ರಾಯರ ಕುರಿತು ಸಿನಿಮಾ ಬಗ್ಗೆ ಹ್ಯಾಟ್ರಿಕ್ ಹೀರೋ:ಮಂತ್ರಾಲಯದಲ್ಲಿ ರಾಘವೇಂದ್ರನ ಹಾಡು ಹಾಡಿದ ಶಿವಣ್ಣ.ಜನ ಫಿದಾ

ಹ್ಯಾಟ್ರಿಕ್ ಹೀರೋ ಶಿವರಾಜ್ ಕುಮಾರ್(Shiva Rajkumar) ಮೊನ್ನೆ ಅಷ್ಟೇ ತಮ್ಮ ಪತ್ನಿ ಗೀತಾ ಶಿವರಾಜಕುಮಾರ್(Geeta Shivraj Kumar) ಹಾಗೂ ತಮ್ಮ ಕುಟುಂಬದೊಂದಿಗೆ ರಾಘವೇಂದ್ರ ಸ್ವಾಮಿ ಸನ್ನಿಧಿಯಾದ ಮಂತ್ರಾಲಯಕ್ಕೆ(Mantralaya) ಭೇಟಿ ನೀಡಿದ್ದರು ಮಂತ್ರಾಲಯದಲ್ಲಿ ಕೂಡ ಪ್ರೆಸ್ ಮೀಟ್ ಒಂದರಲ್ಲಿ ಶಿವಣ್ಣ ಮಾತನಾಡಿ ರಾಯರ ಬಗ್ಗೆ ಸಿನಿಮಾ ಮಾಡುವ ಕುರಿತು ಸ್ಪಷ್ಟನೆ ನೀಡಿದ್ದಾರೆ.

ಶಿವರಾಜ್ ಕುಮಾರ್ ರವರು ತಮ್ಮ ಸಿನಿ ಜರ್ನಿ ಬಗ್ಗೆ ನೆನಪಿಸಿಕೊಂಡು ನಾನು ಕನ್ನಡ ಚಿತ್ರರಂಗಕ್ಕೆ ಬಂದು 36 ವರ್ಷಗಳು ಕಳೆದಿವೆ. ನನಗೂ ಇದೀಗಾಗಲೇ 60 ವರ್ಷ(age 60 years) ವಯಸ್ಸು ಇಲ್ಲಿಯವರೆಗೂ ಮಂತ್ರಾಲಯದ ರಾಘವೇಂದ್ರ ಸ್ವಾಮಿಗಳು ನನ್ನನ್ನು ಚೆನ್ನಾಗಿಟ್ಟಿದ್ದಾರೆ. ನನ್ನ 125 ಸಿನಿಮಾಗಳು ಮುಗಿಯುತ್ತಾ ಬಂದಿವೆ. ಇದೀಗ ನಾನು ಕೂಡ ಕನ್ನಡ ಚಿತ್ರರಂಗಕ್ಕೆ ಬಂದು 37ನೇ ವರ್ಷ ನಡೆಯುತ್ತಿದೆ ನನ್ನ 125 ನೇ ಸಿನಿಮಾ ನಮ್ಮದೇ ಆದ ಗೀತಾ ಪಿಕ್ಚರ್ಸ್ ಅಡಿಯಲ್ಲಿ ಬರುತ್ತಿರುವುದು ನನಗೆ ತುಂಬಾ ಖುಷಿ ಇದೆ.

 

 

ಅದರಲ್ಲೂ ಹರ್ಷ ಡೈರೆಕ್ಷನ್ ಎಂದ ತಕ್ಷಣ ಪಾಸಿಟಿವ್ ನೆಸ್ ಎಂಬುದು ನನ್ನಲ್ಲಿ ಇದ್ದೇ ಇರುತ್ತದೆ. ಭಜರಂಗಿ (Bajrangi) , ವಜ್ರಕಾಯ(vajrakaya), ಭಜರಂಗಿ ,2 ಇದೀಗ ವೇದ(Veda) ಇವೆಲ್ಲವೂ ಕೂಡ ತುಂಬಾ ಚೆನ್ನಾಗಿ ಮೂಡಿ ಬಂದಿದೆ. ಈಗ ನಾನು ನಟಿಸುತ್ತಿರುವ ವೇದ ಸಿನಿಮಾದಲ್ಲಿ ಕೂಡ ವಿಶೇಷತೆ ಇದ್ದು ಎಲ್ಲಾ ಜನರಿಗೂ ಕೂಡ ಇಷ್ಟವಾಗುವಂತ ಅಂಶಗಳು ವೇದ ಸಿನಿಮಾದಲ್ಲಿವೆ. ವೇದಾ ಸಿನಿಮಾ ಕಮರ್ಷಿಯಲ್ ಸಿನಿಮಾ ಎನ್ನುವುದಕ್ಕಿಂತ ಹೆಚ್ಚಾಗಿ ಎಲ್ಲಾ ಹೆಣ್ಣು ಮಕ್ಕಳಿಗೂ ಕನೆಕ್ಟ್ ಆಗುವ ಸಿನಿಮವಾಗಿದೆ.

ವೇದ ಸಿನಿಮಾದ ಮೂಲಕ ನಾವು ಎಲ್ಲರಿಗೂ ಕೂಡ ಒಂದು ಮೆಸೇಜನ್ನು ತಲುಪಿಸಲು ಹೊರಟಿದ್ದೇವೆ. ಎಲ್ಲರೂ ಕೂಡ ಬಂದು ಸಿನಿಮಾವನ್ನು ನೋಡಿದಾಗ ಅದೇನೆಂಬುದು ಎಲ್ಲರಿಗೂ ಕೂಡ ಅರ್ಥವಾಗುತ್ತದೆ. ವೇದಾ ಸಿನಿಮಾ ಭಾವನೆಗಳ ಸಮ್ಮಿಲನವಾಗಿದ್ದು ಮನುಷ್ಯನ ಜೀವನದಲ್ಲಿ ನಾಲ್ಕು ತುಂಬಾ ಮುಖ್ಯವಾದ ಅಂಶಗಳು ಬರುತ್ತವೆ ಪ್ರೀತಿ, ಬಾಳು, ಖುಷಿ, ನಂಬಿಕೆ ಈ ನಾಲ್ಕು ಅಂಶಗಳು ಯಾವ ರೀತಿ ಮನುಷ್ಯನ ಜೀವನದಲ್ಲಿ ಪಾಠ ಮಾಡುತ್ತವೆ ಎಂಬುದರ ಬಗ್ಗೆ ವೇದಾ ಸಿನಿಮಾ ರೂಪುಗೊಂಡಿದೆ.

https://youtube.com/shorts/L_jtsCaJ3J4?feature=share

ಈ ಹಿಂದೆ ನಮ್ಮ ತಂದೆ ಡಾಕ್ಟರ್ ರಾಜಕುಮಾರ್(Dr Rajkumar) ರವರು ಮಂತ್ರಾಲಯದ ರಾಘವೇಂದ್ರ(Mantralaya Raghavendra Swami) ಸ್ವಾಮಿಗಳ ಕುರಿತು ಸಿನಿಮಾ ಒಂದನ್ನು ಮಾಡಿದ್ದರು ನಾನು ಕೂಡ ರಾಘವೇಂದ್ರ ಸ್ವಾಮಿಯ ಕುರಿತು ಸಿನಿಮಾ ಮಾಡಲು ಇಷ್ಟಪಡುತ್ತೇನೆ ಅಂತಹ ಕಥೆಗಳು ಯಾವುದಾದರೂ ಸಿಕ್ಕರೆ ಖಂಡಿತವಾಗಿಯೂ ಒಪ್ಪಿಕೊಳ್ಳುತ್ತೇನೆ ಎಂದು ಶಿವರಾಜ್ ಕುಮಾರ್(Shivraj Kumar) ಅವರು ರಾಯರ ಬದುಕಿನ ಸಿನಿಮಾ ಮಾಡುವುದರ ಬಗ್ಗೆ ಅಭಿಮಾನಿಗಳಿಗೆ ಸ್ಪಷ್ಟನೆಯನ್ನು ನೀಡಿದ್ದಾರೆ.