ರಿವೀಲ್ ಆಯ್ತು ಸಾಹೋ ನಿರ್ದೇಶಕ ಹಾಗೂ ಸುದೀಪ್ ಸಿನಿಮಾ ಟೈಟಲ್
ಟಾಲಿವುಡ್ ನಲ್ಲಿ ಭಾರಿ ಸದ್ದು ಮಾಡಿದ್ದ ಪ್ರಭಾಸ್ ನಟನೆಯ ಸಿನಿಮಾದ ನಿರ್ದೇಶಕ ಸುಜಿತ್ ಕನ್ನಡದ ಕಿಚ್ಚ ಸುದೀಪ್ ಗೆ ಆಕ್ಷನ್ ಕಟ್ ಹೇಳುತ್ತಾರೆ ಸುದ್ದಿ ಎಲ್ಲೆಡೆ ವೈರಲ್ ಆಗಿತ್ತು… ಈ ವಿಚಾರವನ್ನ ಸುದೀಪ್ ಕೂಡ ಸ್ಪಷ್ಟ ಪಡಿಸಿದ್ದರು ..
ಸುಜೀತ್ ಒಳ್ಳೆ ನಿರ್ದೇಶಕ ಸಿನಿಮಾ ಮಾಡುವ ಬಗ್ಗೆ ಮಾತುಕತೆ ನಡೆಯುತ್ತಿದೆ ಶೀಘ್ರದಲ್ಲೇ ಈ ಬಗ್ಗೆ ಸಿಹಿ ಸುದ್ದಿ ನೀಡುತ್ತೇವೆ ಎಂದು ಸುದೀಪ್ ತಿಳಿಸಿದ್ದರು… ಈಗ ಈ ಸುದ್ದಿ ಪಕ್ಕಾ ಆಗಿದ್ದು ಸುಜಿತ್ ನಿರ್ದೇಶನದ ಸುದೀಪ್ ನಟನೆಯ ಸಿನಿಮಾದ ಟೈಟಲ್ ಹಾಗೂ ಪೋಸ್ಟರ್ ರಿವೀಲ್ ಆಗಿದೆ…ನಿರ್ದೇಶಕ ಸುಜಿತ್ ಫ್ಯಾನ್ಸ್ ಅವರ ಟ್ವಿಟ್ಟರ್ ಮೂಲಕ ಈ ಸುದ್ದಿ ಅನೌನ್ಸ್ ಮಾಡಿದ್ದಾರೆ.
#KicchaSudeep About #Saaho Director #Sujeeth !!!
We are on discussions, He is a very interesting boy with lot of energy. We have locked the intention of doing movie together, We hope it happens !!! pic.twitter.com/Bee3WxdLEZ
— The Proud South Indian (@proudsouthINDn) December 20, 2021
ಸಿನಿಮಾಗೆ ನಮಸ್ತೆ ಘೋಸ್ಟ್ ಎಂದು ಹೆಸರಿಡಲಾಗಿದ್ದು ತೆಲುಗು ಮಾತ್ರವಲ್ಲದೆ ಕನ್ನಡದಲ್ಲಿಯೂ ಸಿನಿಮಾ ನಿರ್ಮಾಣವಾಗಲಿದೆ…ಕನ್ನಡ ಹಾಗೂ ತೆಲುಗು 2ಪೋಸ್ಟರ್ ಗಳನ್ನು ರಿಲೀಸ್ ಮಾಡುವ ಮೂಲಕ ಕಿಚ್ಚನ ಅಭಿಮಾನಿಗಳಿಗೆ ಸಿಹಿ ಸುದ್ದಿ ನೀಡಿದ್ದಾರೆ …ಆದರೆ ಈ ಬಗ್ಗೆ ಕಿಚ್ಚ ಸುದೀಪ್ ಆಗಲಿ ನಿರ್ದೇಶಕರಾಗಲಿ ಎಲ್ಲಿಯೂ ಅಧಿಕೃತ ಹೇಳಿಕೆ ನೀಡಿಲ್ಲ.