ಧ್ರುವ ಸರ್ಜಾ ಪತ್ನಿ ಪ್ರೇರಣ ಹುಟ್ಟುಹಬ್ಬ ಮತ್ತು ಮಗುವಿನ ನಾಮಕರಣದ ಸಂಭ್ರಮ

ಸರ್ಜಾ ಕುಟುಂಬ ಕೆಲವು ವರ್ಷಗಳಿಂದ ಹಲವು ನೋವುಗಳನ್ನು ತಿಂದಿದೆ.ಕಳೆದ ವರ್ಷ ಚಿರಂಜೀವಿ ಸರ್ಜಾ ನಿಧನ ಹಾಗೂ ಸರ್ಜಾ ಕುಟುಂಬದ ಹಿರಿಯ ಜೀವ ಧ್ರುವ ಸರ್ಜಾ ಅಜ್ಜಿ ಕೂಡ ಇತ್ತೀಚೆಗೆ ನಿಧನರಾದರು ಇದರಿಂದ ಸರ್ಜಾ ಕುಟುಂಬಕ್ಕೆ ಕತ್ತಲೆಯೇ ಆವರಿಸಿತ್ತು ಈ ಎಲ್ಲಾ ನೋವುಗಳಿದ ಸರ್ಜಾ ಕುಟುಂಬ ನಿಧಾನವಾಗಿ ಚೇತರಿಸಿಕೊಳ್ಳುತ್ತಿದೆ. ಇದೀಗ ಸರ್ಜಾ ಕುಟುಂಬ ಸಂತಸ ಪಡುವ ರೀತಿಯ ಕ್ಷಣಗಳು ಬರುತ್ತಿವೆ. ಈ ಹಿಂದೆ ನಟಿ ಮೇಘನಾ ರಾಜ್ ರಾಯನ್ ರಾಜ್ ಸರ್ಜಾನಿಗೆ ಜನ್ಮ ನೀಡಿದಾಗಲು ಸರ್ಜಾ ಕುಟುಂಬ ಖುಷಿ ಪಟ್ಟಿತ್ತು. ಆದರೆ, ಆ ಮಗುವಿಗೆ ಅಪ್ಪ ಇಲ್ಲ ಎಂಬ ಕಾರಣ ದಿಂದ ದುಃಖವು ಕೂಡ ಇತ್ತು. ಆದರೆ,  ಧ್ರುವ ಸರ್ಜಾ ಹಾಗೂ ಪ್ರೇರಣ ದಂಪತಿಗಳ ಮಗಳಿಂದ ಸರ್ಜಾ ಕುಟುಂಬದಲ್ಲಿ ಮತ್ತೆ ಸಂತಸ ಮನೆ ಮಾಡಿದೆ.

 

ಇತ್ತೀಚೆಗೆ ಧ್ರುವ ಸರ್ಜಾ ಪತ್ನಿ ಪ್ರೇರಣಾ ಹೆಣ್ಣು ಮಗುವಿಗೆ ಜನ್ಮ ನೀಡಿದರು.ಮನೆಗೆ ಮಹಾಲಕ್ಷ್ಮಿ ಬಂದಿದ್ದಾಳೆ ಎಂದು ಎಲ್ಲರೂ ಖುಷಿ ಪಟ್ಟಿದ್ದರು. ನಟ ಧ್ರುವ ಸರ್ಜಾ ತಮ್ಮ ಮಗಳ ಆಗಮನದಿಂದ ತುಂಬಾ ಖುಷಿಯಾಗಿದ್ದಾರೆ. ತಮ್ಮ ಮಗಳ ಆರೈಕೆಯ ಜೊತೆಗೆ ಹಲವಾರು ಸಿನಿಮಾಗಳಲ್ಲಿ ನಟ ಧ್ರುವ ಸರ್ಜಾ ಬ್ಯುಸಿಯಾಗಿದ್ದಾರೆ. ಯಾವಾಗಲೂ ಸಿನಿಮಾಗಳಲ್ಲಿ ಬ್ಯುಸಿ ಇರುತ್ತಿದ್ದ ಧ್ರುವ ಸರ್ಜರವರು ಈ ಬಾರಿ ತಮ್ಮ ಮಗಳ ಲಾಲನೆ ಪಾಲನೆಯಲ್ಲಿ ಕೂಡ ತುಂಬಾ ಬ್ಯುಸಿಯಾಗಿದ್ದಾರೆ. ನಟ ದ್ರುವ ಸರ್ಜಾ ಅವರು ತಾವು ಎಷ್ಟೇ ಬ್ಯುಸಿಯಾಗಿದ್ದರೂ ಕೂಡ ತಮ್ಮ ಕುಟುಂಬಕ್ಕೆಂದು ಸಮಯವನ್ನು ಮೀಸಲಿಡುತ್ತಾರೆ.

ಇದೀಗ ಸರ್ಜಾ ಕುಟುಂಬದಲ್ಲಿ ಸಾಕಷ್ಟು ಸಂತೋಷ ಸಂಭ್ರಮ ಮನೆ ಮಾಡಿದೆ ಏಕೆಂದರೆ, ಇನ್ನೇನು ಶೀಘ್ರದಲ್ಲೇ ಧ್ರುವ ಸರ್ಜಾ ಹಾಗೂ ಪ್ರೇರಣಾ ದಂಪತಿಗಳ ಮಗಳ ನಾಮಕರಣ ಶಾಸ್ತ್ರವನ್ನು ಮಾಡುತ್ತಾರೆ. ತಾಯಿ ಅಮ್ಮಾಜಿ ಕೂಡ ತಮ್ಮ ಮೊಮ್ಮಗಳ ಜೊತೆ ಆಟವಾಡುತ್ತಾ ತುಂಬಾ ಖುಷಿಯಾಗಿದ್ದಾರೆ. ಹಾಗೆಯೇ ತಮ್ಮ ಮಗಳ ಲಾಲನೆ ಪಾಲನೆಯಲ್ಲಿಯೂ ಕೂಡ ತುಂಬಾ ಬ್ಯುಸಿಯಾಗಿದ್ದಾರೆ. ಧ್ರುವ ಸರ್ಜಾ ಕೇಡಿ ಹಾಗೂ ಮಾರ್ಟಿನ್ ಸಿನಿಮಾಗಳಲ್ಲಿ ಬಿಜಿಯಾಗಿದ್ದಾರೆ.

ಧ್ರುವ ಸರ್ಜಾ ತಮ್ಮ ಮಗಳ ನಾಮಕರಣಕ್ಕೆ ಆಮಂತ್ರಣ ಪತ್ರಿಕೆಯನ್ನು ಇದೀಗಾಗಲೇ ಸಿದ್ಧಪಡಿಸಿದ್ದು ತಮ್ಮ ಅಭಿಮಾನಿಗಳ ಆಸೆಯಂತೆ ತಮ್ಮ ಮಗಳಿಗೆ ಅಭಿಮಾನಿಗಳ ಕೈಯಿಂದಲೇ ಹೆಸರನ್ನು ಇಡುತ್ತೇನೆ ಎಂದು ಆಮಂತ್ರಣ ಪತ್ರಿಕೆಯಲ್ಲಿ ತಿಳಿಸಿದ್ದಾರೆ. ನಟ ದ್ರುವ ಸರ್ಜಾ ತಮ್ಮ ಮಗಳಿಗೆ ಏನೆಂದು ಹೆಸರಿಡುತ್ತಾರೆ ಎಂಬುದನ್ನು ಇಲ್ಲಿಯವರೆಗೂ ರಿವಿಲ್ ಮಾಡಿಲ್ಲ ಈಗಂತೂ ಸೆಲೆಬ್ರಿಟಿಗಳು ತಮ್ಮ ಮಕ್ಕಳಿಗೆ ವಿಭಿನ್ನವಾದ ಹೆಸರುಗಳನ್ನು ಇಡುತ್ತಿರುತ್ತಾರೆ. ಹಾಗಾಗಿ ಧ್ರುವ ಸರ್ಜಾ ತಮ್ಮ ಮಗಳಿಗೆ ಏನೆಂದು ಹೆಸರಿಡುತ್ತಾರೆ ಎಂಬುದನ್ನು ಕಾದು ನೋಡಬೇಕಾಗಿದೆ.