ಕತ್ರಿನಾ‌-ವಿಕ್ಕಿ ಕೌಶಲ್ ಹೊಸ‌ಮನೆಯ ಬಾಡಿಗೆ ಕೇಳಿ ಶಾಕ್ ಆದವರೇ ಹೆಚ್ಚು

ಮುಂಬೈನ ಜುಹುವಿನಲ್ಲಿ ಬಾಡಿಗೆ ಮನೆ ಪಡೆದಿರೋ ಈ ಜೋಡಿ ತಮ್ಮ ಮನೆಗಾಗಿ ಭಾರಿ ಮೊತ್ತದ ಬಾಡಿಗೆಯನ್ನ ಪಾವತಿಸಿದ್ದಾರಂತೆ…ಹೌದಯ ಅತಿ ಐಷಾರಾಮಿ ಕಟ್ಟಡವನ್ನು 5 ವರ್ಷಗಳ ಅವಧಿಗೆ ವಿಕ್ಕಿ ಬಾಡಿಗೆಗೆ ಪಡೆದಿದ್ದಾರೆ. ವಿಕ್ಕಿ ಕೌಶಲ್ ಮನೆಗಾಗಿ 1.75 ಕೋಟಿ ರೂ ಅಡ್ವಾನ್ಸ್ ನೀಡಿದ್ದು ತಿಂಗಳಿಗೆ 8 ಲಕ್ಷ.ಬಾಡಿಗೆ ಪಾವತಿ ಮಾಡುತ್ತಿದ್ದಾರಂತೆ.

 

 

ಬಾಲಿವುಡ್ ನ ಬ್ಯೂಟಿ ಕತ್ರಿನಾ ಹಾಗೂ ವಿಕ್ಕಿ ಕೌಶಲ್ ಕಳೆದ ತಿಂಗಳಷ್ಟೇ ರಾಜಸ್ಥಾನದಲ್ಲಿ ವಿವಾಹ ಜೀವನಕ್ಕೆ ಕಾಲಿಟ್ಟರು…ಸದ್ಯ ಬಾಲಿವುಡ್ ಸ್ಟಾರ್ ದಂಪತಿ ಲೀಸ್ಟ್ ಸೇರಿರೋ ಇವರಿಬ್ನರು ಮದುವೆಯಾದ ವಾರದ ನಂತರ ಹೊಸ ಮನೆಗೆ ಗೃಹ ಪ್ರವೇಶ ಮಾಡಿದ್ದಾರೆ…ಈಗಾಗಲೇ ಮನೆಯ ಫೋಟೋಗಳನ್ನ ನಟಿ ಕತ್ರಿನಾ ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದರು.

 

 

View this post on Instagram

 

A post shared by Katrina Kaif (@katrinakaif)

 

ಇನ್ನು ಇತ್ತೀಚೆಗೆ ಕತ್ರಿನಾ ಅದೇ ಮನೆಯಲ್ಲಿ ಡೆನಿಮ್ ಶಾರ್ಟ್ ಧರಿಸಿ ಮಂಗಳ ಸೂತ್ರ ಹಾಕಿಕೊಂಡು ಕ್ಯಾಮರಾ ಗೆ ಫೋಸ್ ಕೊಟ್ಟಿದ್ದ ಫೋಟೋವನ್ನ ಶೇರ್ ಮಾಡಿ ಹೋಂ ಸ್ವೀಟ್ ಹೋಂ ಎಂದು ಕ್ಯಾಪ್ಷನ್ ಕೊಟ್ಟಿದ್ದರು ಈ ಫೋಟೋ ಅವ್ರ ಅಭಿಮಾನಿಗಳ ಮನಸ್ಸು ಗೆದ್ದಿತ್ತು.