ಜ್ಯೋತಿಷ್ಯದಲ್ಲಿ ಲಕ್ಷ ತೆಗೆದುಕೊಳ್ಳುತ್ತಿದ್ದ ಆರ್ಯವರ್ಧನ್ ಗೆ ಬಿಗ್ ಬಾಸ್ ಮನೆ ಕೊಟ್ಟ ಸಂಭಾವನೆ ವೈರಲ್

ಬಿಗ್ ಬಾಸ್ ಸೀಸನ್ 9 ಇನ್ನೇನು ಕೊನೆಯ ಹಂತದಲ್ಲಿದ್ದು ಬಿಗ್ ಬಾಸ್ ಸೀಸನ್ ೯ರ ಕೊನೆಯ ಹಂತದಲ್ಲಿ ಒಂದರ ಒಂದು ಹಿಂದೆ ಒಂದರಂತೆ ಎಲಿಮಿನೇಷನ್ಗಳು ನಡೆಯುತ್ತಲೇ ಇವೆ ಏಕೆಂದರೆ ಇದು ಬಿಗ್ ಬಾಸ್ ನ ಕೊನೆಯ ಹಂತವಾಗಿದ್ದು ಫಿನಾಲೆ ಟೈಮಿನಲ್ಲಿ ಬಿಗ್ ಬಾಸ್ ಮನೆಯಲ್ಲಿ ಕೇವಲ ಐದು ಸ್ಪರ್ಧಿಗಳು ಮಾತ್ರ ಇರಬೇಕು ವೀಕೆಂಡ್ ನಲ್ಲಿ ಎರಡು ಎಲಿಮಿನೇಷನ್ಗಳು ಕೂಡ ನಡೆದಿದ್ದವು ಇದೀಗ ವಾರದ ಮಧ್ಯದಲ್ಲಿ ಮಧ್ಯರಾತ್ರಿ ಕಿಚ್ಚ ಸುದೀಪ್ ಬಿಗ್ ಬಾಸ್ ಮನೆಯಿಂದ ಆರ್ಯವರ್ಧನ್ ಗುರೂಜಿ ರವರನ್ನು ಎಲಿಮಿನೇಟ್ ಮಾಡಿ ಹೊರಹಾಕಿದ್ದಾರೆ.

ವಾರದ ಮಧ್ಯದಲ್ಲಿ ಈ ರೀತಿ ಎಲಿಮಿನೇಷನ್ ಮಾಡಿರುವುದು ಬಿಗ್ ಬಾಸ್ ಮನೆಯ ಸ್ಪರ್ಧೆಗಳಿಗೂ ಕೂಡ ಸರ್ಪ್ರೈಸ್ ಆಗಿದೆ. ಬಿಗ್ ಬಾಸ್ ಫಿನಾಲೆ ಸಮಯದಲ್ಲಿ ಮನೆಯಲ್ಲಿ ಕೇವಲ ಐದು ಜನ ಮಾತ್ರ ಉಳಿಯಬೇಕು ಈಗ ಮನೆಯಲ್ಲಿ ಆರು ಜನರಿದ್ದ ಕಾರಣ ಒಬ್ಬರನ್ನೂ ಮನೆಯಿಂದ ಆಚೆ ಕಳಿಸಬೇಕಾದ ಸಂದರ್ಭ ಬಂದಿದ್ದು ಒಬ್ಬರನ್ನು ಬಿಗ್ ಬಾಸ್ ಮನೆಯಿಂದ ಎಲಿಮಿನೇಟ್ ಮಾಡಿ ಮಧ್ಯರಾತ್ರಿ ಹೊರಗೆ ಕಳಿಸಲಾಗಿದೆ.

ಬಿಗ್ ಬಾಸ್ ಮನೆಯಲ್ಲಿ ಸ್ಪರ್ಧಿಗಳು ಆರು ಜನರಿದ್ದರು ಆದರೆ ಒಬ್ಬರ ಎಲಿಮಿನೇಷನ್ ನಿಂದ ಬಿಗ್ ಬಾಸ್ ಮನೆಯ ಸ್ಪರ್ಧಿಗಳ ಸಂಖ್ಯೆ 5 ಆಗಿದೆ. ನಂಬರ್ ಅಂದ್ರೆ ನಾನು ಅಂದ್ರೆ ನಂಬರ್ ಎಂದು ಹೇಳುತ್ತಿದ್ದ ಗುರೂಜಿ ಬಿಗ್ ಬಾಸ್ ಮನೆಯಿಂದ ಹೊರಗೆ ನಡೆದಿದ್ದಾರೆ. ಆರ್ಯವರ್ಧನ್ ಗುರೂಜಿಗಳು ಬಿಗ್ ಬಾಸ್ ಮನೆಯಿಂದ ಹೊರ ನಡೆದಿದ್ದು ಈ ಎಪಿಸೋಡ್ ಡಿಸೆಂಬರ್ 27ರಂದು ಟಿವಿಯಲ್ಲಿ ಪ್ರಸಾರವಾಗಿತ್ತು.

 

 

ವಾರದ ಅಂತ್ಯದಲ್ಲಿ ಬಿಗ್ ಬಾಸ್ ಮನೆಯ ಸ್ಪರ್ಧಿಗಳು 8 ಜನರಿದ್ದು ಸುದೀಪ್ ರವರು ಮೂರು ಎಲಿಮಿನೇಷನ್ ಗಳು ನಡೆಯುತ್ತವೆ ಎಂದು ತಿಳಿಸಿದರು ಶನಿವಾರ ಅಮೂಲ್ಯ ಗೌಡ ಹಾಗೂ ಭಾನುವಾರ ಅರುಣ್ ಸಾಗರ್ ಬಿಗ್ ಬಾಸ್ ಮನೆಯಿಂದ ಎಲಿಮಿನೇಟ್ ಆಗಿ ಹೊರ ನಡೆದಿದ್ದರು ಆದರೆ ಇದೀಗ ಮಿಡ್ ವೀಕ್ ಎಲಿಮಿನೇಷನ್ ಕೂಡ ನಡೆದು ಹೋಗಿದೆ.

ಸ್ವತಹ ಕಲರ್ಸ್ ಕನ್ನಡ ವಾಹಿನಿಯಮಿಟ್ ಎಲಿಮಿನೇಷನ್ ನ ಬಗ್ಗೆ ಸೋಶಿಯಲ್ ಮೀಡಿಯಾದಲ್ಲಿ ಪ್ರೊಮೋ ಒಂದನ್ನು ಅಪ್ಲೋಡ್ ಮಾಡಿದ್ದು ಕ್ರೀಮ್ ರೀತಿಯ ವಸ್ತುವಿನ ಮೇಲೆ ಆರು ಜನ ಸ್ಪರ್ಧಿಗಳು ನಿಲ್ಲಬೇಕು ಕ್ರೇನ್ ಕೆಳಗೆ ನಿಂದ ಮೇಲೆ ಹೋಗುತ್ತದೆ ಆಗ ಯಾವ ಸ್ಪರ್ಧಿ ಕಾಣುವುದಿಲ್ಲ ಅವರು ಎಲಿಮಿನೇಟ್ ಆಗಿದ್ದಾರೆ ಎಂದು ಅರ್ಥ ಮಿಡ್ ಎಲಿಮಿನೇಷನ್ ಎಲಿಮಿನೇಷನ್ ನಲ್ಲಿ ಆರ್ಯವರ್ಧನ್ ಗುರೂಜಿ ಕೊನೆಯ ಸಮಯದಲ್ಲಿ 70000 ಸಂಭಾವನೆಯನ್ನು ಪಡೆದುಕೊಂಡಿದ್ದಾರೆ.

ಸದ್ಯಕ್ಕೆ ಬಿಗ್ ಬಾಸ್ ಮನೆಯಲ್ಲಿ ಆರ್ಯವರ್ಧನ್ ಗುರೂಜಿ, ರೂಪೇಶ್ ಶೆಟ್ಟಿ, ರಾಕೇಶ್ ಅಡಿಗ, ರೂಪೇಶ್ ರಾಜಣ್ಣ, ದಿವ್ಯ ಉರುಡುಗ ಹಾಗೂ ದೀಪಿಕಾ ದಾಸ್ ಇದ್ದರು ಆದರೆ ಈ ಆರು ಜನರಲ್ಲಿ ಆರ್ಯವರ್ಧನ್ ಬಿಗ್ ಬಾಸ್ ಮನೆಯಿಂದ ಎಲಿಮಿನೇಟ್ ಆಗಿ ಹೊರಬಂದಿದ್ದಾರೆ. ಕಳೆದ ವಾರ ಕಿಚ್ಚ ಸುದೀಪ್ ಗುರೂಜಿ ರವರಿಗೆ ಮೆಚ್ಚುಗೆಯ ಚಪ್ಪಾಳೆಯನ್ನು ತಟ್ಟಿದ್ದರು ಇವರು ಫಿನಾಲೆಗೆ ಬರುತ್ತಾರೆ ಎಂದು ಕೂಡ ಎಲ್ಲರೂ ಅಂದುಕೊಂಡಿದ್ದರು ಆದರೆ ಅದು ಸುಳ್ಳಾಗಿದ್ದು ಆರ್ಯವರ್ಧನ್ ಗುರೂಜಿ ಬಿಗ್ ಬಾಸ್ ಮನೆಯಿಂದ ಎಲಿಮಿನೇಟ್ ಆಗಿ ಹೊರ ಹೋಗಿದ್ದಾರೆ.