ಸಿಹಿ ಸುದ್ದಿ ಕೊಟ್ಟ ಸಮೀರ್ ಆಚಾರ್ಯ ಮತ್ತು ಶ್ರಾವಣಿ ದಂಪತಿಗಳು, ಶುಭಾಶಯ ಕೋರಿದ ಅಭಿಮಾನಿಗಳು

ಬಿಗ್ ಬಾಸ್ ಹಾಗೂ ರಾಜ ರಾಣಿ ಖ್ಯಾತಿಯ ಸಮೀರ್ ಆಚಾರ್ಯ ಮತ್ತು ಶ್ರಾವಣಿ ಅವರು ಅಭಿಮಾನಿಗಳಿಗೆ ಗುಡ್ ನ್ಯೂಸ್ ನೀಡಿದ್ದಾರೆ. ಇದರಿಂದ ಅಭಿಮಾನಿಗಳೆಲ್ಲ ಸಮೀರ್ ಆಚಾರ್ಯ ಹಾಗೂ ಶ್ರಾವಣಿ ದಂಪತಿಗಳಿಗೆ ಶುಭಾಶಯಗಳು ತಿಳಿಸಿದ್ದಾರೆ. ಈ ಹಿಂದೆ ಬಿಗ್ ಬಾಸ್ ಕಂಟೆಸ್ಟೆಂಟ್ ಆಗಿದ್ದ ಸಮೀರ್ ಆಚಾರ್ಯ ಎಲ್ಲರಿಗೂ ಪರಿಚಿತರಾಗಿದ್ದಾರೆ. ಕಿರಿಕ್ ಪಾರ್ಟಿ ಖ್ಯಾತಿಯ ಸಂಯುಕ್ತ ಹೆಗಡೆಯವರು ಸಮೀರ್ ಆಚಾರ್ಯರವರಿಗೆ ಬಿಗ್ ಬಾಸ್ ಮನೆಯಲ್ಲಿ ಹೊಡೆದು ಆಚೆ ಹೋಗಿದ್ದರು ಅದು ದೊಡ್ಡ ಸುದ್ದಿಯಾಗಿತ್ತು.

ಬಿಗ್ ಬಾಸ್ ಮುಗಿದ ನಂತರ ಸಮೀರ್ ಆಚಾರ್ಯ ಹಾಗೂ ಶ್ರಾವಣಿ ದಂಪತಿಗಳು ರಾಜಾರಾಣಿ ಎಂಬ ಕಾರ್ಯಕ್ರಮದಲ್ಲೂ ಕೂಡ ಭಾಗವಹಿಸಿ ಈ ಜೋಡಿ ಅಲ್ಲು ಕೂಡ ಕನ್ನಡಿಗರ ಮನಸನ್ನು ಗೆದ್ದಿತ್ತು. ರಾಜ ರಾಣಿ ಕಾರ್ಯಕ್ರಮದಲ್ಲಿ ಹಲವು ವಿಭಾಗಗಳ ಕಾರ್ಯಕ್ರಮಗಳನ್ನು ಆಯೋಜಿಸಲಾಗಿತ್ತು ಅದರಲ್ಲಿ ಪತಿ-ಪತ್ನಿಯರು ಹೇಗಿರಬೇಕು ಎಂಬುದರ ಬಗ್ಗೆ ಹಲವು ವಿಚಾರಗಳನ್ನು ತಿಳಿಸಿಕೊಡಲಾಗಿತ್ತು. ರಾಜ ರಾಣಿ ಶೋನಲ್ಲಿ ಮನಸ್ಸಿನ ಮಾತು ಹೇಳಿಕೊಳ್ಳಲು ಒಂದು ಟಾಸ್ಕನ್ನು ನೀಡಿದ್ದರು ಅದರಲ್ಲಿ ಶ್ರಾವಣಿ ತನಗೆ ಒಂದು ಮಗು ಬೇಕು ಎಂದು ಸಮೀರ್ ಆಚಾರ್ಯರವರನ್ನು ಕೇಳಿದರು ಆ ಎಪಿಸೋಡ್ ಒಂದು ಎಮೋಷನಲ್ ಎಪಿಸೋಡ್ ಆಗಿದ್ದು ಎಲ್ಲಾ ಜೋಡಿಗಳು ತಮ್ಮ ಮನಸ್ಸಿನಲ್ಲಿರುವ ಮಾತು ಗಳನ್ನು ತಮ್ಮ ಪತಿ ಹಾಗೂ ಪತ್ನಿಯ ಹತ್ತಿರ ಹೇಳಿಕೊಳ್ಳುತ್ತಿದ್ದರು.

 

 

ಸಮೀರ್ ಆಚಾರ್ಯ ಶ್ರಾವಣಿ ದಂಪತಿಗಳು ಬಿಗ್ ಬಾಸ್ ಹಾಗೂ ರಾಜ ರಾಣಿ ಶೋ ನಂತರ ತಮ್ಮ ಸೋಶಿಯಲ್ ಮೀಡಿಯಾ ಖಾತೆಗಳಲ್ಲಿ ಆಕ್ಟಿವ್ ಆಗಿದ್ದು ತಮ್ಮ ಜೀವನದ ಹಾಗೂ ಹೋಗುಗಳ ಬಗ್ಗೆ ಫೋಟೋ ಹಾಗು ವಿಡಿಯೋಗಳನ್ನು ಹಂಚಿಕೊಳ್ಳುತ್ತಿರುತ್ತಾರೆ. ಸಮೀರ್ ಆಚಾರ್ಯ ಹಾಗೂ ಶ್ರಾವಣಿ ದಂಪತಿಗಳು ಸಾಮಾಜಿಕ ಜಾಲತಾಣದಲ್ಲಿ ಇದೀಗ ಸಿಹಿ ವಿಚಾರವನ್ನು ಹಂಚಿಕೊಂಡಿದ್ದು ಅದನ್ನು ಕೇಳಿದ ಅಭಿಮಾನಿಗಳೆಲ್ಲರೂ ಆ ದಂಪತಿಗಳಿಗೆ ಒಳ್ಳೆಯದಾಗಲಿ ಎಂದು ಶುಭಾಶಯಗಳು ಕೋರಿದ್ದಾರೆ.

ರಾಜ ರಾಣಿ ಕಾರ್ಯಕ್ರಮದ ಮೂಲಕ ಕನ್ನಡಿಗರ ಮನಸನ್ನು ಗೆದ್ದಿದ್ದ ಸಮೀರ್ ಆಚಾರಿ ಹಾಗೂ ಶ್ರಾವಣಿ ದಂಪತಿಗಳು ತಮ್ಮ ಮೊದಲನೇ ಮಗುವಿನ ನೀರಿಕ್ಷೆಯಲ್ಲಿದ್ದರು. ಶ್ರಾವಣಿ ಅವರು ತಮ್ಮ ಸಾಮಾಜಿಕ ಜಾಲತಾಣದಲ್ಲಿ ಈ ವಿಚಾರವನ್ನು ಹಂಚಿಕೊಂಡಿದ್ದಾರೆ. ಶ್ರಾವಣಿ ಹಾಗೂ ಸಮಿರ್ ಆಚಾರ್ಯರನ್ನು ತಮ್ಮ ಜೀವನದಲ್ಲಿ ಹೊಸ ಅದ್ಯಾಯ ಆರಂಭವಾಗಿದೆ ಎಂದು ತಮ್ಮ ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್ ಹಾಕಿದ್ದಾರೆ. ತುಂಬಾ ದಿನಗಳ ನಂತರ ಮಗು ಬರುತ್ತಿರುವುದರಿಂದ ಬಗ್ಗೆ ಖುಷಿಯಾಗಿದೆ ಎಂದು ಕೂಡ ಹೇಳಿದ್ದಾರೆ.

 

ರಾಜ ರಾಣಿ ರಿಯಾಲಿಟಿ ಶೋ ಕಾರ್ಯಕ್ರಮಕ್ಕೆ ಶ್ರಾವಣಿ ಹಾಗೂ ಸಮೀರ್ ಆಚಾರ್ಯರು ತಮ್ಮ ಜೀವನದ ಆಗುಹೋಗುಗಳ ಬಗ್ಗೆ ಸ್ಟೇಜ್ ಮೇಲೆ ಹಂಚಿಕೊಂಡಿದ್ದರು. ರಾಜ ರಾಣಿ ರಿಯಾಲಿಟಿ ಶೋನಲ್ಲಿ ಅವರಿಬ್ಬರು ತಮ್ಮ ಬಗ್ಗೆ ಹೇಳಿಕೊಳ್ಳುತ್ತಿರುವಾಗ ಈ ಹಿಂದೆ ಒಮ್ಮೆ ರಿಯಾಲಿಟಿ ಶೋ ಗೆ ಬರುವ ಮೊದಲು ಶ್ರಾವಣಿಗೆ ಮಿಸ್ ಕ್ಯಾರೇಜ್ ಆಗಿದ್ದು ಇದರ ಬಗ್ಗೆ ತುಂಬಾ ನೋವಾಗಿದೆ ಎಂದು ಕೂಡ ಹೇಳಿಕೊಂಡಿದ್ದರು. ಶ್ರಾವಣಿ ಹಾಗೂ ಸಮಿರಾಚಾರ್ಯ ದಂಪತಿಗಳು ಇದೀಗ ತಮ್ಮ ಜೀವನದಲ್ಲಿ ಮಗುವಿನ ನಿರೀಕ್ಷೆಯಲ್ಲಿದ್ದು ತುಂಬಾ ಖುಷಿಯಾಗಿದ್ದಾರೆ.