಸ್ಟಾಗ್ರಾಮ್ ಖಾತೆಯಲ್ಲಿ ತಮ್ಮ ಪತಿ ಯಶ್ ರವರ ಜೊತೆಗಿರುವ ಫೋಟೋಗಳನ್ನು ಹಂಚಿಕೊಂಡು ನಿನ್ನೊಂದಿಗೆ ನನ್ನ ಜೀವನ ನಿಜಕ್ಕೂ ಅದ್ಭುತ ಎಂದು ಬರೆದುಕೊಂಡಿದ್ದಾರೆ.

ನಟಿ ರಾಧಿಕಾ ಪಂಡಿತ್ ದಂಪತಿ ಯಶ್ ರವರನ್ನು ಪ್ರತಿ ವರ್ಷದ ವಿವಾಹ ವಾರ್ಷಿಕೋತ್ಸವದ ದಿನದಂದು ವಿಭಿನ್ನವಾಗಿ ಹೊಗಳುತ್ತಿರುತ್ತಾರೆ. ಈ ವರ್ಷ ತಮ್ಮ ಪತಿ ಯಶ್ ರವರನ್ನು ಮಾಂತ್ರಿಕ ಎಂದು ಹೊಗಳಿದ್ದಾರೆ. ನಟಿ ರಾಧಿಕಾ ಪಂಡಿತ್ ತಮ್ಮ ಪತಿ ಯಶ್ ಜೊತೆಗೆ ಇರುವ ಉತ್ತಮ ಕ್ಷಣಗಳ ಫೋಟೋಗಳನ್ನು ತಮ್ಮ ಇನ್ಸ್ಟಾಗ್ರಾಮ್ ಖಾತೆಯಲ್ಲಿ ಹಂಚಿಕೊಂಡು ವಿವಾಹ ವಾರ್ಷಿಕೋತ್ಸವದ ಶುಭಾಶಯಗಳು ಎಂದು ತಿಳಿಸಿದ್ದಾರೆ.

ನಟ ರಾಕಿಂಗ್ ಸ್ಟಾರ್ ಯಶ್ ರವರಿಗೆ ಡಿಸೆಂಬರ್ ತಿಂಗಳು ತುಂಬಾ ಸ್ಪೆಷಲ್ ತಿಂಗಳಾಗಿದ್ದು ಈ ತಿಂಗಳಿನಲ್ಲಿ ರಾಕಿಂಗ್ ಸ್ಟಾರ್ ಯಶ್ ಹಾಗೂ ರಾಧಿಕಾ ಪಂಡಿತ್ ದಂಪತಿಗಳ ಮಗಳಾದ ಐರಾ ಹುಟ್ಟು ಹಬ್ಬವು ಕೂಡ ಬರುತ್ತದೆ. ಹಾಗೆಯೇ ರಾಕಿಂಗ್ ದಂಪತಿಗಳ ವಿವಾಹ ವಾರ್ಷಿಕೋತ್ಸವವು ಕೂಡ ಡಿಸೆಂಬರ್ ನಲ್ಲಿ ನಡೆಯುತ್ತದೆ ಡಿಸೆಂಬರ್ ನಲ್ಲಿ ರಾಕಿಂಗ್ ದಂಪತಿಗಳ ಸಾಕಷ್ಟು ಸಿನಿಮಾಗಳು ಬಿಡುಗಡೆಯಾಗುತ್ತವೆ. ಆದ್ದರಿಂದ ಈ ತಿಂಗಳು ಅವರಿಗೆ ತುಂಬಾ ಸ್ಪೆಷಲ್ ಎಂದೇ ಹೇಳಬಹುದು.

ನಟಿ ರಾಧಿಕಾ ಪಂಡಿತ್ ತಮ್ಮ ಪತಿ ಯಶ್ ರವರ ಕುರಿತು ಹೊಸ ಹೊಸ ಮಾತುಗಳಿಂದ ಹೊಗಳುತ್ತಾ ಪ್ರತಿ ವರ್ಷದ ವಿವಾಹ ವಾರ್ಷಿಕೋತ್ಸವಕ್ಕು ಹೊಸ ಪೋಸ್ಟ್ಗಳನ್ನು ತಮ್ಮ instagram ಖಾತೆಯಲ್ಲಿ ಹಾಕುತ್ತಿರುತ್ತಾರೆ. ಈ ವರ್ಷವೂ ಕೂಡ ತಮ್ಮ instagram ಖಾತೆಯಲ್ಲಿ ತಮ್ಮ ಪತಿಯೊಂದಿಗಿನ ಸುಂದರ ಕ್ಷಣದ ಫೋಟೋ ಒಂದನ್ನು ಹಂಚಿಕೊಂಡಿರುವ ನಟಿ ರಾಧಿಕಾ ಪಂಡಿತ್ ನಿನ್ನೊಂದಿಗೆ ನನ್ನ ಜೀವನ ತುಂಬಾ ಅದ್ಭುತವಾಗಿದೆ. ನಿನ್ನೊಂದಿಗೆ ಜೀವನವು ಮಾಂತ್ರಿಕತೆಯಿಂದ ನಡೆಯುತ್ತಿದೆ ನಿನಗೆ ನನ್ನ ಧನ್ಯವಾದಗಳು ಎಂದು ಬರೆದುಕೊಂಡಿದ್ದಾರೆ.